Asianet Suvarna News Asianet Suvarna News

ಅಡಕೆ ಆರಿಸುವ ಕೆಲಸದಿಂದ ರಾಜ್ಯದಲ್ಲಿ 6 ಬಾರಿ ಮಂತ್ರಿ ವರೆಗೆ ಈಶ್ವರಪ್ಪ

  • ಅಡಕೆ ಆರಿಸುವ ಕುಟುಂಬದಿಂದ ಬಂದ ಕೌಡಿಕೆ ಶರಪ್ಪ ಈಶ್ವರಪ್ಪ ಇದೀಗ   ಆರನೆ ಬಾರಿ ಸಚಿವ ರಾಜ್ಯದ ಮಂತ್ರಿ
  • ಪಕ್ಷ ಯಾವ ಜವಾಬ್ದಾರಿ ನೀಡಿದರೂ ತಿರುಗಿ ಮಾತನಾಡದೇ ಅದನ್ನು ಒಪ್ಪಿಕೊಂಡು ಕೆಲಸ ಮಾಡುವ ಜಾಯಮಾನ
  • 1989ರಿಂದ ಅರಂಭವಾದ ಕೆಎಸ್‌ ಈಶ್ವರಪ್ಪ ಅವರ ರಾಜಕೀಯ ಪಯಣ
Karnataka BJP leader KS Eshwarappa gets 6th time minister post   snr
Author
Bengaluru, First Published Aug 5, 2021, 3:29 PM IST

 ಶಿವಮೊಗ್ಗ (ಆ.05): ಅಡಕೆ ಆರಿಸುವ ಕುಟುಂಬದಿಂದ ಬಂದ ಕೌಡಿಕೆ ಶರಣಪ್ಪ ಈಶ್ವರಪ್ಪ ಇದೀಗ  ಮುಖ್ಯಮಂತ್ರಿ ಗಾದಿಯ ಬಳಿಗೆ ಬಂದು ಕೊನೆಗೆ ಆರನೆ ಬಾರಿ ಸಚಿವ ಗಾದಿಯಲ್ಲಿ ಕುಳಿತಿದ್ದಾರೆ.

ಸುದೀರ್ಘ ರಾಜಕಿಯ ಜೀವನದಲ್ಲಿ ಸಾಗಿ ಬಂದಿರುವ ಈಶ್ವರಪ್ಪ ಅವರ ಹರಿತ ಮಾತು , ಮುಲಾಜಿಲ್ಲದೆ ಮಾತನಾಡುವ ಶೈಲಿ  ಹಿಂದುತ್ವ  ಪರವಾದ ಕಟು ವಾಕ್ಝರಿ  ಅವರನ್ನು ಮುಂಚೂಣಿಗೆ ತಂದು ನಿಲ್ಲಿಸಿದೆ. 

ಪಕ್ಷ ಮತ್ತು ಸಂಘ ನಿಷ್ಠೆ ಅವರ ಟ್ರಂಪ್ ಕಾರ್ಡ್, ಪಕ್ಷ ಯಾವ ಜವಾಬ್ದಾರಿ ನೀಡಿದರೂ ತಿರುಗಿ ಮಾತನಾಡದೇ ಅದನ್ನು ಒಪ್ಪಿಕೊಂಡು ಕೆಲಸ ಮಾಡುವ ಜಾಯಮಾನ ಇವರದು. 

ಈಶ್ವರಪ್ಪ ರಾಜ್ಯದಲ್ಲಿ ಈ ಇಬ್ಬರನ್ನು ಮಾತ್ರ ನಂಬುತ್ತಾರಂತೆ: ಯಾರವರು?

ಮೂರು ಬಾರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೂರು ಬಾರಿ ಸಚಿವರಾಗಿ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ, ವಿಧಾನಪರಿಷತ್ ಸದಸ್ಯರಾಗಿ, ಪರಿಷತ್ ವಿಪಕ್ಷ ನಾಯಕನಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. 

ಕುರುಬ ಸಮಾಜದಿಂದ ಬಂದರೂ ಎಲ್ಲ ವರ್ಗವನ್ನೂ ಸಮನಾಗಿ ಕಾಣುತ್ತಾ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ ಆಗಿರುವ ಈಶ್ವರಪ್ಪ ಜನಿಸಿದ್ದು 1942ರಲ್ಲಿ ಬಳ್ಳಾರಿಯಲ್ಲಿ. ಇವರ ತಂದೆ  ಇಲ್ಲಿಗೆ ಉದ್ಯೋಗ ಅರಸಿ ಬಂದವರು. ಚಿಕ್ಕ ವಯಸ್ಸಿನಲ್ಲಿಯೇ ತಾಯಿ ಜೊತೆ ಅಡಕೆ ಮಂಡಿಗಳಲ್ಲಿ ಅಡಕೆ ಆರಿಸುವ ಕೆಲಸಕ್ಕೆ ಹೋಗುತ್ತಿದ್ದ ಅವರು ಬಿ ಕಾಂ ಪದವಿ ಪಡೆದು ಬಳಿಕ ಬಿಸ್ಕೇಟ್ ಅಂಗಡಿ ನಡೆಸುತ್ತಿದ್ದರು. 

ಚಿಕ್ಕ ವಯಸ್ಸಿನಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ತೊಡಗಿಸಿಕೊಂಡು  ಈವರೆಗೂ ಅಲ್ಲಿ ಸಾಗುತ್ತಿದ್ದಾರೆ. 

ತಾಲೂಕು ಜಿಲ್ಲಾ ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಮೊದಲು 1989ರಲಲ್ಲಿ ಪ್ರಥಮ ಬಾರಿ ವಿಧಾನಸಭೆ ಪ್ರವೇಶಿಸಿದರು. ಅಲ್ಲಿಂದ ಆರಂಭವಾದ  ಇವರ ಪಯಣ ಇಲ್ಲಿಗೆ ಬಂದು ನಿಂತಿದೆ. 

Follow Us:
Download App:
  • android
  • ios