ಡ್ಯೂಟಿಯಲ್ಲೇ ಕಾಮಕೇಳಿ; ಡಿಜಿಪಿ ರಾಮಚಂದ್ರ ರಾವ್ ಪ್ರಕರಣ ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿದೆ. ಕಾಮಕೇಳಿಯ ವಿಡಿಯೋ, ಆಡಿಯೋ ಸೋಶಿಯಲ್ ಮೀಡಿಯಾ, ವ್ಯಾಟ್ಸಾಪ್ ಮೂಲಕ ಹರಿದಾಡುತ್ತಿದೆ. ಇದ್ರ ನಡುವೆ ಜನರು ರಾಚಂದ್ರ ರಾವ್ ಈ ಕ್ವಾಲಿಟಿ ಮೆಚ್ಚಿಕೊಂಡಿದ್ದಾರೆ.
ಬೆಂಗಳೂರು (ಜ.22) ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ರಾಸಲೀಲೆ ಪ್ರಕರಣದ ವಿಡಿಯೋ ಕೋಲಾಹಲ ಸೃಷ್ಟಿಸಿದೆ. ಟ್ಯೂಟಿ ಸಮಯದಲ್ಲೇ ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡಲಾಗಿದೆ. ಮೂವರು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚಿನ್ನ ಕಳ್ಳಸಾಗಾಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟಿ ರನ್ಯಾ ರಾವ್ ತಂದೆ ರಾಮಚಂದ್ರ ರಾವ್ ಇದೀಗ ರಾಸಲೀಲೆ ವಿಡಿಯೋ ಪ್ರಕರಣದಿಂದ ಕುಖ್ಯಾತಿ ಪಡೆದಿದ್ದಾರೆ. ರಾಮಚಂದ್ರ ರಾವ್ ವಿರುದ್ದ ಭಾರಿ ಆಕ್ರೋಶಗಳು ವ್ಯಕ್ತವಾಗಿದ್ದರೆ, ಸೋಶಿಯಲ್ ಮೀಡಿಯಾದಲ್ಲಿ ಡಿಜಿಪಿ ಕೆಲ ಕ್ವಾಲಿಟಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ರಾಮಚಂದ್ರ ರಾವ್ ಯಾ ಕ್ವಾಲಿಟಿಗೆ ನೆಟ್ಟಿಗರ ಮೆಚ್ಚುಗೆ
ರಾಮಚಂದ್ರ ರಾವ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡಲಾಗಿದೆ. ಪ್ರಕರಣ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿತ್ತು. ವಿಡಿಯೋಗಳು ಎಲ್ಲೆಡೆ ಹರಿದಾಡತೊಡಗುತ್ತಿದ್ದಂತೆ ಆಕ್ರೋಶಗಳು ವ್ಯಕ್ತವಾಗಿತ್ತು. ಇದೇ ವೇಳೆ ವಿಡಿಯೋ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ರಾಮಚಂದ್ರ ರಾವ್ ಪ್ರತಿಕ್ರಿಯೆ ನೀಡಿದ್ದರು. ಇದೇ ಪ್ರತಿಕ್ರಿಯೆ ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ. ನನ್ನ ಬದುಕಿನಲ್ಲಿ ಈ ರೀತಿಯ ಆತ್ಮವಿಶ್ವಾಸದ ಅವಶ್ಯಕತೆ ಇದೆ ಎಂದು ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ರಾಮಚಂದ್ರ ರಾವ್ ಯಾವುದೇಅಳುಕಿಲ್ಲದೆ, ಯಾವ ಘಟನೆಯೂ ನಡೆದಿಲ್ಲ ಎನ್ನುವಂತೆ ಧೈರ್ಯವಾಗಿ, ಆತ್ಮವಿಶ್ವಾಸದಿಂದ ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದರು. ಈ ವೇಳೆ ರಾಮಚಂದ್ರ ರಾವ್ ಮಾತನಾಡಿದ ರೀತಿ, ಧೈರ್ಯದ ನುಡಿಗಳು, ಸಾರಾಸಗಟಾಗಿ ಆರೋಪ ತಳ್ಳಿ ಹಾಕಿದ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ಕಾನ್ಫಿಡೆನ್ಸ್ ಬದುಕಿನಲ್ಲಿ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ನಾನವನಲ್ಲ, ಅದೆಲ್ಲಾ ಎಐ
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರಾಮಚಂದ್ರ ರಾವ್, ವಿಡಿಯೋ ಆರೋಪವನ್ನು ತಳ್ಳಿ ಹಾಕಿದ್ದರು. ಅದು ಎಐ (ಆರ್ಟಿಫೀಶಿಯಲ್ ಇಂಚಲಿಜೆನ್ಸ್ ) ವಿಡಿಯೋ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನಾನು ಆ ವಿಡಿಯೋ ನೋಡಿದೆ. ಅದರಲ್ಲಿರುವ ವ್ಯಕ್ತಿ ನಾನಲ್ಲ. ನನ್ನಂತೆ ಎಐ ಮೂಲಕ ವಿಡಿಯೋ ಸೃಷ್ಟಿಸಲಾಗಿದೆ ಎಂದು ರಾಮಚಂದ್ರ ರಾವ್ ಸ್ಪಷ್ಟನೆ ನೀಡಿದ್ದರು.
ಘಟನೆ ಕುರಿತು ಮಾಧ್ಯಮಗಳಿಗೆ ರಾಮಚಂದ್ರರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕಾಲದಲ್ಲಿ ಏನ್ ಬೇಕಾದರೂ ಮಾಡುವ ಸಾಧ್ಯತೆ ಇದೆ. 8 ವರ್ಷ ಹಿಂದೆ ನಾನು ಬೆಳಗಾವಿಯಲ್ಲಿ ಇದ್ದೆ. ಈ ಘಟನೆ ಕುರಿತು ಅಡ್ವೋಕೇಟ್ ಜೊತೆ ಮಾತನಾಡುತ್ತೇನೆ. ಈ ವಿಡಿಯೋ ನಕಲಿ, ಹೀಗಾಗಿ ತನಿಖೆ ಆಗಬೇಕು ಎಂದಿದ್ದರು.


