ಲಾಕ್‌ಡೌನ್ ನಡುವೆ ಮುಸ್ಲಿಮರು ರಂಜಾನ್‌ ಈ ರೀತಿ ಆಚರಿಸಿದ್ರೆ ಚೆನ್ನ...!

ಕೊರೋನಾ ಲಾಕ್‌ಡೌನ್ ಬಿಸಿ ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ರಂಜಾನ್‌ಗೂ ತಟ್ಟಿದೆ. ತಿಂಗಳ ಉಪವಾಸ ಮತ್ತು ತಾರಾವೀಹ್ ಕುರಿತು ವಿಶೇಷ ಮಾರ್ಗದರ್ಶನ ಇಲ್ಲಿದೆ.
Some instructions To Muslim community Over  Celebrate ramzan during Lock Down
ಬೆಂಗಳೂರು, (ಏ.15): ಕೊರೋನಾ ವೈರಸ್ ಬಿಸಿ ರಂಜಾನ್ ಹಬ್ಬಕ್ಕೂ ತಟ್ಟಿದ್ದು, ಮುಸ್ಲಿಂ ಸಮುದಾಯದವರು ಕಡ್ಡಾಯವಾಗಿ ಲಾಕ್ ಡೌನ್ ಪಾಲಿಸುವಂತೆ ಧಾರ್ಮಿಕ ಮುಖಂಡರು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೇ 3 ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನತೆಯಲ್ಲಿ ಧಾರ್ಮಿಕ ಮುಖಂಡರು ಮನವಿ ಮಾಡಿದ್ದು, ಮನೆಯಲ್ಲಿಯೇ ರಂಜಾನ್ ಆಚರಿಸಲು ಹೇಳಿದ್ದಾರೆ.

ACಯಿಂದ ಕೊರೋನಾ ಹರಡದಂತೆ ತಡೆಯಲು ಇದೆ ಮಾರ್ಗ, ಇಲ್ಲಿದೆ ಸಂಶೋಧಕರ ಟಿಪ್ಸ್!

ಕ್ಯಾಲೆಂಡರ್ ಪ್ರಕಾರ ಇದೇ ಏಪ್ರಿಲ್ 23ರಿಂದ ಮೇ 24ರ ವರಗಿನ ಈ ಪವಿತ್ರ ಕಡ್ಡಾಯ ನಮಾಜ್‌ಗಳನ್ನು ಮಸೀದಿಗೆ ಹೋಗದೇ ಮನೆಯಲ್ಲಿಯೇ ಮಾಡಬೇಕು. ಒದರ ಜತೆಗೆ ಕೆಲವು ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಮುದಾಯದ ಜನರಲ್ಲಿ ಕೋರಲಾಗಿದೆ.

ಹಿಂದೂಗಳು ಸಹ ಯುಗಾದಿ ಹಬ್ಬವನ್ನು ಆಚರಿಸಲಿಲ್ಲ. ಜಾತ್ರೆ-ಉತ್ಸವಗಳನ್ನು ರದ್ದು ಮಾಡಿದ್ದಾರೆ. ಅದರಂತೆ ಮುಸ್ಲಿಂ ಬಾಂಧವರೂ ಸಹ ಪವಿತ್ರಾ ರಂಜಾನ್‌ ಹಬ್ಬವನ್ನು ಆಚರಿಸಿ ಆದ್ರೆ ಅದು ಮನೆಗೆ ಸೀಮಿತವಾಗಿರಲಿ.

ಪ್ರಾರ್ಥನೆಗೆಂದು ಮಸೀದಿಗೆ ಬರಬೇಡಿ, ಮನೆಯಲ್ಲಿಯೇ ರಂಜಾನ್ ಆಚರಿಸಿ ಇಫ್ತಾರ್ ಕೂಟ ಆಯೋಜಿಸಿವುದು ಬೇಡ, ಕಡ್ಡಾಯವಾಗಿ ಲಾಕ್ ಡೌನ್ ಪಾಲಿಸಿ , ಮನೆಯಲ್ಲಿಯೇ ಕುಟುಂಬದವರ ಜೊತೆ ರಂಜಾನ್ ಆಚರಿಸಿ ಅಂತೆಲ್ಲಾ ನಿರ್ದೇಶನಗಳನ್ನು ನೀಡಲಾಗಿದೆ.

ನಿರ್ದೇಶನಗಳು
* ಅನವಶ್ಯಕ ವಸ್ತುಗಳ ಖರೀದಿ ವಿಷಯದಲ್ಲಿ ಸರ್ಕಾರ ವಿಧಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು,
* ಮನೆಗಳಲ್ಲಾಗಲಿ ಬೇರೆಲ್ಲೇ ಆಗಲಿ ಖತಮ್ ಎ ಕುರ್‌ಆನ್ ಮಾಡುವ ಕಾರ್ಯಕ್ರವನ್ನು ಏರ್ಪಡಿಸಬಾರದು.
* ಇಫ್ತಾರ್ ಕೂಟ ಏರ್ಪಡಿಸಬಾರದು.
* ಪ್ರಾರ್ಥನೆಗೆಂದು ಮಸೀದಿಗೆ ಬರಬೇಡಿ
*  ನಮಾಜ್‌ಗಳನ್ನು ಮಸೀದಿಗೆ ಹೋಗದೇ ಮನೆಯಲ್ಲಿಯೇ ಮಾಡಬೇಕು.
* ಸಮಾಜದ ಬಡವರು, ನಿರ್ಗತಿಕರ ಬಗ್ಗೆ ಗಮನವಿರಲಿ. ಸಾಧ್ಯವಾದಷ್ಟು ನೆರವು ನೀಡಬೇಕು.
* ಮಾನವ ಸಮಾಜದ ಹಿತಕ್ಕಾಗಿ ಪ್ರಾರ್ಥೆಗಳನ್ನು ಸಲ್ಲಿಸಿ.
* ಅಪ್ರಬುದ್ಧ ಮಕ್ಕಳು ಅನುಚಿತ ಚುಟುವಟಿಕೆಗಳಲ್ಲಿ ಭಾಗವಹಿಸದಂತೆ ಪೋಷರು ಎಚ್ಚರ ವಹಿಸಬೇಕು.
* ಹದಿಹರೆಯದ ಯುವಕರು ಬೈಕುಗಳಲ್ಲಿ ತಿರುಗಾಡುವುದರಿಂದ ದೂರವಿರಬೇಕು.
* ತರಾವೀಹ್ ನಮಾಜ್ ಕೂಡ ಮನೆಯೊಳಗೇ ಸಲ್ಲಿಸಬೇಕು. ನಮಾಜ್‌ಗಾಗಿ ನೆರೆಹೊರೆಯವರನ್ನು ಮನೆಯಲ್ಲಿ ಸೇರಿಸಿಕೊಳ್ಳಬಾರದು.
* ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ತಿರುಗಾಡಬಾರದ. ಜನರನ್ನು ಬೆಳಗ್ಗೆ ಎಬ್ಬಿಸಲು ಧ್ವನಿವರ್ಧಕಗಳನ್ನು ಬಳಸಬಾರದು.
Latest Videos
Follow Us:
Download App:
  • android
  • ios