ಬೆಂಗಳೂರು: ಕನ್ನಡಿಗ ಡಾ.ಹರ್ಷ ಭಾರತದದ ನಂ.1 ಗ್ಲೂಕೋಮಾ ತಜ್ಞ..!

ಜಾಗತಿಕ ಮಟ್ಟದಲ್ಲಿ ಪ್ರಕಟಿತ ಸಂಶೋಧನಾ ಲೇಖನಗಳ ಆಧಾರದ ಮೇಲೆ, ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾನಿಲಯವು ಅಕ್ಟೋಬರ್‌ ತಿಂಗಳಲ್ಲಿ ಪ್ರಕಟಿಸಿರುವ ಈ ವರ್ಷದ ಪಟ್ಟಿಯ ಪ್ರಕಾರ, ಭಾರತದ ಶ್ರೇಷ್ಠ 2 ಸಾವಿರ ವಿಜ್ಞಾನಿಗಳಲ್ಲಿ ಹರ್ಷ ಸಹ ಒಬ್ಬರು. ಶ್ರೇಷ್ಠ 20 ನೇತ್ರ ತಜ್ಞರಲ್ಲಿ ಒಬ್ಬರಾಗಿದ್ದಾರೆ ಹಾಗೂ ಗ್ಲೂಕೋಮಾ ತಜ್ಞರಲ್ಲಿ ಭಾರತದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Kannadiga Dr BL Harsha is India's No.1 Glaucoma Specialist grg

ಬೆಂಗಳೂರು(ಅ.15):  ಭಾರತದ ಗ್ಲೂಕೋಮಾ ತಜ್ಞರ ಪೈಕಿ ಬನ್ನೇರುಘಟ್ಟ ರಸ್ತೆಯಲ್ಲಿರುವ ನಾರಾಯಣ ನೇತ್ರಾಲಯದ ಸಂಶೋಧಕ ವೈದ್ಯ ಡಾ.ಬಿ.ಎಲ್‌. ಹರ್ಷ ಅವರು ಅಗ್ರಸ್ಥಾನದಲ್ಲಿದ್ದಾರೆ ಎಂದು ಅಮೆರಿಕಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯವು ಪ್ರಕಟಿಸಿದೆ.

ಹಿರಿಯ ಕವಿ ಬಿ.ಆರ್‌.ಲಕ್ಷ್ಮಣರಾವ್‌ ಅವರ ಹಿರಿಯ ಪುತ್ರರಾಗಿರುವ ಡಾ.ಬಿ.ಎಲ್‌.ಹರ್ಷ ಅವರು, ನೇತ್ರ ತಜ್ಞರಾಗಿದ್ದು, ಗ್ಲೂಕೋಮಾ ಕ್ಷೇತ್ರದಲ್ಲಿ ವಿಶೇಷ ತಜ್ಞರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಪ್ರಕಟಿತ ಸಂಶೋಧನಾ ಲೇಖನಗಳ ಆಧಾರದ ಮೇಲೆ, ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾನಿಲಯವು ಅಕ್ಟೋಬರ್‌ ತಿಂಗಳಲ್ಲಿ ಪ್ರಕಟಿಸಿರುವ ಈ ವರ್ಷದ ಪಟ್ಟಿಯ ಪ್ರಕಾರ, ಭಾರತದ ಶ್ರೇಷ್ಠ 2 ಸಾವಿರ ವಿಜ್ಞಾನಿಗಳಲ್ಲಿ ಹರ್ಷ ಸಹ ಒಬ್ಬರು. ಶ್ರೇಷ್ಠ 20 ನೇತ್ರ ತಜ್ಞರಲ್ಲಿ ಒಬ್ಬರಾಗಿದ್ದಾರೆ ಹಾಗೂ ಗ್ಲೂಕೋಮಾ ತಜ್ಞರಲ್ಲಿ ಭಾರತದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ನಿಮ್ಮ ಬ್ಲಡ್ ಗ್ರೂಪಿಗೆ ತಕ್ಕಂತೆ ಡಯಟ್ ಮಾಡಿ, ಆರೋಗ್ಯ ಹೇಗೆ ಇಂಪ್ರೂವ್ ಆಗುತ್ತೆ ನೋಡಿ!

ಈ ಮಾಹಿತಿಯನ್ನು ಕನ್ನಡಪ್ರಭದೊಂದಿಗೆ ಹಂಚಿಕೊಂಡಿರುವ ಲಕ್ಷ್ಮಣರಾವ್ ಅವರು, ತಮ್ಮ ಪುತ್ರನ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದು, ಅಭಿನಂದಿಸಿದ್ದಾರೆ.

Latest Videos
Follow Us:
Download App:
  • android
  • ios