ಮೈಸೂರು(ಜ.29): ತಮ್ಮ ಬಾಲ್ಯದ ಸ್ನೇಹಿತ ಉಪಮೇಯರ್‌ ಆಗಿರುವುದನ್ನು ಕೇಳಿ ತಾವಿರುವ ಜಾಗಕ್ಕೆ ಕರೆಸಿಕೊಂಡು ಸರ್‌ಪ್ರೈಸ್‌ ಆಗಿ ಕೇಕ್‌ ತಿನ್ನಿಸುವ ಮೂಲಕ ನಟ ದರ್ಶನ್‌ ಸ್ನೇಹತ್ವ ಮೆರೆದಿದ್ದಾರೆ.

ಬೆಳಗ್ಗೆ ಉಪಮೇಯರ್‌ ಶ್ರೀಧರ್‌ ಮೊಬೈಲ್‌ಗೆ ಕರೆ ಮಾಡಿ ತಾವಿರುವ ಹೋಟೆಲ್‌ಗೆ ಬರುವಂತೆ ಆಹ್ವಾನಿಸಿದ್ದಾರೆ. ಅಲ್ಲಿಗೆ ಹೋದ ಶ್ರೀಧರ್‌ಗೆ ಅಚ್ಚರಿ ಕಾದಿತ್ತು. ಎದುರಿಗಿದ್ದ ಕೇಕ್‌ ಕತ್ತರಿಸುವಂತೆ ಆಹ್ವಾನಿಸಿದ ದರ್ಶನ್‌, ಸ್ನೇಹಿತನಿಗೆ ಅಕ್ಕರೆಯ ಕೇಕ್‌ ತಿನ್ನಿಸಿ ಶುಭಾಶಯ ಕೋರಿದ್ದಾರೆ.

'ರಾಬರ್ಟ್‌' ಚಿತ್ರದಲ್ಲಿ ದರ್ಶನ್‌ಗೆ ಜೋಡಿಯಾದ ಯುವನಟಿ ಐಶ್ಚರ್ಯ!

ಭೇಟಿಯಾದ ಸಂದರ್ಭ ಇಬ್ಬರೂ ಗೆಳೆಯರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದ ಶ್ರೀಧರ್‌ ಮತ್ತು ದರ್ಶನ್‌ ಎಷ್ಟೋ ಸಲ ಮನೆಯವರಿಗೆ ಗೊತ್ತಾಗದ ಹಾಗೆ ಕದ್ದು ಸಿನೆಮಾ ನೋಡಿದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.