ಕನ್ನಡ ಫಲಕ ಅಭಿಯಾನ ಆರಂಭ : ಎಲ್ಲೆಡೆ ಕನ್ನಡ ಕಾರು ಓಡಾಟ
ಇಂದಿನಿಂದ ನಗರದಲ್ಲಿ ಕನ್ನಡ ನಾಮಫಲಕ ಅಭಿಯಾನ ಆರಮಭ ಮಾಡಲಾಗುತ್ತಿದೆ. ಎಲ್ಲೆಡೆ ಕನ್ನಡ ಪ್ರತಿಬಿಂಬಿಸುವ ಕಾರುಗಳು ಸಂಚರಿಸಲಿವೆ ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ.
ಬೆಂಗಳೂರು (ಜ.27): ಕನ್ನಡ ಬಾವುಟದ ರಂಗು ಅಕ್ಷರಗಳ ಪ್ರತಿಬಿಂಬಿಸುವ ಕಾರು ಇಂದಿನಿಂದ ಸಂಚಾರ ಮಾಡಲಿವೆ. 28 ವಿಧಾನಸಭಾ ಕ್ಷೇತ್ರದಲ್ಲೂ ಕನ್ನಡ ಕಾರು ಓಡಾಟ ಮಾಡಲಿವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಮಂಜುನಾಥ್ ಪ್ರಸಾದ್ ಕನ್ನಡ ಫಲಕ ಅಭಿಯಾನದಲ್ಲಿ ಎಲ್ಲ ಅಂಗಡಿ ,ಮುಂಗಟ್ಟುಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ? ಶೇ.68 ರಷ್ಟು ಕನ್ನಡ ಕಡ್ಡಾಯವಾಗಿ ಇರಲೇಬೇಕು. ತಪ್ಪಿದ್ದರೆ ಟ್ರೆಡ್ ಲೈಸೆನ್ಸ್ ಹಾಕಬೇಕು ಎಂದು ಹೇಳಲಾಗಿತ್ತು. ಪಾಲಿಕೆ ಕನ್ನಡ ಕಡ್ಡಾಯ ವಿಚಾರವನ್ನ ಕೋರ್ಟ್ ಗೆ ಹಾಕಲಾಯ್ತು. ಜಾಹೀರಾತು ಬೈಲಾ ಪ್ರಕಾರ ಕಾನೂನಾತ್ಮಕ ಕನ್ನಡ ಬಳಕೆಯನ್ನ ಸೇರ್ಪಡೆ ಮಾಡಲಿದ್ದೇವೆ ಎಂದರು.
SPBಗೆ ಪದ್ಮವಿಭೂಷಣ, ಕಂಬಾರರಿಗೆ ಪದ್ಮಭೂಷಣ, ಮಂಜಮ್ಮ ಜೋಗತಿಗೆ ಪದ್ಮಶ್ರೀ ...
ಇನ್ನು ನಾಮಫಲಕಗಳಲ್ಲಿ ಕನ್ನಡದ ಅಕ್ಷರ ತಪ್ಪಾಗಿದ್ದರೆ ಅದನ್ನ ಗುರುತಿಸಿ ಸರಿ ಪಡಿಸಲಾಗುತ್ತದೆ. 28 ಕ್ಷೇತ್ರಗಳ ಪಾಲಿಕೆ ಬೋರ್ಡ್ ಗಳು ಸಹ ಬದಲಾಯಿಸಲಾಗಿತ್ತು. ಇದುವರೆಗೂ ಕ್ರಮ ಕೈಗೊಳ್ಳಲು ಅವಕಾಶ ಸಿಗಲಿಲ್ಲ. ಕನ್ನಡದಲ್ಲೇ ಸುತ್ತೋಲೆಗಳ ಹೊರಡಿಸಬೇಕಾಗಿದೆ. ಕೇಂದ್ರ ಕಚೇರಿಗಳಿಗೆ ಹೋಗುವಾಗ ಮಾತ್ರ ಆಂಗ್ಲ ಭಾಷೆಯಲ್ಲಿ ಪತ್ರ ಬರೆಯಲಾಗುತ್ತದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.
ಕೊರೊನಾ ವ್ಯಾಕ್ಸಿನ್ ವಿಚಾರ : ಲಸಿಕೆ ಪಡೆಯುವ ವೇಳೆ ಅಭಿಪ್ರಾಯ ಕೇಳಲಾಗಿದೆ. ಖಾಸಗಿ ಆಸ್ಪತ್ರೆ ,ಸರ್ಕಾರಿ ಆಸ್ಪತ್ರೆಗಳೆ ಪಟ್ಟಿ ನೀಡಿದ್ದಾರೆ ಫಲಾನುಭವಿಗಳನ್ನು ಕೇಳಿಯೆ ಲಸಿಕೆ ಹಾಕಲಾಗುತ್ತಿದೆ ಎಂದರು.
ರಾಜ್ಯದ ಜನರಿಗೆ ಗುಡ್ ನ್ಯೂಸ್ : ಕೊರೋನಾ ಕೊನೆಯಾಗುತ್ತಿದೆ .
ಈಗಾಗಲೇ 50 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. 20 ಸಾವಿರ ಜನರಿಗೆ ನಿತ್ಯ ಲಸಿಕೆ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ವ್ಯಾಕ್ಸಿನ್ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ . ಮೊದಲ ಹಂತದ ವ್ಯಾಕ್ಸಿನ್ ವಿಚಾರವಾಗಿ ಕೇಂದ್ರ ಸರ್ಕಾರದಿಂದ ಡೆಡ್ ಲೈನ್ ಬಂದಿಲ್ಲ . ಒಂದು ವಾರದೊಳಗೆ ಮೊದಲ ಹಂತದ ವ್ಯಾಕ್ಸಿನ್ ಮುಗಿಸುವ ತಯಾರಿ ಆಗಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.
ಫ್ರೆಂಟ್ ಲೈನ್ ವರ್ಕರ್ಸ್ 30 ಸಾವಿರ ಜನರ ಪಟ್ಟಿ ಸಿದ್ದವಾಗಿದೆ . ಪೊಲೀಸ್ ಇಲಾಖೆ ,ಕಂದಾಯ ಇಲಾಖೆಗಳ ಪಟ್ಡಿಯೂ ಸಿದ್ಧವಾಗುತ್ತಿದೆ ಎಲ್ಲ ಸೇರಿ 50 ಸಾವಿರ ಜನರು ಆಗುವ ಲೆಕ್ಕವು ಇದೆ. ಕೆಲವರಿಗೆ ನಾನೇ ಖುದ್ದು ಲಸಿಕೆ ಹಾಕಿಕೊಳ್ಳಲು ತಿಳಿ ಹೇಳಿದೆ. ಹೆಲ್ತ್ ವರ್ಕರ್ಸ್ ಗೆ ತಿಳುವಳಿಕೆ ಕ್ರಮ ನಿತ್ಯ ಮಾಡಲಾಗುತ್ತಿದೆ ಎಂದರು.