SPBಗೆ ಪದ್ಮವಿಭೂಷಣ, ಕಂಬಾರರಿಗೆ ಪದ್ಮಭೂಷಣ, ಮಂಜಮ್ಮ ಜೋಗತಿಗೆ ಪದ್ಮಶ್ರೀ
ಸಾಧಕರಿಗೆ ಪದ್ಮ ಪ್ರಶಸ್ತಿ/ ಗಾಯಕ ಎಸ್‌ಪಿಬಿಗೆ ಮರಣೋತ್ತರ ಪದ್ಮ ವಿಭೂಷಣ/ ಸಾಹಿತಿ ಡಾ. ಚಂದ್ರಶೇಖರ ಕಂಬಾರರಿಗೆ ಪದ್ಮ ಭೂಷಣ/ ಕರ್ನಾಟಕದ ಐವರಿಗೆ ಗೌರವ
ನವದೆಹಲಿ(ಜ.25) ಅತ್ಯುನ್ನತ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು ಗಣ್ಯರಿಗೆ ಪುರಸ್ಕಾರ ಸಂದಿದೆ. 2021ನೇ ಸಾಲಿನಲ್ಲಿ ಒಟ್ಟು 119 ಮಂದಿಯನ್ನು ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಧಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕರ್ನಾಟಕದ ಐದು ಮಂದಿ ಸಾಧಕರನ್ನು ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಹೆಮ್ಮೆ ಹೆಚ್ಚಿಸಿದೆ. ಸಾಹಿತ್ಯ ಕ್ಷೇತ್ರದಿಂದ ಡಾ.ಚಂದ್ರಶೇಖರ ಕಂಬಾರ ಪದ್ಮ ಭೂಷಣ ಹಾಗೂ ಆರೋಗ್ಯ ಕ್ಷೇತ್ರದಿಂದ ಡಾ.ಬಿ.ಎಂ. ಹೆಗ್ಡೆ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಾತಾ ಮಂಜಮ್ಮ ಜೋಗತಿ,ರಂಗಸ್ವಾಮಿ, ಲಕ್ಷ್ಮೀನಾರಾಯಣ ಕಶ್ಯಪ್, ಹಾಗೂ ಕೆ.ವೈ.ವೆಂಕಟೇಶ್ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.
ಕರ್ನಾಟಕ ಮತ್ತು ಎಸ್‌ಪಿಬಿ.. ಬಹುದೊಡ್ಡ ಬಾಂಧವ್ಯ
ಪದ್ಮ ವಿಭೂಷಣ (7) ಪ್ರಶಸ್ತಿಗೆ ಆಯ್ಕೆಯಾದವರು: ಜಪಾನ್ ದೇಶ ಮಾಜಿ ಪ್ರಧಾನಿ ಶಿಂಜೋ ಅಬೆ, ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ(ಮರಣೋತ್ತರ),ಡಾ.ಬೆಳ್ಳೆ ಮೋನಪ್ಪ ಹೆಗ್ಡೆ(ವೈದ್ಯಕೀಯ) ಮರಳು ಶಿಲ್ಪಿ ಸುದರ್ಶನ್ ಸಾಹೋ, ವಾಸ್ತುಶಿಲ್ಪಿ ಬಿಬಿ ಲಾಲ್, ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ನರೀಂದರ್ ಸಿಂಗ್, ಆಧಾತ್ಮ ಕ್ಷೇತ್ರದಲ್ಲಿ ಮೌಲಾನಾ ವಹಿದುದ್ದೀನ್ ಖಾನ್ ಅವರಿಗೆ ಗೌರವ ನೀಡಲಾಗಿದೆ.