ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಗಿ ಮಾರಿದ ರೈತರ ಬದುಕು ಬೀದಿಗೆ!
ಚಿಕ್ಕಮಗಳೂರು ಉಚಿತ ಯೋಜನೆಗಳಿಗೆ ಅನುದಾನ, ರೈತರಿಗಿಲ್ಲ ಹಣ. ಜಿಲ್ಲೆಯಲ್ಲಿ 51.79 ಕೋಟಿ ಬಾಕಿ ಉಳಿಸಿರುವ ರಾಜ್ಯ ಸರ್ಕಾರ. 23 ಸಾವಿರಕ್ಕೂ ಅಧಿಕ ರೈತರಿಗೆ ರಾಗಿ ಹಣ ಬಾಕಿ. ಹಣ ಸಂದಾಯವಾಗದೆ ಬಿತ್ತನೆ ಬೀಜ ಗೊಬ್ಬರ ಖರೀದಿಗೆ ತೊಂದರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂ.19): ರಾಜ್ಯದಲ್ಲಿ ಉಚಿತ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡಿ, ಕಾರ್ಯಗತವೂ ಆಗುತ್ತಿದೆ. ಆದ್ರೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಮಾತ್ರ ರಾಗಿ ಬೆಳೆದ ಅನ್ನದಾತರನ್ನ ಸಂಪೂರ್ಣ ಕಡೆಗಣಿಸಿದೆ. ಕಾಫಿನಾಡ ನಾಲ್ಕು ತಾಲೂಕಿನ 23.886 ರೈತರು ಸರ್ಕಾರಕ್ಕೆ ಒಟ್ಟು 3.98.911 ಕ್ವಿಂಟಾಲ್ ರಾಗಿ ಕೊಟ್ಟಿದ್ರು. ಹತ್ರತ್ರ 91 ಕೋಟಿಗೂ ಅಧಿಕ. ಆದ್ರೆ, 51 ಕೋಟಿಗೂ ಅಧಿಕ ಹಣವನ್ನ ಬ್ಯಾಲೆನ್ಸ್ ಉಳಿಸಿಕೊಂಡಿದೆ. ರೈತರು ಅತ್ತ ರಾಗಿಯೂ ಇಲ್ಲ. ಇತ್ತ ಹಣವೂ ಇಲ್ಲ. ಮುಂಗಾರು ಆರಂಭವಾಗ್ತಿದೆ. ಕೈಯಲ್ಲಿ ನಯಾಪೈಸೆ ದುಡ್ಡಿಲ್ಲ ಅಂತ ಸರ್ಕಾರದ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ.
ಜಿಲ್ಲೆಯಲ್ಲಿ 23 ಸಾವಿರಕ್ಕೂ ಅಧಿಕ ರೈತರಿಗೆ ರಾಗಿ ಹಣ ಬಾಕಿ:
ಕಾಫಿನಾಡ ಬಯಲುಸೀಮೆ ಪ್ರದೇಶದ ರೈತರಿಂದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯೂ ಉಗ್ರಾಣದ ನಿಗಮದ ಮೂಲಕ 3.98.911 ಕ್ವಿಂಟಾಲ್ ರಾಗಿ ಖರೀದಿಸಿತ್ತು. ಹತ್ರತ್ರ 90 ಕೋಟಿಗೂ ಅಧಿಕ ಹಣ. ಆದ್ರೆ, 51 ಕೋಟಿಯಷ್ಟು ಹಣವನ್ನ ರೈತರಿಗೆ ನೀಡದೆ ಬಾಕಿ ಉಳಿಸಿಕೊಂಡಿದೆ. ಚಿಕ್ಕಮಗಳೂರು ರೈತರಿಗೆ 2.40 ಕೋಟಿ. ತರೀಕೆರೆ ರೈತರಿಗೆ 7.51 ಕೋಟಿ. ಅಜ್ಜಂಪುರ ರೈತರಿಗೆ 10.32 ಕೋಟಿ. ಕಡೂರು ರೈತರಿಗೆ 30 ಕೋಟಿಗೂ ಅಧಿಕ. ಒಟ್ಟು 51 ಕೋಟಿಗೂ ಅಧಿಕ ಹಣ.
ಸ್ನೇಹಿತ ಅಂತ ನಂಬಿದ್ದಕ್ಕೆ ಹೆಣವಾದ ಲಾರಿ ಡ್ರೈವರ್, ಹಾವೇರಿ ಶಾಕಿಂಗ್ ಮರ್ಡರ್ ಕೇಸ್ ಭೇದಿಸಿದ
ಸರ್ಕಾರ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ರೈತರ ಬಳಿ ಮಾಡಿದ ಸಾಲ ಅಂದ್ರು ತಪ್ಪಿಲ್ಲ, ಏಕೆಂದರೆ ಮಾರುಕಟ್ಟೆಯಲ್ಲಿ ರಾಗಿ ಮಾರಿದರೆ ರೈತರಿಗೆ ತಕ್ಷಣ ಹಣ ಸಿಗುತ್ತೆ. ಆದ್ರೆ, ಸ್ವಲ್ಪ ಜಾಸ್ತಿ ಹಣ ಸಿಗಲೆಂದು ಬೆಂಬಲ ಬೆಲೆಗೆ ರಾಗಿ ಮಾರಿ ಈಗ ರಾಗಿಯೂ ಇಲ್ಲ. ಹಣವೂ ಇಲ್ಲ ಎಂಬಂತಾಗಿದೆ. ವರ್ಷಪೂರ್ತಿ ಹಗಲಿರುಳೆನ್ನದೆ ಕಷ್ಟಪಟ್ಟು ದುಡಿದ ರೈತರು ಸರ್ಕಾರಕ್ಕೆ ಬೆಳೆ ಮಾರಿ ಹಣಕ್ಕಾಗಿ ಪರಿತಪ್ಪಿಸುತ್ತಾ ಸರ್ಕಾರ ವಿರುದ್ಧ ರೈತರು ಅಸಮಾಧಾನ ಹೊರಹಾಕ್ತಿದ್ದಾರೆ.
ಹಣ ಸಂದಾಯವಾಗದೆ ಬಿತ್ತನೆ ಬೀಜ ಗೊಬ್ಬರ ಖರೀದಿಗೆ ತೊಂದರೆ:
ಸರ್ಕಾರಕ್ಕೆ ಬೆಂಬಲ ಬೆಲೆಗೆ ರಾಗಿ ಮಾರಿದರೆ ಸ್ವಲ್ಪ ಹಣ ಹೆಚ್ಚು ಸಿಗುತ್ತದೆ ಮುಂಗಾರು ಬಿತ್ತನೆ ಕಾರ್ಯಕ್ಕೆ ಅನುಕೂಲವಾಗುತ್ತದೆ. ಬೇರೆಯವರ ಬಳಿ ಕೈಸಾಲ ಮಾಡೋದು ತಪ್ಪುತ್ತೆ ಎಂದು ಬೆಂಬಲ ಬೆಲೆಗೆ ರಾಗಿ ಮಾರಿದ್ದರು. ಆದರೆ, ರಾಗಿ ಮಾರಾಟ ಮಾಡಿ ಎರಡ್ಮೂರು ತಿಂಗಳು ಕಳೆದರೂ ಕೂಡ ಸರ್ಕಾರ ರೈತರಿಗೆ ಹಣ ನೀಡಿಲ್ಲ. ನಿತ್ಯ ನಮ್ಮ ಕೆಲಸವನ್ನು ಬಿಟ್ಟು ಅಧಿಕಾರಿಗಳು, ಕಚೇರಿಗೆ ಅಲೆಯುವಂತಾಗಿದೆ ಎಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಗನಕ್ಕೇರಿದ ತರಕಾರಿ ಬೆಲೆ ಏರಿಕೆ, ಗ್ರಾಹಕರ ಜೇಬಿಗೆ ಕತ್ತರಿ! ಯಾವುದಕ್ಕೆ ಎಷ್ಟು ಬೆಲೆ
ಕಳೆದ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ನಾ ಮುಂದು ತಾ ಮುಂದು ಅಂತ ಹಗಲಿರುಳು ಸರತಿ ಸಾಲಿನಲ್ಲಿ ವಾಹನ ನಿಲ್ಲಿಸಿಕೊಂಡು ಕಾದು ರಾಗಿ ನೀಡಿದ್ದರು. ರೈತರು ಮುಂಗಾರು ಬಿತ್ತನೆ ವೇಳೆಗೆ ಹಣ ಸಿಗುವ ನೀರಿಕ್ಷೆಯಲ್ಲಿದ್ದರು. ಆದರೆ, ಎರಡು ತಿಂಗಳು ಕಳೆದರೂ ಹಣ ಬಾರದೆ ವ್ಯವಸಾಯ ಮಾಡಲು ಬೇರೆ ದಾರಿ ಇಲ್ಲದೆ ರೈತರು ಮತ್ತೆ ಸಾಲದ ಮೊರೆ ಹೋಗಿದ್ದಾರೆ. ಒಟ್ಟಾರೆ, ಎಲ್ಲಾ ಫ್ರೀ ಕೊಟ್ಟಿರುವ ಸರ್ಕಾರ ಕಷ್ಟಪಡೋ ಅನ್ನದಾತನಿಗೆ ಮೋಸ ಮಾಡ್ತಿದೆ. ಸರ್ಕಾರಕ್ಕೆ ರಾಗಿ ಮಾರಿದ ಜಿಲ್ಲೆಯ ಸುಮಾರು 23 ಸಾವಿರಕ್ಕೂ ಅಧಿಕ ರೈತರು ಹಣಕ್ಕಾಗಿ ಪರಿತಪ್ಪಿಸುತ್ತಿದ್ದಾರೆ. ಕೂಡಲೇ ಸರ್ಕಾರ ಇತ್ತ ಗಮನಹರಿಸಿ ಎಲ್ಲವನ್ನೂ ಫ್ರೀ ಕೊಟ್ಟು ಜನರನ್ನ ರಂಜಿಸ್ತಿರೋ ಸರ್ಕಾರ ಅನ್ನದಾತನಿಗೆ ಮೋಸ ಮಾಡದೆ ಕೂಡಲೇ ಹಣ ನೀಡಬೇಕಿದೆ. ಇಲ್ಲವಾದರೆ, ಸರ್ಕಾರ ಫ್ರೀ ಭಾಗ್ಯಗಳಿಗೆ ಬೆಲೆ ಇಲ್ಲದಂತಾಗೋದು ಗ್ಯಾರಂಟಿ.