ಗಣರಾಜ್ಯೋತ್ಸವದಲ್ಲಿ ಮೋದಿಗೆ ರಕ್ಷಣೆ ಒದಗಿಸಿದ ಕನ್ನಡಿಗ ಕಶ್ಯಪ್
ಇತ್ತೀಚೆಗೆ ನಡೆದ ಗಣರಾಜ್ಯೋತ್ಸವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಾವಲಾಗಿ ನಿಂತ ಯುವಕ ಬೇರಾರೂ ಅಲ್ಲ, ಮಂಗಳೂರು ಮಾಜಿ ಮೇಯರ್ ಶಂಕರ್ ಭಟ್ ಅವರ ಪುತ್ರ ಕಾರ್ತಿಕ ಕಶ್ಯಪ್.
ಮಂಗಳೂರು (ಜ.29) : ಇತ್ತೀಚೆಗೆ ನಡೆದ ಗಣರಾಜ್ಯೋತ್ಸವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಾವಲಾಗಿ ನಿಂತ ಯುವಕ ಬೇರಾರೂ ಅಲ್ಲ, ಮಂಗಳೂರು ಮಾಜಿ ಮೇಯರ್ ಶಂಕರ್ ಭಟ್ ಅವರ ಪುತ್ರ ಕಾರ್ತಿಕ ಕಶ್ಯಪ್. ಅವರು ಪ್ರಸ್ತುತ ದೇಶದ ಗುಪ್ತಚರ ವಿಭಾಗದಲ್ಲಿ ಡಿಐಜಿಯಾಗಿದ್ದಾರೆ.
ಮಂಗಳೂರು ಕೊಂಚಾಡಿ ದೇರೆಬೈಲ್ ನಿವಾಸಿ ಶಂಕರ್ ಭಟ್-ಸುಜಾತಾ ಭಟ್ ದಂಪತಿಯ ಇಬ್ಬರು ಪುತ್ರರಲ್ಲಿ ಕಾರ್ತಿಕ್ ಕಶ್ಯಪ್ ಕಿರಿಯವರು. ಮಂಗಳೂರಿನ ಚಿನ್ಮಯ್ ಶಾಲೆ, ಅಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ ಬಳಿಕ ನಿಟ್ಟೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿದರು. ಇದಾದ ಬಳಿಕ 23ನೇ ವಯಸ್ಸಿನಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡರು. ತನ್ನ ನೆಚ್ಚಿನ ಐಪಿಎಸ್ ಕ್ಷೇತ್ರ ತೆಗೆದುಕೊಂಡು ಸೇವೆಗೆ ಸೇರಿದರು. ಐಪಿಎಸ್‌ನಲ್ಲಿ ಗುಜರಾತ್ ಕೇಡರ್ ತೆಗೆದುಕೊಂಡು ಆ ರಾಜ್ಯದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
.‘ಕನ್ನಡಿಗರು ಆಡಳಿತ ಸೇವೆಗೆ ಬರಬೇಕು’
ಯುಪಿಎಸಿಯಲ್ಲಿ ಬ್ಯಾಚ್ ಮೇಟ್ ಆಗಿರುವ ಚಂಡೀಗಢದ ಯುವತಿ ಪ್ರಿಯಾಂಕಾ ಕಶ್ಯಪ್ ಜತೆ ವಿವಾಹವಾಗಿ ಒಂದು ಹೆಣ್ಣು, ಒಂದು ಗಂಡು ಮಗು ಹೊಂದಿದ್ದಾರೆ.