ಕೇಂದ್ರದ ನಂತರ ರಾಜ್ಯ ಸರ್ಕಾರದಿಂದ ಅನ್ ಲಾಕ್ 3 ಮಾರ್ಗಸೂಚಿ ಬಿಡುಗಡೆ/ ಶಾಲಾ ಕಾಲೇಜು ಓಪನ್ ಇಲ್ಲ/ ಜಿಮ್ , ಯೋಗ ಕೇಂದ್ರ ತೆರೆಯಲು ಅವಕಾಶ/ ಕೇಂದ್ರ ಮಾರ್ಗಸೂಚಿ ಯಥಾವತ್ ಪಾಲಿಸಿದ ಸರ್ಕಾರ

ಬೆಂಗಳೂರು(ಜು. 30) ಕೇಂದ್ರ ಸರ್ಕಾರದ ನಂತರ ಕರ್ನಾಟಕ ರಾಜ್ಯ ಸರ್ಕಾರ ಅನ್ ಲಾಕ್ 3 ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೇಂದ್ರದ ಮಾರ್ಗಸೂಚಿ ಯಥಾವತ್ ಪಾಲನೆ ಮಾಡಲಾಗಿದೆ.

ಆಗಸ್ಟ್ 5 ರಿಂದ ನೈಟ್ ಕರ್ಪ್ಯೂ ಇರುವುದಿಲ್ಲ. ಯೋಗ ಮತ್ತು ಜಿಮ್ ಗಳು ಓಪನ್ ಆಗಲಿವೆ. ಅಂತರ್ ರಾಜ್ಯ ಓಡಾಟದ ನಿಯಮವನ್ನು ತೆಗೆದು ಹಾಕಲಾಗಿದೆ. ಸಂಡೇ ಲಾಕ್ ಡೌನ್ ತೆಗೆದು ಹಾಕುವ ಬಗ್ಗೆ ಸ್ಪಷ್ಟನೆ ನೀಡಲಾಗಿಲ್ಲ. ಬಿಬಿಎಂಪಿ ಮತ್ತು ಪೊಲೀಸ್ ಕಮಿಷನರ್ ಗೆ ನಿಯಮಾವಳಿ ಅನುಷ್ಠಾನ ಮಾಡಲು ಸೂಚನೆ ನೀಡಲಾಗಿದೆ.

ಕೇಂದ್ರದ ಹೊಸ ಶಿಕ್ಷಣ ನೀತಿ ಪ್ರಮುಖ ಅಂಶಗಳು, ಏನೆಲ್ಲಾ ಬದಲಾವಣೆ

ರಾಜ್ಯ ಸರ್ಕಾರ ಅನ್ ಲಾಕ್ 3 ಮಾರ್ಗಸೂಚಿ ಆಗಸ್ಟ್ 5 ರಿಂದ ಜಾರಿ

* ಯೋಗ ಕೇಂದ್ರ, ಜಿಮ್ ತೆರೆಯಲು ಅವಕಾಶ(ಕಂಟೈನ್ ಮೆಂಟ್ ಝೋನ್ ಹೊರತುಪಡಿಸಿ) 

* ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ವಾತಂತ್ರ್ಯ ದಿನಾಚರಣೆ

* ಶಾಲಾ ಕಾಲೇಜುಗಳು ಆಗಸ್ಟ್ ಅಂತ್ಯದವರೆಗೆ ತೆರೆಯಲ್ಲ

* ಕಂಟೈನ್ ಮೆಂಟ್ ಝೋನ್ ನಲ್ಲಿ ಆಗಸ್ಟ್ 31 ರವರೆಗೂ ಕಠಿಣ ಲಾಕ್ ಡೌನ್ ಮುಂದುವರಿಯಲಿದೆ.

* ವಂದೇ ಭಾರತ್ ಮಿಶನ್ ಅಡಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ಯಾನಕ್ಕೆ ಸೀಮಿತ ಅವಕಾಶ(ಕೇಂದ್ರ ಸರ್ಕಾರದ ನಿಯಮಾವಳಿಯಂತೆ) 

* ಮೆಟ್ರೋ, ಸಿನಿಮಾ ಥಿಯೇಟರ್, ಎಂಟರ್ ಟೈನ್ ಮೆಂಟ್ ಪಾರ್ಕ್, ಬಾರ್, ಪಾರ್ಕ್, ಅಡಿಟೋರಿಯಂ, ಅಸೆಂಬ್ಲಿ ಹಾಲ್ ಸದ್ಯಕ್ಕೆ ಇಲ್ಲ(ದಿನಾಂಕವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು) 

* ಸಾಮಾಜಿಕ ಮತ್ತು ರಾಜಕೀಯ ಸಮಾವೇಶಗಳಿಗೆ ಅವಕಾಶ ಇಲ್ಲ

* ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯ

* ಬೀದಿ ಬೀದಿಗಳಲ್ಲಿ ಗಣೇಶ ಹಬ್ಬ ಆಚರಣೆ ಇಲ್ಲ ಎಂದು ಮೊದಲೇ ಹೇಳಲಾಗಿತ್ತು. 

"