Asianet Suvarna News Asianet Suvarna News

ಜೀವ ವಿಮೆ ಪ್ರಕರಣ ಆನ್‌ಲೈನ್‌ನಲ್ಲೇ ಇತ್ಯರ್ಥಪಡಿಸಲು ಸರ್ಕಾರ ಸೂಚನೆ

ರಾಜ್ಯ ಸರ್ಕಾರದ ಜೀವ ವಿಮಾ ಇಲಾಖೆಯ ವಿಮಾ ಪಾಲಿಸಿ ಮೇಲೆ ಸಾಲ ಮಂಜೂರಾತಿ ಹಾಗೂ ಅವಧಿ ಪೂರೈಸಿದ ಪ್ರಕರಣಗಳನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಗಣಕೀಕರಣ ಅಥವಾ ದಾಖಲೀಕರಣಗೊಳಿಸುವ ಜೊತೆ ಅವುಗಳನ್ನು ಆನ್‌ಲೈನ್‌ನಲ್ಲೇ ಇತ್ಯರ್ಥಪಡಿಸುಂತೆ ವಿಮಾ ಇಲಾಖೆ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.  

Karnataka Government instructions to settle life insurance case online akb
Author
First Published Oct 10, 2022, 8:04 PM IST | Last Updated Oct 10, 2022, 8:04 PM IST

ಬೆಂಗಳೂರು: ರಾಜ್ಯ ಸರ್ಕಾರದ ಜೀವ ವಿಮಾ ಇಲಾಖೆಯ ವಿಮಾ ಪಾಲಿಸಿ ಮೇಲೆ ಸಾಲ ಮಂಜೂರಾತಿ ಹಾಗೂ ಅವಧಿ ಪೂರೈಸಿದ ಪ್ರಕರಣಗಳನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಗಣಕೀಕರಣ ಅಥವಾ ದಾಖಲೀಕರಣಗೊಳಿಸುವ ಜೊತೆ ಅವುಗಳನ್ನು ಆನ್‌ಲೈನ್‌ನಲ್ಲೇ ಇತ್ಯರ್ಥಪಡಿಸುಂತೆ ವಿಮಾ ಇಲಾಖೆ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.  

ಹೀಗಾಗಿ ಇನ್ನು ಮುಂದೆ ವಿಮೆ ಮೇಲಿನ ಸಾಲ ಮಂಜೂರಾತಿ ಹಾಗೂ ಅವಧಿ ಪೂರೈಕೆ ಪ್ರಕರಣಗಳನ್ನು ಆಫ್ ಲೈನ್ (Off-line)ಮೂಲಕ ಮಾಡುವಂತಿಲ್ಲ ಹಾಗೂ ಭೌತಿಕವಾಗಿ ಕಡತದಲ್ಲಿ ನಿರ್ವಹಿಸುತ್ತಿದ್ದ ಪ್ರಕ್ರಿಯೆಗಳನ್ನು ನಿಲ್ಲಿಸ ತಕ್ಕದ್ದು ಎಂದು ಸೂಚನೆ ನೀಡಲಾಗಿದೆ. ಅಲ್ಲದೇ ಆನ್ ಲೈನ್‌ನಲ್ಲಿ ಸ್ಪಂದಿಸುವ ಮುನ್ನ ಲೆಕ್ಕಾಚಾರದ ಎಲ್ಲಾ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಿದ ನಂತರವೇ ಹಣ ಪಾವತಿಗೆ ತಂತ್ರಾಂಶದಲ್ಲಿ ಸೂಚಿಸಬೇಕು. ಒಂದು ವೇಳೆ ಹೆಚ್ಚುವರಿಯಾಗಿ ಹಣ ಪಾವತಿಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿ ಜವಾಬ್ದಾರನಾಗಿರುತ್ತಾರೆ ಎಂದು ವಿಮಾ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.

Life Insurance Guide: ಮೊದಲ ಬಾರಿ ವಿಮೆ ಖರೀದಿಸುತ್ತಿದ್ದರೆ ಈ ನಿಯಮ ನೆನಪಿಡಿ!

ರಾಜ್ಯ ಸರ್ಕಾರಿ ನೌಕರರು ಕೆಜಿಐಡಿ ಮಾಹಿತಿಯನ್ನು ಆನ್ ಲೈನ್ ಮೂಲಕವೇ ಮಾಡಬಹುದಾಗಿದೆ. ಇದಕ್ಕಾಗಿ ಕರ್ನಾಟಕ ಸರ್ಕಾರ(Karnataka Govt) ವಿಮಾ ಇಲಾಖೆ(KGID), ಸರ್ಕಾರಿ ನೌಕರರಿಗೆ ಆನ್ ಲೈನ್ ವ್ಯವಸ್ಥೆ ಕಲ್ಪಿಸಿದೆ. ಇದಕ್ಕಾಗಿ https://kgidonline.karnataka.gov.in ಎಂಬ ಆನ್ ಲೈನ್ ವೆಬ್ ಸೈಟ್ ತೆರೆಯಲಾಗಿದ್ದು, ರಾಜ್ಯ ಸರ್ಕಾರಿ ನೌಕರರ ಕೆಜಿಐಡಿ ಮಾಹಿತಿ, ಈಗ ಆನ್ ಲೈನ್ ನಲ್ಲೂ ಲಭ್ಯವಾಗಲಿದೆ.

Life Insurance Premium Increase:ಹೊಸ ವರ್ಷದಲ್ಲಿ ಜೀವ ವಿಮಾ ಪ್ರೀಮಿಯಂ ದುಬಾರಿ?

ಈ ಆನ್‌ಲೈನ್ ಪ್ರಕ್ರಿಯೆ ಅಥವಾ ಗಣಕೀಕರಣ ಪ್ರಯೋಗಿಕವಾಗಿ ಬೆಂಗಳೂರು ನಗರ (Bangaluru Urban), ಬೆಳಗಾವಿ (Belgavi), ಚಿಕ್ಕಮಗಳೂರು (Chikkamagaluru), ಧಾರವಾಡ, ಮಂಡ್ಯ (Mandya), ಮೈಸೂರು (Mysuru), ಕೊಡಗು (Coorg) ಹಾಗೂ ಯಾದಗಿರಿಯಲ್ಲಿ (Yadagiri) ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ. ಅಲ್ಲದೇ ಈ ತಂತ್ರಾಂಶವನ್ನು ಉಳಿದ 22 ಜಿಲ್ಲೆಗಳಿಗೂ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಮುಂದೆ ರಾಜ್ಯದ 31 ಜಿಲ್ಲೆಗಳಲ್ಲೂ ಜೀವ ವಿಮಾ ಪಾಲಿಸಿಗಳ ಮೇಲೆ ಸಾಲ ಮಂಜೂರಾತಿ ಮತ್ತು ಅವಧಿ ಪೂರೈಕೆ ಪ್ರಕರಣಗಳನ್ನು ಕಡ್ಡಾಯವಾಗಿ ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ಇತ್ಯರ್ಥಪಡಿಸಲು ಸೂಚಿಸಲಾಗಿದೆ. 
 

Latest Videos
Follow Us:
Download App:
  • android
  • ios