Asianet Suvarna News Asianet Suvarna News

ನನ್ನ ಹೇರ್‌ಸ್ಟೈಲ್ ಚೆನ್ನಾಗಿಲ್ಲ ಎನ್ನುವ ಬಿಜೆಪಿಯವರ ಭಾವನೆ ಸರಿಯಿಲ್ಲ: ಮಧು ಬಂಗಾರಪ್ಪ ಕಿಡಿ

 ನನಗೆ ಕನ್ನಡ ಓದೋಕೆ ಬರೊಲ್ಲ ಎಂದು ಬಿಜೆಪಿಯವರು ಪದೇಪದೆ ಹೇಳ್ತಾರೆ. ನನಗೆ ಕನ್ನಡ ಓದುವುದು ಸ್ವಲ್ಪ ಕಷ್ಟವಿರಬಹುದು ಆದರೆ ಚೆನ್ನಾಗಿಯೇ ಕನ್ನಡ ಮಾತನಾಡುತ್ತೇನೆ. ಕನ್ನಡ ಮಾತನಾಡುವುದಕ್ಕೆ ತೊಂದರೆ ಇಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹರಿಹಾಯ್ದರು.

karnataka education minister madhu bangarappa reacts about his hairstyle controversy rav
Author
First Published Jul 11, 2024, 12:10 PM IST

ಕುಕನೂರು: ನನ್ನ ಹೇರ್‌ಸ್ಟೈಲ್ ಚೆನ್ನಾಗಿಲ್ಲ ಅನ್ನುವ ಬಿಜೆಪಿಯವರ ಭಾವನೆ ಸರಿಯಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.

ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕೆಕೆಆರ್‌ಡಿಬಿ ಅನುದಾನದಡಿ ಬುಧವಾರ ನೂತನ ಸರ್ಕಾರಿ ಪ್ರೌಢಶಾಲೆ ಉದ್ಘಾಟಿಸಿಸಿ ಮಾತನಾಡಿದ ಸಚಿವರು, ನನ್ನ ಹೇರ್‌ಸ್ಟೈಲ್ ನನ್ನ ತಂದೆ ಬಂಗರಪ್ಪ ಅವರಿಗೆ ತುಂಬಾ ಇಷ್ಟವಾಗಿತ್ತು. ಹಾಗಾಗಿ ಈ ಹೇರ್‌ಸ್ಟೈಲ್ ಇದೆ. ನನ್ನ ತಂದೆ ಬಂಗಾರಪ್ಪ ಅವರಿಗೆ ಇಷ್ಟವಾದ ಮೇಲೆ ಬೇರೆಯವರಿಗೆ ಇಷ್ಟವಾಗುತ್ತೋ,ಇಲ್ವೋ ನನಗೆ ಬೇಕಿಲ್ಲ ಎಂದರು.

 ನನಗೆ ಕನ್ನಡ ಓದೋಕೆ ಬರೊಲ್ಲ ಎಂದು ಬಿಜೆಪಿಯವರು ಪದೇಪದೆ ಹೇಳ್ತಾರೆ. ನನಗೆ ಕನ್ನಡ ಓದುವುದು ಸ್ವಲ್ಪ ಕಷ್ಟವಿರಬಹುದು ಆದರೆ ಚೆನ್ನಾಗಿಯೇ ಕನ್ನಡ ಮಾತನಾಡುತ್ತೇನೆ. ಕನ್ನಡ ಮಾತನಾಡುವುದಕ್ಕೆ ತೊಂದರೆ ಇಲ್ಲ. ಅಷ್ಟಕ್ಕೂ ನಾನು ಇಲಾಖೆಗೆ ಸಚಿವ ಆಗಿದ್ದೇನೆ ಹೊರತು ಮಕ್ಕಳಿಗೆ ಪಾಠ ಮಾಡಲು ಏನೂ ಹೋಗಲ್ವಲ್ಲ? ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

 

ಕೃಷಿ ನಮ್ಮ ದೇಶದ ಭವಿಷ್ಯವಾಗಿದ್ದು, ಜಿಡಿಪಿಗೆ ಶೇ.17 ಕೊಡುಗೆಯಿದೆ: ಸಚಿವ ಮಧು ಬಂಗಾರಪ್ಪ

ರಾಜ್ಯದಲ್ಲಿ ಮಾಜಿ ಸಚಿವ ನಾಗೇಂದ್ರ ಸೇರಿ ಅನೇಕರ ಮನೆ ಮೇಲೆ ಇಡಿ ದಾಳಿ ಆಗಿದೆ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಬಿಜೆಪಿ ಸರ್ಕಾರದ ಸ್ವಭಾವ ರೈಡ್ ಮಾಡಿಸುವುದಾಗಿದೆ. ಈಗ ಅದನ್ನೇ ಕಂಟಿನ್ಯೂ ಮಾಡಿರಬಹುದು ಎಂದು ಸಚಿವ ಮಧು ಬಂಗಾರಪ್ಪ(Madhu bangarappa) ಹೇಳಿದರು.

ತಾಲೂಕಿನ ಕೋಮಲಾಪುರ ಗ್ರಾಮ(Komalapur village)ದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಆ ಸ್ಥಾನಕ್ಕೆ ಗೌರವ ನೀಡಿದ್ದಾರೆ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದರು.

Latest Videos
Follow Us:
Download App:
  • android
  • ios