ಕರಾವಳಿ ಮೀನುಗಾರಿಕೆಗೆ ಹೇರಳ ಕೊಡುಗೆ ಪ್ರಕಟಿಸಲಾಗಿದೆ. ದ.ಕ.ಜಿಲ್ಲೆಗೆ ಸಂಬಂಧಿಸಿ ಹೊಸ ಯೋಜನೆಗಳು ಇಲ್ಲ, ಹಿಂದಿನ ಹಾಗೂ ಹಾಲಿ ಯೋಜನೆಗಳಿಗೆ ಹಣಕಾಸು ನೆರವು, ಪ್ರವಾಸೋದ್ಯಮ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಪ್ರಸ್ತಾಪ-

ಮಂಗಳೂರು (ಫೆ.18) : ಕರಾವಳಿ ಮೀನುಗಾರಿಕೆಗೆ ಹೇರಳ ಕೊಡುಗೆ ಪ್ರಕಟಿಸಲಾಗಿದೆ. ದ.ಕ.ಜಿಲ್ಲೆಗೆ ಸಂಬಂಧಿಸಿ ಹೊಸ ಯೋಜನೆಗಳು ಇಲ್ಲ, ಹಿಂದಿನ ಹಾಗೂ ಹಾಲಿ ಯೋಜನೆಗಳಿಗೆ ಹಣಕಾಸು ನೆರವು, ಪ್ರವಾಸೋದ್ಯಮ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಪ್ರಸ್ತಾಪ-

ಇದು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸೆಂಬ್ಲಿಯಲ್ಲಿ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಕರಾವಳಿಗೆ ಅದರಲ್ಲೂ ದ.ಕ.ಜಿಲ್ಲೆಗೆ ಲಭಿಸಿದ ಕೊಡುಗೆಯ ಮುಖ್ಯಾಂಶಗಳು.

Karnataka Budget 2023: ಹಂಪಿ ಪ್ರವಾಸೋದ್ಯಮಕ್ಕೆ ಬಜೆಟ್‌ ಬಲ!

ದ.ಕ.ಜಿಲ್ಲೆಗೆ ಸಿಕ್ಕಿದ್ದು:

-ಮಂಗಳೂರಿನ ಹಳೆ ಬಂದರಿಗೆ ಹೆಚ್ಚುವರಿ ಶಿಪ್‌ ಯಾರ್ಡ್‌ ಕಾರ್ಯಾಚರಣೆಗೆ ಪ್ರಾರಂಭಿಸಲು ನೆರವು ನೀಡಲಾಗಿದೆ. ಇದು ಕರಾವಳಿ ಪ್ರದೇಶದಲ್ಲಿ ಕೈಗಾರಿಕೆ ಹಾಗೂ ಮೀನುಗಾರಿಕಾ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಭಾವಿಸಲಾಗಿದೆ.

-ಗುರುಪುರ-ನೇತ್ರಾವತಿ ನದಿ ಪಾತ್ರದಲ್ಲಿ ಜಲಸಾರಿಗೆ ಸಂಪರ್ಕಕ್ಕೆ ಬಾಜ್‌ರ್‍ ಸೇವೆ ಒದಗಿಸಲು ಉದ್ದೇಶಿಸಲಾಗಿದೆ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಮಂಗಳೂರು-ಹಂಗಾರಕಟ್ಟೆಪಿಪಿಪಿ ಮಾದರಿಯಲ್ಲಿ ಲೈಟ್‌ ಕಾರ್ಗೋ ಟ್ರಾನ್ಸ್‌ಪೋರ್ಚ್‌(ಎಲ್‌ಸಿಟಿ) ಬೋಟ್‌ ಸೇವೆ ಆರಂಭಿಸಲು ಯೋಜನೆ.

-ಕರಾವಳಿ ಪ್ರದೇಶದಲ್ಲಿ ಜನರ ಸುಗಮ ಸಂಚಾರಕ್ಕಾಗಿ ಮತ್ತು ವಾಣಿಜ್ಯ ವ್ಯವಹಾರಗಳನ್ನು ಉತ್ತಮಗೊಳಿಸಲು ಮಂಗಳೂರು-ಕಾರವಾರ-ಗೋವಾ-ಮುಂಬೈ ನಡುವೆ ವಾಟರ್‌ವೇಯ್‌್ಸನ್ನು ಪಿಪಿಪಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಕ್ರಮ. ಪ್ರತಿ ಗ್ರಾಮ ಪಂಚಾಯ್ತಿಗೆ ಸುಸಜ್ಜಿತ ಕ್ರೀಡಾಂಗಣಕ್ಕೆ ನರೇಗಾದಡಿ 5 ಕೋಟಿ ರು. ನಿಗದಿಪಡಿಸಲಾಗಿದೆ.

-ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಗೇರು ಕೃಷಿ ಉದ್ದೇಶಕ್ಕೆ ಗುತ್ತಿಗೆ ನೀಡಲಾದ 4,292 ಎಕರೆ ಜಮೀನನ್ನು ಮಾರ್ಗಸೂಚಿ ಮೌಲ್ಯವನ್ನು ವಿಧಿಸಿ ಕಾಯಂ ಆಗಿ ಮಂಜೂರು ಮಾಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ಗೆ ತಿದ್ದುಪಡಿ ತರಲು ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ.

-ಮಂಗಳೂರಿನ ಕೇಂದ್ರ ಕಾರಾಗೃಹದ ಆವರಣದಲ್ಲಿ ಗರಿಷ್ಠ ಭದ್ರತಾ ಕಾರಾಗೃಹ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

-ಮಂಗಳೂರು ಮತ್ತು ಕಲಬುರಗಿಯಲ್ಲಿ 30 ಕೋಟಿ ರು. ವೆಚ್ಚದಲ್ಲಿ ಭಾರಿ ವಾಹನ ಚಾಲಕರ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ಮಂಗಳೂರಿನಲ್ಲೂ 38 ಕೋಟಿ ರು.ಗಳಲ್ಲಿ ಸ್ವಯಂ ಚಾಲಿತ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರ ಸ್ಥಾಪಿಸಲಾಗಿದೆ.

ಕರಾವಳಿಗೆ ದಕ್ಕಿದ್ದು ಮೀನುಗಾರಿಕೆಗೆ ಸಿಂಹಪಾಲು:

-ಮೀನುಗಾರರ ಹಾಗೂ ಅವರ ದೋಣಿಗಳ ಸುರಕ್ಷತೆಗಾಗಿ 17 ಕೋಟಿ ರು. ಗಳ ಅನುದಾನದಲ್ಲಿ ಇಸ್ರೋ ಅಭಿವೃದ್ಧಿಪಡಿಸಿರುವ ಜಿಪಿಎಸ್‌ ಸಂವಹನ ವ್ಯವಸ್ಥೆಯನ್ನು ಎಲ್ಲ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಲ್ಲಿ ಅಳವಡಿಸಲಾಗುವುದು. ಇದರಿಂದ ಆಳ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ದೋಣಿಗಳನ್ನು ಪತ್ತೆ ಅನುಕೂಲವಾಗಲಿದೆ.

-ಕಳೆದ ವರ್ಷ ವಸತಿ ರಹಿತ ಮೀನುಗಾರರಿಗೆ 5,000 ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಂಡಿದೆ. ಪ್ರಸಕ್ತ ಸಾಲಿನಲ್ಲಿ 10,000 ವಸತಿರಹಿತ ಮೀನುಗಾರರಿಗೆ ವಿಸ್ತರಿಸಲಿದೆ.

- ಮುಂದಿನ 2 ವರ್ಷಗಳಲ್ಲಿ ಎಲ್ಲ ಸೀಮೆಎಣ್ಣೆ ಆಧಾರಿತ ದೋಣಿಗಳಲ್ಲಿ ಪೆಟ್ರೋಲ್‌/ ಡೀಸೆಲ್‌ ಆಧಾರಿತ ಮೋಟಾರ್‌ ಎಂಜಿನ್‌ ಅಳವಡಿಸಲು ತಲಾ 50 ಸಾವಿರ ರು.ನಂತೆ ಸಹಾಯಧನ ನೀಡಲಾಗುವುದು. ಇದಕ್ಕಾಗಿ 40 ಕೋಟಿ ರು. ಮೀಸಲಿಡಲಾಗುವುದು. ಎರಡು ವರ್ಷಗಳ ಅವಧಿಗೆ ಸೀಮೆಎಣ್ಣೆ ಸಹಾಯಧನ ಮುಂದುವರೆಸಲು ನಿರ್ಧಾರ.

-ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್‌ ಮಿತಿಯನ್ನು ಸದ್ಯದ 1.5 ಲಕ್ಷ ಕಿಲೋ ಲೀಟರ್‌ಗಳಿಂದ 2 ಲಕ್ಷ ಕಿಲೋ ಲೀಟರ್‌ಗಳ ವರೆಗೆ ಹೆಚ್ಚಿಸಲಾಗುವುದು. ಇದರಿಂದ ಮೀನುಗಾರರಿಗೆ ಸರ್ಕಾರದಿಂದ 250 ಕೋಟಿ ರು.ಗಳ ನೆರವಾಗಲಿದೆ.

- ಸೀಮೆ ಎಣ್ಣೆ ಸಹಾಯಧನದ ಪ್ರಕ್ರಿಯೆಯನ್ನು ಸರಳೀಕರಿಸಿ ಪ್ರಸಕ್ತ ಸಾಲಿನಿಂದ ಡಿಬಿಟಿ(ನೇರ ಫಲಾನುಭವಿಗೆ ವರ್ಗಾವಣೆ) ಮುಖಾಂತರ ನೇರವಾಗಿ ಮೀನುಗಾರರ ಖಾತೆಗೆ ಜಮೆಗೆ ಕ್ರಮ.

- ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯೊಂದಿಗೆ ಸಂಯೋಜಿಸಿ ಮತ್ಸ್ಯ ಸಂಪದ ಎಂಬ ವಿಶೇಷ ಯೋಜನೆಯನ್ನು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ರೂಪಿಸಲಾಗಿದೆ. ಆಯ್ಕೆಯಾದ ಎಲ್ಲ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ದೋಣಿ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ.

-ಕರಾವಳಿಗೆ ಸಹಸ್ರ ಸರೋವರ ಯೋಜನೆ ಪ್ರಸ್ತಾಪಿಸಲಾಗಿದ್ದು, ಒಂದು ಸಾವಿರ ಸಣ್ಣ ಸರೋವರ ಅಭಿವೃದ್ಧಿಗೊಳಿಸಿ ಬೇಸಗೆಯಲ್ಲಿ ನೀರು ಸಂರಕ್ಷಣೆಗೆ ಆದ್ಯತೆ.

-ಮೀನುಗಾರರಿಗೆ ನೆರವಾಗಲು 62 ಎಫ್‌ಎಫ್‌ಪಿಒ(ಫಿಶ್‌ ಫಾರ್ಮರ್‌ ಪ್ರೊಡ್ಯೂಸರ್‌ ಆರ್ಗನೈಸೇಷನ್‌) ಸ್ಥಾಪನೆ. 12,175 ಮೀನುಗಾರರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಕ್ರಮ.

-ಮತ್ಸ್ಯ ಸಂಪದ ಯೋಜನೆಯಡಿ ಕೃತಕ ಬಂಡೆಸಾಲು(ಆರ್ಟಿಫಿಶಿಯಲ್‌ ರೀಫ್‌) ಸ್ಥಾಪನೆ.

-ಉತ್ತಮ ತಳಿಯ ಬಲಿತ ಬಿತ್ತನೆ ಮೀನು ಮರಿ ದಾಸ್ತಾನು ಪ್ರೋತ್ಸಾಹಕ್ಕೆ 20 ಕೋಟಿ ರು. ನಿಗದಿ.

-ಗುಣಮಟ್ಟದ ಮೀನು ಉತ್ಪನ್ನ ಪೂರೈಕೆಗೆ ಕೇಂದ್ರದ ಸಹಕಾರದಲ್ಲಿ ಪರಿಸರ ಸ್ನೇಹಿ ತ್ರಿಚಕ್ರ ಮೀನು ಮಾರಾಟ ವಾಹನ ಕೇಂದ್ರ ಸ್ಥಾಪನೆ.

-ಮೀನುಗಾರಿಕಾ ಬಂದರು ವ್ಯಾಪ್ತಿ ಹಾಗೂ ಚಾನೆಲ್‌ಗಳಲ್ಲಿ ಹೂಳೆತ್ತುವ ಕಾಮಗಾರಿಗೆ ಟೆಂಡರ್‌. ಇದರಿಂದ ದೋಣಿ ಸುಗಮ ಸಂಚಾರ ಮತ್ತು ಸುರಕ್ಷಿತ ಸಂಚಾರಕ್ಕೆ ಅನುಕೂಲ.

ಪಶ್ಚಿಮ ವಾಹಿನಿ 2ನೇ ಹಂತ ಜಾರಿ:

-ಸಮುದ್ರ ಸೇರುವ ನೀರನ್ನು ತಡೆದು ಕೃಷಿ ಮತ್ತು ಕುಡಿಯುವ ಉದ್ದೇಶಕ್ಕೆ ಪಶ್ಚಿಮ ವಾಹಿನಿ ಯೋಜನೆಯ 2ನೇ ಹಂತಕ್ಕೆ 378 ಕೋಟಿ ರು. ನಿಗದಿ.

-ಬಿದಿರು ಕಲೆ, ಕಿನ್ನಾಳೆ, ಕಸೂತಿಯಂತೆ ಕುಂಬಾರಿಕೆಗೂ ತಲಾ 100 ಅಭ್ಯರ್ಥಿಗಳಿಗೆ ಉನ್ನತ ಮಟ್ಟದ ಕೌಶಲ್ಯಾಭಿವೃದ್ಧಿ ತರಬೇತಿಗೆ ವ್ಯವಸ್ಥೆ.

-ಕೇಂದ್ರದ ನೆರವಿನಲ್ಲಿ ರಾಷ್ಟ್ರೀಯ ಹೆದ್ದಾರಿ, ಬಂದರುಗಳ ಅಭಿವೃದ್ಧಿ.

-ಪಶ್ಚಿಮ ಘಟ್ಟಗಳಲ್ಲಿ ಮಳೆಗಾಲದಲ್ಲಿ ನೀರಿನ ಹರಿವು ರಭಸವಾಗಿದ್ದು, ಹಳ್ಳ, ತೊರೆ ದಾಟುವುದು ಸವಾಲಾಗಿರುತ್ತದೆ. ಇದಕ್ಕಾಗಿ ಸಂಪರ್ಕ ರಹಿತ ಜನವಸತಿ ಪ್ರದೇಶಗಳಲ್ಲಿ ಕಾಲು ಸಂಕ ನಿರ್ಮಾಣಕ್ಕೆ 250 ಕೋಟಿ ರು. ಬಿಡುಗಡೆ.

Karnataka Budget 2023: ರಾಜ್ಯ ಬಜೆಟ್‌-ಗದಗ ಜಿಲ್ಲೆಗೆ ಕಬಿ ಖುಷಿ-ಕಬಿ ಗಮ್‌!

ಟೈರ್‌-2 ಮಂಗಳೂರು ಸಿಟಿಗೆ ನೆರವು:

-ಬೆಂಗಳೂರು ಹೊರತಾದ ನಗರಗಳ ಅಭಿವೃದ್ಧಿಯಡಿ ಟೈರ್‌-2-3ನೇ ನಗರಗಳಲ್ಲಿ ಡಿಜಿಟಲ್‌ ಮೂಲ ಸೌಕರ್ಯಕ್ಕೆ ಆದ್ಯತೆ.

-ಕನ್ನಡ ಚಿತ್ರರಂಗ ಪ್ರೋತ್ಸಾಹಿಸಲು ಟೈರ್‌-2 ನಗರಗಳಲ್ಲಿ 100ರಿಂದ 200 ಆಸನದ ಮಿನಿ ಥಿಯೇಟರ್‌ ಸಾಪನೆಗೆ ಪ್ರೋತ್ಸಾಹ.

ಗಡಿನಾಡಿಗೆ ಕೋಟಿ ರು.:

-ಗಡಿನಾಡು ಪ್ರದೇಶಗಳಲ್ಲಿ ಕನ್ನಡ ಭಾಷೆ, ಕಲೆ, ಶಿಕ್ಷಣ ಮತ್ತು ಸಂಸ್ಕೃತಿ ವಿಕಾಸಕ್ಕೆ ಪ್ರೋತ್ಸಾಹ. ಗಡಿ ಪ್ರದೇಶದ ರಸ್ತೆ ಮತ್ತು ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಂದ 150 ಕೋಟಿ ರು. ಒದಗಿಸಲು ಕ್ರಮ.

-ಕರಾವಳಿಯ ಬಹುದಿನಗಳ ಬೇಡಿಕೆಯಾದ ಸಿಆರ್‌ಝಡ್‌ ಮಾನದಂಡ ಸಡಿಲಕ್ಕೆ ಕೇಂದ್ರ ಒಪ್ಪಿಗೆ ನೀಡಿದ್ದು, ಕರಾವಳಿ ವಲಯ ನಿರ್ವಹಣಾ ಯೋಜನೆ ಜಾರಿ. ಇದರಿಂದ ಧಾರ್ಮಿಕ, ಸಾಹಸ ಮತ್ತು ಪರಿಸರಸ್ನೇಹಿ ಪ್ರವಾಸೋದ್ಯಮ ಉತ್ತೇಜನಕ್ಕೆ ರೂಪುರೇಷೆ.

ಕರಾವಳಿ ಜಿಲ್ಲೆಗೆ ನಿರಾಶೆ ಮೂಡಿಸಿದ್ದು

-ತುಳುವನ್ನು ರಾಜ್ಯದ 2ನೇ ಭಾಷೆಯಾಗಿ ಘೋಷಣೆ ಬಗ್ಗೆ ಯಾವುದೇ ಪ್ರಸ್ತಾಪ ಬಜೆಟ್‌ನಲ್ಲಿ ವ್ಯಕ್ತವಾಗಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಈ ಬಗ್ಗೆ ತಜ್ಞರ ಸಮಿತಿಯನ್ನು ನೇಮಿಸಿ ಅಧ್ಯಯನ ನಡೆಸಿ ಶಿಫಾರಸು ಮಾಡುವಂತೆ ಸೂಚನೆ ನೀಡಿದೆ. ಆದರೆ ಬಜೆಟ್‌ನಲ್ಲಿ ಈ ವಿಚಾರವೇ ಇಲ್ಲ.

-ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಕೋಶ ಸ್ಥಾಪನೆ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಕೆಲವು ತಿಂಗಳ ಹಿಂದೆ ಭರವಸೆ ನೀಡಿದ್ದರು. ಅದರ ಪ್ರಸ್ತಾಪವೂ ಈ ಬಜೆಟ್‌ನಲ್ಲಿ ಕಂಡುಬಂದಿಲ್ಲ.

-ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆಯ ಪ್ರಸ್ತಾಪವೂ ಬಜೆಟ್‌ನಲ್ಲಿ ಕಾಣಿಸಿಲ್ಲ.

- ಕ್ಯಾಂಪ್ಕೋ ಕೋರಿಕೆ ಮೇರೆಗೆ ಕ್ಯಾಂಪ್ಕೋದಡಿ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಕ್ಕೆ ನೆರವು ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದರು. ಆದರೆ 10 ಕೋಟಿ ರು. ಅನುದಾನವನ್ನು ಕ್ಯಾಂಪ್ಕೋ ಬದಲು ಅಡಕೆ ಟಾಸ್‌್ಕಫೋರ್ಸ್‌ ಸಮಿತಿ ಅಧ್ಯಕ್ಷರೂ ಆದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜಿಲ್ಲೆಯ ಶಿವಮೊಗ್ಗದ ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ ನೀಡಲಾಗಿದೆ.