ವಿಶ್ವಾಸ ಮತ ಡ್ರಾಮಾ: ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

ಸದನದಲ್ಲಿ ಶಾಸಕರ ನಡೆ ಹಾಗೂ ವಿಶ್ವಾಸ ಮತ ಡ್ರಾಮಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿ ಮಳೆ ಇಲ್ಲದೆ ಹಲವೆಡೆ ಬರಗಾಲವಿದ್ದು, ಇದರ ಬಗ್ಗೆ ಚರ್ಚಿಸದೆ, ಅಧಿಕಾರಕ್ಕಾಗಿ ನಡೆಯುತ್ತಿರುವ ರಾಜಕೀಯ ನಾಟಕದ ಬಗ್ಗೆ ಟೀಕೆ ವ್ಯಕ್ತವಾಗಿದೆ.

Kannadigas express anger against Karnataka political high drama in social media

ರಾಯಚೂರು(ಜು.23): ಸದನದಲ್ಲಿ ‌ಶಾಸಕರ ನಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. 18 ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ನೋಡಿ ಬೇಸತ್ತಿರುವ ಜನ ಶಾಸಕರ ನಡೆಯನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.

ರಾಜ್ಯದಲ್ಲಿ ಮಳೆ ಇಲ್ಲದೆ ಬರ ಆವರಿಸಿದೆ. ಜನ ನೀರಿಲ್ಲದೆ ಕಷ್ಟ ಪಡುತ್ತಿದ್ದಾರೆ. ಜನರ ಸಮಸ್ಯೆ ಪರಿಹರಿಸಬೇಕಾದ ಶಾಸಕರು ಅಧಿಕಾರಕ್ಕಾಗಿ ರಾಜಕೀಯ ನಾಟಕದಲ್ಲಿ ತೊಡಗಿದ್ದಾರೆ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನಪ್ರತಿನಿಧಿಗಳು ಜನರ ಸಮಸ್ಯೆ, ಬರಗಾಲದ ಬಗ್ಗೆ ಚರ್ಚಿಸುತ್ತಿಲ್ಲ. ಅಧಿಕಾರಕ್ಕಾಗಿ ಶಾಸಕರ ಹಾಗೂ ಸಚಿವರ ಕಚ್ಚಾಟ ಮುಂದುವರೆದಿದೆ. ಇದಕ್ಕೆಯೇ ಈ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದು ಎಂದು ಪ್ರಶ್ನಿಸಿದ್ದಾರೆ.

ಹೊಲಸು ರಾಜಕೀಯ, ಬೇಸತ್ತ ಬೆಂಗಳೂರಿಗರ ಪ್ರತಿಧ್ವನಿ

'ಮತ್ತೆ ಮತ ಕೇಳಲು ಬರುವವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ. ಥೂ ನಿಮ್ಮ ಜನ್ಮಕ್ಕೆ' ಎಂದು ಉಗಿದು ಪೋಸ್ಟ್ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ನಿನ್ನೆ ರಾತ್ರಿಯವರೆಗೂ ನಡೆದ ವಿಶ್ವಾಸ ಮತ ಡ್ರಾಮಾದಲ್ಲಿ ಸ್ಪೀಕರ್ ನಡೆಯ ಬಗ್ಗೆಯೂ ಆಕ್ರೋಶ  ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios