* ಬೆಳಗಾವಿ ಮಹಾನಗರ ಪಾಲಿಕೆ ಎದುರು ಹೈಡ್ರಾಮಾ* ಬಣ್ಣ ಮಾಸಿ ಹರಿದು ಹೋದ ಕನ್ನಡ ಧ್ವಜ ತೆರವು ಮಾಡಿ ಹೊಸ ಧ್ವಜ ಅಳವಡಿಕೆಗೆ ಬಂದಿದ್ದ ಹೋರಾಟಗಾರರು ವಶಕ್ಕೆ* 10ಕ್ಕೂ ಹೆಚ್ಚು ಪ್ರತಿಭಟನಾಕಾರರ‌ನ್ನು ವಶಕ್ಕೆ ಪಡೆದ ಪೊಲೀಸರು

ಬೆಳಗಾವಿ, (ಜುಲೈ.05): ಬಣ್ಣ ಮಾಸಿ ಹರಿದು ಹೋದ ಕನ್ನಡ ಧ್ವಜ ತೆರವು ಮಾಡಿ ಹೊಸ ಧ್ವಜ ಅಳವಡಿಕೆಗೆ ಬಂದಿದ್ದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕನ್ನಡ ಧ್ವಜ ಹಾಗೂ ಹಗ್ಗ ತೆಗೆದುಕೊಂಡು ಬಂದಿರುವ ಕನ್ನಡಪರ ಹೋರಾಟಗಾರರು ಇಂದು (ಸೋಮವಾರ) ಕನ್ನಡಧ್ವಜ ಸ್ತಂಭ ಸುತ್ತ ಹಾಕಿದ್ದ ಬ್ಯಾರಿಕೇಡ್ ತೆರವುಗೊಳಿಸಲು ಯತ್ನಿಸಿದರು. ಆದ್ರೆ, ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಒತ್ತಾಯಪೂರ್ವಕವಾಗಿ ವಶಕ್ಕೆ ಕರೆದೊಯ್ದಿದರು ಪಡೆದುಕೊಂಡರು.

ಬೆಳಗಾವಿ: ಕನ್ನಡ ಧ್ವಜ ಹಾರಿಸಿದ್ದ ತಾಳೂಕರ ಅಂಗಡಿಗೆ ಬೆಂಕಿ

ಬಣ್ಣ ಮಾಸಿ, ಹರಿದು ಹೋಗಿರುವ ಕನ್ನಡ ಧ್ವಜವನ್ನು ಬದಲಿಸಬೇಕೆಂದು ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಮೂರು ತಿಂಗಳಿಂದ ಮನವಿ ಮಾಡುತ್ತಿದ್ದರೂ ಧ್ಚಜ ಬದಲಾವಣೆ ಮಾಡಿಲ್ಲ. ಉದ್ದೇಶಪೂರ್ವಕವಾಗಿ ಪಾಲಿಕೆ ಹೀಗೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಈ ಹಿಂದೆ ಡಿಸೆಂಬರ್ 28ರಂದು ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ಹಾರಾಡಿಸಲಾಗಿತ್ತು. ಈ ವೇಳೆ ಬೆಳಗಾವಿಯಲ್ಲಿ ಪರ ವಿರೋಧ ಪ್ರತಿಭಟನೆಯೂ ನಡೆದಿತ್ತು.