Asianet Suvarna News Asianet Suvarna News

ಮೈಸೂರು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ಕೆಎಸ್ಆರ್‌ಟಿಸಿ

* ಮೈಸೂರು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ಕೆಎಸ್ಆರ್‌ಟಿಸಿ
* ಮೈಸೂರಿನಲ್ಲಿ ಬಸ್ ಸೇವೆ ಆರಂಭಿಸುವಂತೆ ರಾಜ್ಯ ಸರ್ಕಾರ ಸೂಚನೆ
* ಕೋವಿಡ್ ಪ್ರಕರಣಗಳು ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಆದೇಶ ಹೊರಡಿಸಿದ ಸರ್ಕಾರ

Karnataka govt Gives Green Signal TO KSRTC bus operate In Mysuru District From June 28th rbj
Author
Bengaluru, First Published Jun 26, 2021, 6:43 PM IST

ಮೈಸೂರು, (ಜೂನ್.26): ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಅಂದ್ರೆ ಜೂನ್ 28ರಿಂದ ಮೈಸೂರಿನಲ್ಲಿ ಬಸ್ ಸೇವೆ ಆರಂಭಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. 

ಈ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ಸಂಚಾರ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು,  ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗಗಳಿಂದ ಸಾರಿಗೆ ಸೇವೆ ಆರಂಭಿಸಲು ಸರ್ಕಾರ ಸೂಚಿಸಿದೆ. ಹೀಗಾಗಿ ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಕೆಎಸ್​ಆರ್​ಟಿಸಿ ಬಸ್ ಸಂಚಾರ ಆರಂಭವಾಗಲಿದೆ.

ವೀಕೆಂಡ್ ಕರ್ಫ್ಯೂ: ಬಸ್ ಸಂಚಾರ ಇರುತ್ತೋ? ಇಲ್ವೋ? ಗೊಂದಲಗಳಿಗೆ ತೆರೆ ಎಳೆದ KSRTC

ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳಿಗೆ ಕೊವಿಡ್ ಪರೀಕ್ಷೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೂಚನೆ ನೀಡಲಾಗಿದೆ.

 ಕಾರ್ಯಾಚರಣೆಗೆ ನಿಯೋಜಿಸುವ ಎಲ್ಲಾ ವಾಹನಗಳನ್ನು ಮಾರ್ಗಕ್ಕೆ ನಿಯೋಜಿಸುವ ಮುನ್ನ ಹಾಗೂ ಮಾರ್ಗದಿಂದ ಹಿಂತಿರುಗಿದ ತಕ್ಷಣ ಸ್ಯಾನಿಟೈಸ್ ಮಾಡಲು ತಿಳಿಸಲಾಗಿದ್ದು, ಆಗಾಗ್ಗೆ ಕೈಗಳನ್ನು ಸ್ವಚ್ಚಗೊಳಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಬಸ್‌ಗಳಲ್ಲಿ ಸೀಟಿನ ಶೇಕಡಾ 50 ರಷ್ಟು ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ ಎಂದು ಕೆಎಸ್​ಆರ್​ಟಿಸಿ ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Follow Us:
Download App:
  • android
  • ios