ಹಾವೇರಿ [ಆ.10] : ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದೆ. 

ರಾಜ್ಯದ 15 ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, ಹಲವೆಡೆ ಪರಿಹಾರ ಕೇಂದ್ರಗಳನ್ನು ಜನರ ರಕ್ಷಣೆಗೆ ತೆರೆಯಲಾಗಿದೆ. ಹಾವೇರಿಯಲ್ಲಿ ಪರಿಹಾರ ಕೇಂದ್ರದಲ್ಲೇ ವೃದ್ಧರೋರ್ವರು ಇಂದು ಸಾವಿಗೀಡಾಗಿದ್ದಾರೆ. 

ಕಳೆದ ಎಂಟು ದಿನಗಳಿಂದ ಅತಿ ಹೆಚ್ಚಿನ ಮಳೆ ಸುರಿದಿದ್ದು, ತೀವ್ರ ಚಳಿ ಹಾಗೂ  ಅನಾರೋಗ್ಯದಿಂದ ವೃದ್ಧ ಮೃತಪಟ್ಟಿದ್ದಾರೆ. 

 ಹಾವೇರಿ ತಾಲೂಕಿನ ಕೋಣನತಂಬಗಿಯಲ್ಲಿ ಕೇಂದ್ರದಲ್ಲಿ ಮೃತಪಟ್ಟಿದ್ದಾರೆ. ಕೋಣನತಂಬಗಿ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಮೂರು ದಿನದ ಹಿಂದೆ ಜನರ ಸ್ಥಳಾಂತರ ಮಾಡಲಾಗಿತ್ತು. ಗಂಜಿ ಕೇಂದ್ರದಲ್ಲಿ ಗ್ರಾಮಸ್ಥರಿಗೆ ಆಹಾರ ಸಾಮಾಗ್ರಿ ಪೂರೈಕೆ ಮಾಡಲಾಗುತಿತ್ತು. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ