Asianet Suvarna News Asianet Suvarna News

ಅಂಬಿ ನಿಂಗೆ ವಯಸ್ಸಾಗಿಲ್ಲ, ಮಂಡ್ಯ ಗೆಲ್ಲಲು ಬಿಜೆಪಿಗೂ ರೆಬಲ್ ಬೇಕೆ ಬೇಕು!

ಮಂಡ್ಯ ಲೋಕಸಭೆಗೂ ರೆಬಲ್ ಸ್ಟಾರ್ ಅಂಬರೀಶ್ ಅವರಿಗೂ ಅದ್ಯಾವ ಸಂಬಂಧ ಇದೆಯೋ ಗೊತ್ತಿಲ್ಲ. ಜೆಡಿಎಸ್ ಕ್ಯಾಂಡಿಡೇಟ್ ನಂತರ ಮತ್ತೊಬ್ಬರು ಅಂಬಿ ಕಾಲಿಗೆ ಎರಗುವ ಮಾತನ್ನಾಡಿದ್ದಾರೆ.

Karnataka By Election 2018 Mandya BJP Candidate Siddaramaiah likely to meet rebel star Ambarish
Author
Bengaluru, First Published Oct 18, 2018, 6:47 PM IST
  • Facebook
  • Twitter
  • Whatsapp

ಮಂಡ್ಯ[ಅ.18] ಮದ್ದೂರಿನಲ್ಲಿ  ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ನಾನು ಜೆಡಿಎಸ್ ಪಕ್ಷದವ್ರನ್ನು ಚುನಾವಣೆಯಲ್ಲಿ ಸಪೋರ್ಟ್ ಮಾಡೋ ಹಾಗೆ ಕೇಳ್ತೀನಿ. ನಾನು ಕೂಡ ಅಂಬಿ ಅಭಿಮಾನಿ, ಅವರನ್ನು ಭೇಟಿ ಮಾಡಿ ಬೆಂಬಲ ಕೇಳ್ತೀನಿ ಎಂದಿದ್ದಾರೆ.

ನಮ್ಮ ಪಕ್ಷದ ಕಾರ್ಯಕರ್ತರು ವಿಶ್ವಾಸದಿಂದ ಕೆಲಸ ಮಾಡಿದ್ದು,ನನಗೆ ಈ ಚುನಾವಣೆ ಗೆಲ್ಲುವ ವಿಶ್ವಾಸ ಇದೆ. ನನಗೆ ಕುಟುಂಬದ ಹಿನ್ನೆಲೆ ಇದೆ, ಜೊತೆಗೆ  ಜನ ನನ್ನ ಮೇಲೆ ಭರವಸೆ ಇಟ್ಟಿದ್ದಾರೆ. ನರೇಂದ್ರ ಮೋದಿ ಕೈ ಬಲಪಡಿಸಲು ನನಗೆ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ಹೇಳಿದ್ದಾರೆ.

ಸರ್ಕಾರ ಅಸ್ತಿತ್ವಕ್ಕೆ ಬಂದು 120 ದಿನಗಳಾಗಿದೆ ಮಂಡ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ. ಯಡಿಯೂರಪ್ಪ ಇದ್ದಾಗ ಜಿಲ್ಲೆಗೆ 150  ಕೋಟಿ ಹಣ ಬಿಡುಗಡೆ ಮಾಡಿದ್ರು ಎಂದು ಹಳೆ ವಿಚಾರ ಹೇಳಿದರು, ಮದ್ದೂರಿನಲ್ಲಿ ಬೃಹತ್ ಸಮಾವೇಶವಿದ್ದು ಇದಕ್ಕೆ ಆರ್ ಅಶೋಕ್ ಸೇರಿದಂತೆ ಹಲವು ರಾಜ್ಯ ನಾಯಕರು ಆಗಮಿಸಲಿದ್ದಾರೆ ಎಂದು ಹೇಳಿದರು.

Follow Us:
Download App:
  • android
  • ios