* ಕನ್ನಡ ಬಾವುಟ ಹಾರಿಸಿದ ಕನ್ನಡ ಅಭಿಮಾನಿಗಳು * ಇತ್ತೀಚೆಗೆ ಗಾಳಿ, ಮಳೆಯಿಂದ ಹರಿದಿದ್ದ ಕನ್ನಡ ಬಾವುಟ * ಧ್ವಜಸ್ತಂಭದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್
ಬೆಳಗಾವಿ(ಜು.14): ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಎದುರು ಮತ್ತೆ ಹೊಸ ಕನ್ನಡ ಬಾವುಟ ಹಾರಾಡಿದೆ. ಹರಿದ ಕನ್ನಡ ಬಾವುಟವನ್ನು ಬದಲಿಸಿ, ಹೊಸ ಬಾವುಟ ಹಾರಿಸುವಂತೆ ನಾನಾ ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತಿದ್ದರೂ ಜಿಲ್ಲಾಡಳಿತ, ಪಾಲಿಕೆ ಕ್ರಮಕೈಗೊಂಡಿರಲಿಲ್ಲ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕನ್ನಡ ಅಭಿಮಾನಿಗಳು ಮಂಗಳವಾರ ಬೆಳಗಿನ ಜಾವ ಹರಿದ ಕನ್ನಡ ಬಾವುಟ ತೆರವುಗೊಳಿಸಿ, ಮತ್ತೆ ಹೊಸದಾಗಿ ಕನ್ನಡ ಬಾವುಟವನ್ನು ಹಾರಿಸಿದ್ದಾರೆ.
ಮಾಸಿ, ಹರಿದು ಹೋದ ಕನ್ನಡ ಧ್ವಜ ಬದಲಿಸಲು ಹೋದವರನ್ನ ವಶಕ್ಕೆ ಪಡೆದ ಪೊಲೀಸ್ರು: ಕರ್ನಾಟಕದ ಸ್ಥಿತಿ
ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹೋರಾಟ ನಡೆಸಿ, ಧ್ವಜಸ್ತಂಭ ನಿರ್ಮಿಸಿ, ಕನ್ನಡ ಬಾವುಟ ಹಾರಿಸಿದ್ದರು. ಇತ್ತೀಚೆಗೆ ಗಾಳಿ, ಮಳೆಯಿಂದ ಕನ್ನಡ ಬಾವುಟ ಹರಿದಿತ್ತು. ಧ್ವಜಸ್ತಂಭದ ಸುತ್ತ ಬಿಗಿ ಪೊಲೀಸ್ ಕಾವಲಿದ್ದರೂ ಅವರ ಕಣ್ತಪ್ಪಿಸಿ ಹೊಸ ಬಾವುಟ ಅಳವಡಿಸಿದ್ದಾರೆ.
