ಮಂಗಳೂರು(ನ.  23) 'ಬಲವಂತದ ಬಂದ್ ಮಾಡಿದರೆ ಕಲ್ಲಲ್ಲಿ ಹೊಡೀರಿ, ಗನ್ ಇದ್ರೆ ಶೂಟ್ ಮಾಡಿ ಬಿಸಾಡಿ' ಹೀಗೆಂದು ಹೇಳಿಕೆ ನೀಡಿದ್ದು  ಋಷಿಕುಮಾರ ಸ್ವಾಮೀಜಿ.  ಮಂಗಳೂರಲ್ಲಿ ರಾಮಸೇನಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ ಬಂದ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದರು.

ಕರ್ನಾಟಕ ಬಂದ್ ಬಗ್ಗೆ ಮಾತಾಡಲು ಯತ್ನಾಳ್, ರೇಣುಕಾ ಯಾರು?

ಕಾನೂನು ಇದೆಯಾ, ನಮ್ಮನ್ನು ನಾವು ರಕ್ಷಣೆ ಮಾಡಬೇಕೋ ಬೇಡವೋ, ಹಾಗೆ ಬಂದರೆ ಕಲ್ಲಲ್ಲೇ ಹೊಡೀರಿ ಎಂದರು. ಮರಾಠಾ ಪ್ರಾಧಿಕಾರ ಮತ್ತು ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿಸೆಂಬರ್  5 ಕ್ಕೆ ಬಂದ್  ಗೆ ಕರೆ ಕೊಟ್ಟಿವೆ.

ರಾಜ್ಯ ಸರ್ಕಾರ ತನ್ನ ಕ್ರಮ ಸಮರ್ಥನೆ  ಮಾಡಿಕೊಂಡೇ ಬಂದಿದೆ. ಒಂದಾದ ಮೇಲೆ ಒಂದು ಪ್ರಾಧಿಕಾರಕ್ಕೆ ಬೇಡಿಕೆ ಬರುತ್ತಲೇ ಇದೆ. ಆದರೆ  ಋಷಿಕುಮಾರ ಸ್ವಾಮೀಜಿ ಯಾವ ಅರ್ಥದಲ್ಲಿ ಹೇಳದ್ದಾರೆ ಎಂಬುದನ್ನು ಅವರೇ ಸ್ಪಷ್ಟಮಾಡಬೇಕು.