ಬೆಂಗಳೂರು (ಏ.08):  ಮುಂಬರುವ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ಭಾರೀ ಸಂಖ್ಯೆಯಲ್ಲಿ ಜನರು ಪ್ರಯಾಣಿಸುವ ಸಾಧ್ಯತೆಯಿರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಏ.9 ಮತ್ತು 10ರಂದು ರಾಜ್ಯದ ವಿವಿಧೆಡೆಗೆ 9 ವಿಶೇಷ ರೈಲು ಕಾರ್ಯಾಚರಿಸುವಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್‌ ಅವರು ನೈಋುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಗಜಾನನ ಮಲ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಮುಷ್ಕರ ಆರಂಭಿಸಿರುವುದರಿಂದ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗುತ್ತದೆ. 

KSRTC ಮುಷ್ಕರ, ರೈಲ್ವೆ ಇಲಾಖೆ ಮೊರೆ ಹೋದ ಸರ್ಕಾರ, ಈ ರೂಟ್‌ನಲ್ಲಿ ಸ್ಪೆಶಲ್ ಟ್ರೇನ್! ..

ಹೀಗಾಗಿ ಈ ಎರಡೂ ದಿನ ಬೆಂಗಳೂರು-ಬೆಳಗಾವಿ, ಬೆಂಗಳೂರು-ಕಲಬುರಗಿ, ಬೆಂಗಳೂರು- ಕಾರವಾರಕ್ಕೆ ತಲಾ ಎರಡು ವಿಶೇಷ ರೈಲು ಹಾಗೂ ಬೆಂಗಳೂರು- ಬೀದರ್‌, ಬೆಂಗಳೂರು-ವಿಜಯಪುರ ಮತ್ತು ಬೆಂಗಳೂರು-ಶಿವಮೊಗ್ಗಕ್ಕೆ ತಲಾ ಒಂದು ವಿಶೇಷ ರೈಲು ಕಾರ್ಯಾಚರಣೆ ಮಾಡಬೇಕು. ಅಂತೆಯೇ ಬೆಂಗಳೂರು-ಮೈಸೂರು-ಬೆಂಗಳೂರು ಸೇರಿದಂತೆ ಅಂತರ್‌ ನಗರ ರೈಲುಗಳ ಟ್ರಿಪ್‌ ಹೆಚ್ಚಳ ಮಾಡುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ.