ಮಂಗಳೂರು(ಫೆ.18): ಕಂಬಳ ವೀರನ ಸುದ್ದಿ ವೈರಲ್ ಆಗ್ತಿದ್ದಂತೆ ಇದನ್ನೇ ಸಿನಿಮಾ ಮಾಡೋ ಯೋಚನೆಯೂ ಸದ್ದು ಮಾಡಿದೆ. ಈಗಾಗಲೇ ಕರಾವಳಿ ಭಾಗದ ನಿರ್ಮಾಪಕರೊಬ್ಬರು ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟರ್ ಮಾಡಿದ್ದಾರೆ.

"

ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟರ್ ಮಾಡಲಾಗಿದ್ದು, ಕಂಬಳ ಕ್ರೀಡೆ ವಿಶ್ವಮಟ್ಟದಲ್ಲಿ ಹೆಸರು ಪಡೆದ ಘಟನೆ ಬಗ್ಗೆ ಕನ್ನಡ ಸಿನಿಮಾ ನಿರ್ಮಾಣವಾಗಲಿದೆ.

ವಿಶ್ವಖ್ಯಾತ ಉಸೇನ್‌ ಬೋಲ್ಟ್‌ಗಿಂತ ಸ್ಪೀಡಾಗಿ ಓಡಿದ ತುಳುನಾಡಿನ ಕಂಬಳವೀರ!

ದಕ್ಷಿಣ ಕನ್ನಡ ಜಿಲ್ಲೆ ಮೂಲದ ನಿರ್ಮಾಪಕ ಲೊಕೇಶ್ ಶೆಟ್ಟಿ ಅವರು 10,500 ರೂ. ಹಣ ಕಟ್ಟಿ ಟೈಟಲ್ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ನಿಖಿಲ್ ಮಂಜು ನಿರ್ದೇಶನದಲ್ಲಿ ಸಿನಿಮಾ ಬರಲಿದ್ದು, ಮುಂದಿನ ವಾರ ಮಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಕಂಬಳವೀರನಿಗೆ ಮೆಚ್ಚುಗೆ ಮಹಾಪೂರ: ಬಾಹುಬಲಿ 2ರಲ್ಲೂ ನಟಿಸಿದ್ದ ಶ್ರೀನಿವಾಸ!

ಶ್ರೀನಿವಾಸ ಗೌಡ ಮತ್ತು ನಿಶಾಂತ್ ಶೆಟ್ಟಿ ದಾಖಲೆ ಹಿನ್ನಲೆ ಚಿತ್ರ ತಯಾರಾಗಲಿದೆಇವರಿಬ್ಬರ ಪಾತ್ರದಲ್ಲಿ ನಟಿಸಲಿರುವ ಹೀರೋಗಳಿಗಾಗಿ ಶೋಧ ಆರಂಭವಾಗಿದೆ. ಈಗಾಗಲೇ ದೇಶ, ವಿದೇಶದಲ್ಲಿ ಸದ್ದು ಮಾಡಿರುವ ಕಂಬಳ ಸಿನಿಮಾ ರೂಪದಲ್ಲಿ ಹೇಗೆ ಮೂಡಿಬರಲಿದೆ ಎಂದು ಕಾದು ನೋಡಬೇಕಿದೆ.

ಬೋಲ್ಟ್‌ಗಿಂತ ಸ್ಪೀಡ್ ಈ ತುಳುನಾಡ ಕಂಬಳವೀರ: ವೇಗಕ್ಕೆ ಸಾಟಿಯೇ ಇಲ್ಲ!