Kalaburagi: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಾಧಕರಿಗೆ ಅವಮಾನ!

ಇಲ್ಲಿನ ಜ್ಞಾನಗಂಗೆ ಅಂಗಳದಲ್ಲಿ ಆರಂಭವಾಗಿರುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸ್ಥಳೀಯ ಕಲಾವಿದರನ್ನು ಕಡೆಗಣಿಸಿರುವ ಕೂಗಿನ ಬೆನ್ನಲ್ಲೇ ಇದೀಗ ಈ ಭಾಗದ ಸಾಧಕರಿಗೆ ಗೌರವಿಸುವ ನೆಪದಲ್ಲಿ ಅಗೌರವ ತೋರಲಾಗಿದೆ ಎಂದು ಕೆಕೆಆರ್‌ಡಿಬಿ ಧೋರಣೆಯೇ ತೀವ್ರ ಟೀಕೆಗೆ ಗುರಿಯಾಗಿದೆ.

Kalyana Karnataka Utsav: Artist neglected at kalburgi rav

ಶೇಷಮೂರ್ತಿ ಅವಧಾನಿ

 ಕಲಬುರಗಿ (ಫೆ.26) : ಇಲ್ಲಿನ ಜ್ಞಾನಗಂಗೆ ಅಂಗಳದಲ್ಲಿ ಆರಂಭವಾಗಿರುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸ್ಥಳೀಯ ಕಲಾವಿದರನ್ನು ಕಡೆಗಣಿಸಿರುವ ಕೂಗಿನ ಬೆನ್ನಲ್ಲೇ ಇದೀಗ ಈ ಭಾಗದ ಸಾಧಕರಿಗೆ ಗೌರವಿಸುವ ನೆಪದಲ್ಲಿ ಅಗೌರವ ತೋರಲಾಗಿದೆ ಎಂದು ಕೆಕೆಆರ್‌ಡಿಬಿ ಧೋರಣೆಯೇ ತೀವ್ರ ಟೀಕೆಗೆ ಗುರಿಯಾಗಿದೆ.

ಉತ್ಸವದಲ್ಲಿ ಕಲ್ಯಾಣ ಕರ್ನಾಟಕ(Kalyana Karnataka)ದವರನ್ನು ಸನ್ಮಾನಿಸಲಾಗುತ್ತಿದೆ, ಸಾಧಕರು ತಮ್ಮ ಸಾಧನೆಯ ವಿವರಗಳೊಂದಿಗೆ ಮಾಹಿತಿ ಕೊಡಿ ಎಂದು ಕೆಕೆಆರ್‌ಡಿಬಿ ಪ್ರಕಟಣೆ ನೀಡಿದ್ದಲ್ಲದೆ ಅದಕ್ಕೊಬ್ಬ ಉಪ ಕಾರ್ಯದರ್ಶಿ ಮಟ್ಟದ ಅಧಿಕಾರಿ ನೇಮಕ ಮಾಡಿ, ಸಾಧಕರ ಗುರುತಿಸುವ ಸಲುವಾಗಿಯೇ ಸ್ಕ್ರೀನಿಂಗ್‌ ಕಮೀಟಿ ಮಾಡಿದ್ದಾಗಿಯೂ ಹೇಳಿಕೊಂಡಿತ್ತು.

 

Kalyana Karnataka Utsav 2023: ಕಲ್ಯಾಣ ಕರ್ನಾಟಕದ ಗತ ವೈಭವದ ವಾರಸುದಾರರಾಗಿ ಎಂದು ಸೇಡಂ ಕರೆ

ಮಂಡಳಿಯ ಪ್ರಕಟಣೆ ನಂಬಿದ್ದ ವಿವಿಧ ಕ್ಷೇತ್ರಗಳ ಪ್ರಾಮಾಣಿಕ ಸಾಧಕರು ತಮ್ಮೆಲ್ಲ ಸಾಧನೆ ಒಳಗೊಂಡ ಕಿರು ಮಾಹಿತಿ ಕೆಕೆಆರ್‌ಡಿಬಿಗೆ ಸಲ್ಲಿಸಿದ್ದರು. ಆದರೆ ವಾಸ್ತವದಲ್ಲಿ ನಡೆದದ್ದೇ ಬೇರೆಯಾಗಿತ್ತು!

ತಮ್ಮೆಲ್ಲ ಮಾಹಿತಿ ಸಲ್ಲಿಸಿದ ಸಾಧಕರಿಗೆ ಕೆಕೆಆರ್‌ಡಿಬಿ(KKRDB)ಯಿಂದ ಸನ್ಮಾನದ ಯುವಾದೇ ಮಾಹಿತಿ ದೊರಕಲಿಲ್ಲ, ಅದಕ್ಕೆ ಬದಲಾಗಿ ಆಯಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇರುವ ಸಂಘಟನೆಗಳು, ಆ ಕ್ಷೇತ್ರಗಳನ್ನೇ ಗುತ್ತಿಗೆ ಪಡೆದಿರುವ ದಲ್ಲಾಳಿಗಳು, ಏಜಂಟರು, ಅಧಿಕಾರಿಗಳ ಬಾಲ ಬುಡುಕರಿಂದ ಗೌರವ ಸನ್ಮಾನದ ಮಾಹಿತಿ ರವಾನೆಯಾಗಿತ್ತು! ಹೀಗೂ ಮಾಹಿತಿ ಕೆಲವರಿಗೆ ಸಿಕ್ಕರೆ ಇನ್ನೂ ಹಲವರಿಗೆ ಸಿಗಲೇ ಇಲ್ಲ!

ಬೇಕಾಬಿಟ್ಟಿಸನ್ಮಾನ:

ಉತ್ಸವ ಉದ್ಘಾಟನೆಯ ಮುಖ್ಯ ವೇದಿಕೆ ಸಮಾರಂಭ ಮುಗಿದು ಮಂಗಳ ಹಾಡಿ ಇನ್ನೇನು ಸಂಗೀತಗಾರರು, ನೃತ್ಯಕಲಾವಿದರಿಗಾಗಿ ಜಾಗ ಖಾಲಿ ಮಾಡಬೇಕು ಅನ್ನೋ ಹೊತ್ತಲ್ಲಿ ಸಂಘಟಕರು ಆತುರಾತುರದಲ್ಲಿ ಸಾಧಕರಿಗೆ ’ಹೋಲ್‌ಸೇಲ್‌’ ಆಹ್ವಾನಿಸುತ್ತ ಒಬ್ಬರಿಗೆ ಶಾಲು, ಇನ್ನೊಬ್ಬರಿಗೆ ಹಾರ, ಮತ್ತೊಬ್ಬರಿಗೆ ಪ್ರಮಾಣ ಪತ್ರ ಎಂಬಂತೆ ಒಬ್ಬರಿಗೆ ಒಂದು ಬಂತು, ಇನ್ನೊಬ್ಬರಿಗೆ ಇನ್ನೊಂದು ಬರಲೇ ಇಲ್ಲವೆಂಬ ಗೊಣಗಾಟ, ಗೊಂದಲದಲ್ಲಿ (ಅ) ಗೌರವಿಸಿ ಕೈತೊಳೆದುಕೊಂಡರು. ಅನೇಕ ಸಾಧಖರಿಗೆ ವೇದಿಕೆಯಲ್ಲಿ ತಮಗೆ ಸನ್ಮಾನಿಸುತ್ತಿದ್ದಾರೋ? ಅಪಮಾನಿಸುತ್ತಿದ್ದಾರೋ ಎಂದು ಅರಿವಾಗೋದ್ರೋಳಗೆ ಎಲ್ಲವೂ ಮುಗಿದು ಹೋಗಿತ್ತು.

ಸಾಧಕರಲ್ಲಿ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಸೇರಿದಂತೆ ಹಲವರು ಇದ್ದರೂ ಸಹ ಇವರು ಇಂತಹವರು, ಇವರಿಗೆ ಈ ಕಾರಣಕ್ಕೆ ಸನ್ಮಾನವೆಂದು ಹೇಳಲಿಕ್ಕೂ ಕೆಕೆಆರ್‌ಡಿಬಿ ಅಸಡ್ಡೆ ತೋರಿತ್ತು. ಸಾಧಕ ಕೃಷಿಕರು ಸೇರಿದಂತೆ ಯಾರೊಬ್ಬರ ಪರಿಚಯವೂ ಅಲ್ಲಿ ಮಾಡಲಿಲ್ಲ. ಬದಲಾಗಿ ಸಾಧಕರಿಗೆ ಗಡಿಬಿಡಿಯಲ್ಲಿ ಸನ್ಮಾನ ಮಾಡಿ ಕೈತೊಳೆದುಕೊಂಡಿತ್ತು. ಮಂಡಳಿಯ ಈ ನಡೆ ಸಾಧಕರನ್ನೆಲ್ಲ ತೀವ್ರ ಮುಜುಗರಕ್ಕೆ ಸಿಲುಕಿಸಿತು.

ಸಾಧಕರಿಗೇ ಪ್ರತ್ಯೇಕ ಆಸನ ವ್ಯವಸ್ಥೆ ಇಲ್ಲಿರಲಿಲ್ಲ, ಅಷ್ಟೇ ಯಾಕೆ, ಹೆಸರು ಕರೆದಾಗ ಅಲ್ಲಿ ಇಲ್ಲಿ ಕುಳಿತಂತಹ ಸಾಧಕರು ವೇದಿಕೆಗೆ ಹೋಗಲೂ ಹರಸಾಹಸಪಟ್ಟರು. ಇಂತಹ ಗೌರವ ಸನ್ಮಾನ ಯಾವ ಪುರುಷಾರ್ಥಕ್ಕಾಗಿ? ಎಂದು ಬಹುತೇಕರು ವ್ಯಥೆಪಟ್ಟರು.

ಕಲ್ಯಾಣ ನಾಡು ಪ್ರತಿಭೆ, ಸಾಧಕರ ಬೀಡು. ಎಲ್ಲಾ ರಂಗಗಳಲ್ಲಿ ಅಪ್ರಮತಿರು ಇಲ್ಲಿದ್ದರೂ ಕೆಕೆಆರ್‌ಡಿಬಿ ಅಂತಹವರನ್ನು ಅವರವರ ಸಾಧನೆಗೆ ತಕ್ಕಂತೆ ಗುರುತಿಸಿ ಯೋಗ್ಯ ರೀತಿಯಲ್ಲಿ ಸತ್ಕರಿಸುವಲ್ಲಿಯೂ ಎಡವಿದ್ದು ಕಲ್ಯಾಣ ನಾಡಿನ ಉತ್ಸವದಲ್ಲಿ ಕಪ್ಪುಚುಕ್ಕೆಯಾಗಿ ದಾಖಲಾಯ್ತು.

Kalyana Karnataka Utsav: ಇಂದಿನಿಂದ ಅದ್ಧೂರಿಯಾಗಿ ಕಲ್ಯಾಣ ಕರ್ನಾಟಕ ಉತ್ಸವ

ಕಲ್ಯಾಣ ಕರ್ನಾಟಕ ಉತ್ಸವ(Kalyana Karnataka Utsav)ದಲ್ಲಿ ನಮ್ಮನ್ನು ಯಾಕೆ ಸನ್ಮಿನಸಲಾಗುತ್ತಿದೆ ಎಂಬುದು ಜನಕ್ಕೆ ಗೊತ್ತಾಗಬೇಕಿತ್ತು. ಶಿಸ್ತಿನಿಂದ ಮುತುವರ್ಜಿಯಿಂದ ಕಾರ್ಯಕ್ರಮ ಆಯೋಜಿಸಬೇಕಿತ್ತು. ಆದರೆ ಶಿಸ್ತಿನಿಂದ ಸತ್ಕಾರ ಸಮಾರಂಭ ನಡೆಸದೆ ಮಂಡಳಿ ಎಡವಿದೆ. ಕಾಟಾಚಾರಕ್ಕೆ ಎಂಬಂತೆ ಎಲ್ಲರನ್ನು ಸತ್ಕರಿಸಲಾಗಿದೆ, ಇದು ಸಾಧಕರಿಗೆ ಅಪಮಾನ ಮಾಡಿದಂತೆಯೇ ಸರಿ. ಇಂತಹ ಸನ್ಮಾನ ಭಿಕ್ಷೆಗೆ ಸಮಾನ. ನಾವೆಲ್ಲರೂ ಸೇರಿ ಕೆಕೆಆರ್‌ಡಿಬಿಯಂತಹ ಮಂಡಳಿಯಿಂದ ಆಗಿರುವ ಈ ಬೇಕಾಬಿಟ್ಟಿಸನ್ಮಾನವನ್ನ ಉಗ್ರವಾಗಿ ಖಂಡಿಸಲೇಬೇಕು.

- ಶಿವಶರಣಪ್ಪ ವಾಲಿ, ಹಿರಿಯ ಪತ್ರಕರ್ತರು. ಬೀದರ್‌

Latest Videos
Follow Us:
Download App:
  • android
  • ios