ಮೈಸೂರು (ಡಿ.05):  ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಹಾಗೂ ಈ ಸಂಬಂಧ ಸರ್ಕಾರದ ಆದೇಶ ಹಿಂಪಡೆಯಲು ಆಗ್ರಹಿಸಿ ವಿವಿಧ ಕನ್ನಡಪರ ಸಂಧಟನೆಗಳು ಇಂದು ಹಮ್ಮಿಕೊಂಡಿರುವ ಕರ್ನಾಟಕ್‌ ಬಂದ್‌ಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೆಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಇನ್ನೂ ಕೆಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿವೆ.

ಕರ್ನಾಟಕ ರಕ್ಷಾಣ ವೇದಿಕೆ ನಾರಾಯಣ ಗೌಡ ಬಣ, ಕದಂಬ ಸೈನ್ಯ, ಮೈಸೂರು ಕನ್ನಡ ವೇದಿಕೆ, ಕರ್ನಾಟಕ ಕಾವಲು ಪಡೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ.

ಹಾಗೆಯೇ, ಹೋಟೆಲ್‌ ಮಾಲೀಕರ ಸಂಘ, ಮೈಸೂರು ಜಿಲ್ಲೆ ಪ್ರವಾಸಿ ವಾಹನ ಚಾಲಕರು, ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಮೈಸೂರು ಅನುಮೋದಿತ ಟೂರಿಸ್ವ್‌ ಗೈಡ್ಸ್‌ ಅಸೋಸಿಯೇಷನ್‌, ಮೈಸೂರು ಜಿಲ್ಲಾ ಪ್ರವಾಸಿ ಬಸ್‌ ಮಾಲೀಕರ ಸಂಘ, ಮೈಸೂರು ಜಿಲ್ಲಾ ಮತ್ತು ನಗರ ಮ್ಯಾಕ್ಸಿ ಕ್ಯಾಬ್‌ ಸಂಘ, ಮೈಸೂರು ವಲಯ ಪೆಟ್ರೋಲಿಯಂ ಅಸೋಸಿಯೇಷನ್‌ ಡೀಲರ್‌, ದೇವರಾಜು ಅರಸು ರಸ್ತೆ ಟ್ರೇಡರ್ಸ್‌ ಅಸೋಸಿಯೇಷನ್‌, ಶರಾಫ್‌ ವರ್ತಕರ ಸಂಘದವರು ಬಂದ್‌ಗೆ ಬಾಹ್ಯ ಬೆಂಬಲ ನೀಡಿವೆ. 

ಇಂದು ಕರ್ನಾಟಕ ಬಂದ್, ರಾಜ್ಯದ ಗಡಿ ಕ್ಲೋಸ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ!

ಪೆಟ್ರೋಲ್‌ ಬಂಕ್‌ ಮಾಲೀಕರ ಸಂಘ, ಆಟೋ ಚಾಲಕರ ಸಂಘ ಹಾಗೂ ಲಾರಿ ಮಾಲೀಕರ ಸಂಘದವರು ಬಂದ್‌ಗೆ ನೈತಿಕ ಬೆಂಬಲ ನೀಡಿವೆ. ಸರ್ಕಾರಿ ಕಚೇರಿ, ಕೆಎಸ್‌ಆರ್‌ಟಿಸಿ ಬಸ್‌ ಸೇವೆ, ವೈದ್ಯಕೀಯ ಸೇವೆ, ಆಟೋ- ಟ್ಯಾಕ್ಸಿ, ಹೋಟೆಲ್, ಪ್ರವಾಸಿ ತಾಣಗಳು, ವ್ಯಾಪಾರ ವಹಿವಾಟು ಸೇರಿದಂತೆ ಇತರೆ ಸೇವೆಗಳು ಎಂದಿನಂತೆ.

ಹೊಟೇಲ್‌ಗಳು ಓಪನ್

 ವಿವಿಧ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ ಮಾಡಲು ಕರೆ ಕೊಟ್ಟಿರುತ್ತಾರೆ. ಆದರೆ ನಮ್ಮ ಹೋಟೆಲ್‌ ಉದ್ಯಮ ಅತಿ ಅವಶ್ಯಕ ಸೇವೆಯ ಉದ್ಯಮವಾಗಿರುತ್ತದೆ. ಕೊರೋನಾ ವಾರಿಯ​ರ್‍ಸ್ಗಳಾದ ಪೊಲೀಸರು, ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಮತ್ತು ಬಹಳ ಪ್ರಮುಖವಾಗಿ ರೋಗಿಗಳಿಗೆ ಅಗತ್ಯತೆ ಇರುವ ದಿನನಿತ್ಯದ ಆಹಾರ ಪೂರೈಸುವ ಕೆಲಸ ಹೋಟೆಲು ಮಾಲೀಕರದ್ದಾಗಿರುತ್ತದೆ. ಈ ಎಲ್ಲಾ ಅಗತ್ಯ ಸೇವೆಗಳನ್ನು ಪರಿಗಣಿಸಿ ಹೋಟೆಲ್‌ಗಳನ್ನು  ಬಂದ್‌ ಮಾಡಲಾಗುವುದಿಲ್ಲ. ಎಂದಿನಂತೆ ಹೋಟೆಲ್‌, ರೆಸ್ಟೋರೆಂಟ್‌, ಬೇಕರಿ, ಸ್ವೀಟ್‌ ಶಾಪ್‌ ಇತ್ಯಾದಿಗಳು ತೆರೆದಿವೆ.