ಬೆಂಗಳೂರು(ಜೂ.  21)  ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಆರ್ಭಟ  ನಿಯಂತ್ರಣಕ್ಕೆ ಸರ್ಕಾರ ಒಂದೆಲ್ಲಾ ಒಂದು ಕ್ರಮ ತೆಗೆದುಕೊಳ್ಳುತ್ತಲೇ ಇದೆ.  ಮಾಸ್ ಟ್ರೀಟ್ ಮೆಂಟ್ ಕೊಡಲು ಸಿದ್ಧತೆ ಮಾಡಿಕೊಂಡಿದ್ದು  ಬೆಂಗಳೂರಿನ ಸ್ಟೇಡಿಯಂಗಳನ್ನು ಕೋವಿಡ್ ಸೆಂಟರ್ ಗಳನ್ನಾಗಿ ಪರಿವರ್ತನೆ ಮಾಡಲಾಗಿದೆ. 

ಸ್ಟೇಡಿಯಂಗಳ  ಜೊತೆ ಕನಕಪುರ ರಸ್ತೆಯಲ್ಲಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ ಆಶ್ರಮ ಬಳಕೆಗೂ ಸೂಚನೆ ನೀಡಲಾಗಿದೆ.  ಗುಣಲಕ್ಷಣ ಇಲ್ಲದ ರೋಗಿಗಳ ಚಿಕಿತ್ಸೆಗಾಗಿ ಆಡಿಟೋರಿಯಂ ಮತ್ತು ಆಶ್ರಮ ಬಳಕೆ ಮಾಡಿಕೊಳ್ಳಲಾಗುತ್ತದೆ.

ಡೇಂಜರ್ ಝೋನ್; ಬೆಂಗಳೂರಿನ ಈ ಏರಿಯಾಗಳ ಕಡೆ ಕಾಲಿಡಬೇಡಿ

 ಬೆಂಗಳೂರಿನ ವಿಕ್ಟೋರಿಯಾ ಮತ್ತು ರಾಜೀವ್ ಗಾಂಧಿ, ಬೌರಿಂಗ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಈ ನಿರ್ಧಾರ ಮಾಡಲಾಗಿದೆ.

ರವಿಶಂಕರ್ ಗುರೂಜಿ ಆಶ್ರಮ, ಕೋರಮಂಗಲ ಮತ್ತು ಕಂಠೀರವ ಒಳಾಂಗಣ ಕ್ರೀಡಾಂಗಂಣಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾಡಿಕೊಳ್ಳಲಾಗಿದೆ.