ಮಳೆ ಪರಿಹಾರ ಕೊಡೋದಕ್ಕೆ ರಾಜ್ಯ ಸರ್ಕಾರ ಮುಂದಾಗ್ತಿಲ್ಲ: ಶಾಸಕ ಎಚ್ ಕೆ ಪಾಟೀಲ ಆರೋಪ

ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭೀಕರ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ರೆ ರಾಜ್ಯ ಸರಕಾರ ಮಾತ್ರ ಪರಿಹಾರ ಕೊಡೋದಕ್ಕೆ ಮುಂದಾಗ್ತಿಲ್ಲ ಅಂತ ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಹಿರಿಯ ಶಾಸಕ ಎಚ್ ಕೆ ಪಾಟೀಲ ಅಸಮಾಧಾನ ಹೊರಹಾಕಿದರು.

Karnataka government not ready to provide flood relief fund mla hk patil allegations

ಗದಗ (ಆ.7): ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭೀಕರ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಕೃಷಿಕ ಮತ್ತೊಮ್ಮೆ ಭಾರೀ ತೊಂದ್ರೆ ಅನುಭವಿಸುತ್ತಿದ್ದಾನೆ. ಆದ್ರೆ ರಾಜ್ಯ ಸರಕಾರ ಮಾತ್ರ ಪರಿಹಾರ ಕೊಡೋದಕ್ಕೆ ಮುಂದಾಗ್ತಿಲ್ಲ ಅಂತ ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಹಿರಿಯ ಶಾಸಕ ಎಚ್ ಕೆ ಪಾಟೀಲ ಅಸಮಾಧಾನ ಹೊರಹಾಕಿದರು. ಗದಗನಲ್ಲಿ ಮಾತನಾಡಿದ ಅವರು, ನಿರಂತರ ಮಳೆಯಿಂದಾಗಿ ಬೆಳೆದು ನಿಂತ ಬೆಳೆ ನೆಲ ಕಚ್ಚಿದೆ.. ಫಸಲು ಕೈ ಸೇರುವ ಲಕ್ಷಣ ಇಲ್ಲ. ಮಳೆ ನಿಲ್ಲುವ ಲಕ್ಷಣವೂ ಇಲ್ಲ. ಪೀಕು ಹಾಳಾಗಿವೆ. ಹೀಗಾಗಿ ಬೆಳೆ ಪರಿಹಾರವನ್ನ ತಕ್ಷಣವೇ ಬಿಡುಗಡೆ ಮಾಡ್ಬೇಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ ಅಂತ ಒತ್ತಾಯ ಮಾಡಿದರು. ಇನ್ನು ಗದಗ ನಗರದ ಬೆಟಗೇರಿ ಭಾಗದಲ್ಲಿ ನಿರಂತರವಾಗಿ ಮಳೆ ಸುರಿದು ಹಲವು ಮನೆಗಳು ಕುಸಿದು ಬಿದ್ದಿವೆ. ಗೋಡೆ ಕುಸಿದಿವೆ. ಆದ್ರೆ ಹತ್ತು ದಿನದ ಹಿಂದೆ ಮಳೆಯಿಂದಾಗಿ ಹಾನಿಗೊಳಗಾದವರಿಗೆ ಇನ್ನೂ ಹಣ ಮುಟ್ಟಿಲ್ಲ. ಬಿದ್ದ ಮನೆಗಳಿಗೆ ಪರಿಹಾರ ನೀಡದೇ ಸರ್ಕಾರ ಗಪ್ ಚುಪ್ ಆಗಿದೆ.. ಹೀಗಾಗಿ ತಕ್ಷಣಕ್ಕೆ ಪರಿಹಾರ ಬಿಡುಗಡೆ ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದರು.

ಜೊತೆಗೆ ಮಳೆಯಿಂದಾಗಿ ರಾಜ್ಯಾದ್ಯಂತ ರಸ್ತೆ ಹದಗೆಟ್ಟು ಹೋಗಿವೆ.. ‌ಮೊದಲು ರಸ್ತೆ ರಿಪೇರಿ ಮಾಡ್ಸಿ. ಗುಂಡಿಯಿಂದಾಗಿ ರಸ್ತೆ ಮೇಲೆ ಸಂಚಾರ ಮಾಡಲು ಆಗ್ತಿಲ್ಲ. ತಕ್ಷಣಕ್ಕೆ ರಸ್ತೆ ರಿಪೇರಿ ಕೆಲಸವನ್ನ ಎಲ್ಲ ಕಡೆಗಳಲ್ಲಿ ಮಾಡಿಸಬೇಕು.. ಹದಗೆಟ್ಡ ರಸ್ತೆಗಳ ಬಗ್ಗೆ ಜನ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಅಂತ ಹೇಳಿದ್ರು. ಇನ್ನು ಗದಗ ನಗರದಲ್ಲೂ ಪಾಟ್ ಹೋಲ್ ಸಮಸ್ಯೆ ಇದೆ. ಅಧಿಕಾರಿಗಳ ಜೊತೆ ಮಾತ್ನಾಡಿದ್ದೇನೆ, ಸೋಮವಾರದಿಂದ ಕೆಲಸ ಆರಂಭವಾಗುತ್ತೆ ಎಂದರು.

ಪುಷ್ಯ ರೌದ್ರಾವತಾರ: ಬೆಂಗಳೂರಿನ ಈ ಲೇಔಟ್‌ಗೆ ತೆರಳಲು ಟ್ರಾಕ್ಟರೇ ಗತಿ

ಸಿದ್ಧರಾಮಯ್ಯನವರಿಗೆ ವಯಸ್ಸು ಎಷ್ಟಾದರು ಇರಲಿ ತಕರಾರು ಯಾಕೆ?
ಇನ್ನು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾದ ಸಿದ್ದರಾಮಯ್ಯನವರ ವಯಸ್ಸಿನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸಿದ್ಧರಾಮಯ್ಯನವರಿಗೆ ವಯಸ್ಸು ಎಷ್ಟಾದರು ಇರಲಿ ತಕರಾರು ಯಾಕೆ  ಅಂತಾ ಪ್ರಶ್ನಿಸಿದ ಹೆಚ್ ಕೆಪಿ, ಸಿದ್ಧರಾಮಯ್ಯನವರೇ ನನಗೆ 75 ವಯಸ್ಸು ಆಗಿದೆ ಅಂತ ಒಪ್ಪಿಕೊಂಡಿದ್ದಾರೆ. ಹುಟ್ಟಿದ್ದ ಡೇಟ್ ನಮ್ಮಪ್ಪ ಅಮ್ಮನಿಗೂ ಗೊತ್ತಿಲ್ಲ ನನಗೂ ಗೊತ್ತಿಲ್ಲ ಟೀಚರ್ ದಾಖಲಿಸಿದ್ದು ಅಂತ ಅವರೇ ಹೇಳಿಕೊಂಡಿದ್ದಾರೆ.  ಅವರ ಮನೆಯಲ್ಲಿಯೂ ಒಪ್ಪಿಕೊಂಡಿದ್ದಾರೆ, ನಾವು ಒಪ್ಪಿಕೊಂಡಿದ್ದೇವೆ. ಅವರ ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ. ಹೀಗಿದ್ರೂ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ ಅಂತ ಆಕ್ರೋಶ ವ್ಯಕ್ತಪಡಿಸಿದರು.

ಮಳೆಗಾಲದ ತುರ್ತುಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಿ: ಕೊಪ್ಪಳ ಜಿಲ್ಲಾಧಿಕಾರಿ ಸೂಚನೆ

ಇನ್ನು ಸಿದ್ಧರಾಮೋತ್ಸವ ರಾಷ್ಟ್ರಮಟ್ಟದಲ್ಲಿ ಅಭೂತಪೂರ್ವ ಕಾರ್ಯಕ್ರಮ ಅದಾಗಿತ್ತು. ನಮ್ಮ ಪಕ್ಷಕ್ಕೆ ಇದರಿಂದ ದೊಡ್ಡ ಶಕ್ತಿ ಬಂದಿದೆ. ಈ ಕಾರಣಕ್ಕೆ ಬಹಳ ಜನ ಕಸಿವಿಸಿಗೊಂಡಿದ್ದಾರೆ, ಗಾಬರಿಯಾಗಿದ್ದಾರೆ.. ಅದಕ್ಕೇನೂ ಮಾಡಲಾಗುವುದಿಲ್ಲ ಜನರ ಪ್ರೀತಿಗಾಗಿ ಅಷ್ಟು ದೊಡ್ಡ ಕಾರ್ಯಕ್ರಮ ಆಗಿದೆ. ಅವರಿಗೆ 75 ವಯಸ್ಸು ಪೂರ್ಣಗೊಂಡಿಲ್ಲ ಅಂತ ಹುಡುಕುವುದರಲ್ಲಿ ಏನೂ ಲಾಭ ಇಲ್ಲ ಅವರಿಗೆ 73/74 ವಯಸ್ಸು ಅಂತ ಹುಡುಕಿದರೆ ಏನೂ ಲಾಭ ಇಲ್ಲ ಎಂದ್ರು..

Latest Videos
Follow Us:
Download App:
  • android
  • ios