Asianet Suvarna News Asianet Suvarna News

ಹಣ ಬಿಡುಗಡೆ ಮಾಡದ ಅಧಿಕಾರಿಗೆ ಕೆನ್ನೆಗೆ ಭಾರಿಸಿದ ಜಿಲ್ಲಾಧಿಕಾರಿ

ಪ್ರವಾಹ ಸಂದರ್ಭದಲ್ಲಿ ವೆಚ್ಚ ಮಾಡಿದ ಹಣವನ್ನು ಇನ್ನಾದರೂ ಬಿಡುಗಡೆ ಮಾಡದ ಅಧಿಕಾರಿ ವಿರುದ್ಧ ಜಿಲ್ಲಾಧಿಕಾರಿ ಫುಲ್ ಗರಂ ಆಗಿದ್ದು ಕೆನ್ನೆಗೆ ಭಾರಿಸಿದ್ದಾರೆ. 

Karnataka Flood Chikmagalur DC Bagadi Gautam Slap RI
Author
Bengaluru, First Published Jan 23, 2020, 8:44 AM IST
  • Facebook
  • Twitter
  • Whatsapp

ಚಿಕ್ಕಮಗಳೂರು [ಜ.23]: ರಾಜ್ಯದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ವಸ್ತುಗಳನ್ನು ಖರೀದಿ ಮಾಡಿದ್ದರು ದುಡ್ಡು ಕೊಟ್ಟಿಲ್ಲವೆಂದು ವರ್ತಕರು ದೂರಿದ್ದರಿಂದ ಸಿಟ್ಟಿಗೆದ್ದ ಜಿಲ್ಲಾಧಿಕಾರಿ RIಗೆ ಕಪಾಳಮೋಕ್ಷ ಮಾಡಿದ್ದಾರೆ. 

"

ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್,  ಆರ್ ಐ ಅಜ್ಜೇ ಗೌಡ ಕತ್ತಿನ ಪಟ್ಟಿ ಹಿಡಿದು ಎಳೆದು ಕೆನ್ನೆಡೆ ಹೊಡೆದಿದ್ದಾರೆ.

ಸಾರ್ವಜನಿಕರ ಎದುರಲ್ಲೇ ಅಧಿಕಾರಿಗೆ ಜಿಲ್ಲಾಧಿಕಾರಿ ಅಧಿಕಾರಿಯನ್ನು ಹಿಡಿದು ಎಳೆದು  ಕೆನ್ನೆಗೆ ಭಾರಿಸಿದ್ದಾರೆ. 

ಕಾಫಿನಾಡಿನಲ್ಲಿ ಇದೆಂಥಾ ರಗಳೆ? ಭದ್ರಾ ತೀರಕ್ಕೆ ಬಂತು ಭಾರೀ ಗಾತ್ರದ ಮೊಸಳೆ!...

ಕಳೆದ ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಈ ವೇಳೆ ಅಂಗಡಿಯಿಂದ ಖರೀದಿ ಮಾಡಿದ್ದ ರೇಶನ್ ದುಡ್ಡು ಇನ್ನೂ ಕೊಟ್ಟಿಲ್ಲ.  8 ತಿಂಗಳಾದರೂ ಹಣ ನೀಡಿಲ್ಲ ಎಂದು ಹಿರೇಬೈಲಿಗೆ ಭೇಟಿ ನೀಡಿದ್ದ ವೇಳೆ ದೂರಿದ್ದರು. 

ಶೃಂಗೇರಿ ವಿದ್ಯಾರ್ಥಿನಿ ಗ್ಯಾಂಗ್ ರೇಪ್, ಕೊಲೆ : ದೋಷಿಗಳಿಗೆ ಗಲ್ಲು...

ಇದರಿಂದ ಸಿಟ್ಟಿಗೆದ್ದ ಜಿಲ್ಲಾಧಿಕಾರಿ ಬಗಾದಿ ಗೌತಮ್ ಸ್ಥಳದಲ್ಲಿಯೇ ಸಸ್ಪೆಂಡ್ ಮಾಡ್ತೀನಿ ಎಂದು ಹರಿಹಾಯ್ದು ಕೆನ್ನೆಗೆ ಭಾರಿಸಿದ್ದಾರೆ. ಅಲ್ಲದೇ ಈ ವೇಳೆ ಪಿಡಿಒಗಳ ಮೇಲೂ ಅಸಮಾಧಾನ ಹೊರಹಾಕಿದ್ದಾರೆ. 

Follow Us:
Download App:
  • android
  • ios