ಗಿನ್ನಿಸ್ ವಿಶ್ವದಾಖಲೆಯ ಯೋಗಾಥಾನ್-2022ಕ್ಕೆ ಕಲಬುರಗಿ ಸಜ್ಜು
ರಾಷ್ಟ್ರೀಯ ಯುವಜನೋತ್ಸವ ಅಂಗವಾಗಿ ಗಿನ್ನಿಸ್ ವಿಶ್ವದಾಖಲೆಯ ಯೋಗಾಥಾನ್-2022ಕ್ಕೆ ಕಲಬುರಗಿ ಸಜ್ಜುಗೊಂಡಿದೆ. ಜನವರಿ 15 ರವಿವಾರ ಬೆಳಿಗ್ಗೆ 6 ರಿಂದ 8.30 ಗಂಟೆ ವರೆಗೆ ಕಲಬುರಗಿ ನಗರದ ಪೊಲೀಸ್ ಗ್ರೌಂಡ್ ಮತ್ತು ಎನ್.ವಿ.ಮೈದಾನದಲ್ಲಿ ಬೃಹತ್ ಪ್ರಮಾಣದಲ್ಲಿ ಶಿಷ್ಠಾಚಾರದ ಯೋಗಾಭ್ಯಾಸ ಹಮ್ಮಿಕೊಳ್ಳಲಾಗಿದೆ.
ಕಲಬುರಗಿ (ಜ.14): ರಾಷ್ಟ್ರೀಯ ಯುವಜನೋತ್ಸವ ಅಂಗವಾಗಿ ಗಿನ್ನಿಸ್ ವಿಶ್ವದಾಖಲೆಯ ಯೋಗಾಥಾನ್-2022ಕ್ಕೆ ಕಲಬುರಗಿ ಸಜ್ಜುಗೊಂಡಿದೆ. ಜನವರಿ 15 ರವಿವಾರ ಬೆಳಿಗ್ಗೆ 6 ರಿಂದ 8.30 ಗಂಟೆ ವರೆಗೆ ಕಲಬುರಗಿ ನಗರದ ಪೊಲೀಸ್ ಗ್ರೌಂಡ್ ಮತ್ತು ಎನ್.ವಿ.ಮೈದಾನದಲ್ಲಿ ಬೃಹತ್ ಪ್ರಮಾಣದಲ್ಲಿ ಶಿಷ್ಠಾಚಾರದ ಯೋಗಾಭ್ಯಾಸ ಹಮ್ಮಿಕೊಂಡಿದ್ದು, 20 ಸಾವಿರಕ್ಕೂ ಹೆಚ್ಚಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನೋಂದಣಿ ಮಾಡಿಕೊಂಡ ಸಾರ್ವಜನಿಕರು ಯೋಗಾಭ್ಯಾಸದಲ್ಲಿ ಭಾಗವಹಿಸಲಿದ್ದಾರೆ.
ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಆಯುಷ್ ಇಲಾಖೆ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಮಹಾನಗರ ಪಾಲಿಕೆ, ಎನ್.ಸಿ.ಸಿ, ಎನ್.ಎಸ್.ಎಸ್. ಹಾಗೂ ಜಿಲ್ಲಾ ಮಟ್ಟದ ಯೋಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಶಿಷ್ಟಾಚಾರದಂತೆ ಜಿಲ್ಲೆಯ ಜನಪ್ರತಿನಿಧಿಗಳು ಪೊಲೀಸ್ ಗ್ರೌಂಡ್ನಲ್ಲಿ ಉದ್ಘಾಟಿಸಲಿದ್ದಾರೆ.
Kanakapura: ಉತ್ತಮ ಆರೋಗ್ಯಕ್ಕೆ ಯೋಗಾಸನ ಮದ್ದು: ಡಿ.ಕೆ.ಶಿವಕುಮಾರ್
ಯೋಗಾಭ್ಯಾಸಕ್ಕೆ ಶಾಲಾ-ಕಾಲೇಜು ಮಕ್ಕಳನ್ನು ಕರೆತರಲು ಸಾರಿಗೆ ವ್ಯವಸ್ಥೆ ಮಾಡಿದೆ. ಇದಲ್ಲದೆ ಎರಡು ಮೈದಾನದಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಬಂದೋಬಸ್ತ್ ಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಯೋಗಾಭ್ಯಾಸಕ್ಕೆ ಗ್ರೀನ್ ಮ್ಯಾಟ್ ಸಹ ಹಾಕಲಾಗಿದೆ. ಶಿಷ್ಠಚಾರದ ಪ್ರಕಾರ ಯೋಗಾಬ್ಯಾಸ ಮಾಡಿಸಲು ಎರಡು ಮೈದಾನದಲ್ಲಿ ತಲಾ 15 ಯೋಗ ಶಿಕ್ಷಕರು ಇರಲಿದ್ದಾರೆ.
National Youth Festival:15ರಂದು ಗಿನ್ನಿಸ್ ದಾಖಲೆಗೆ ಯೋಗಥಾನ್!
ಗಿನ್ನೀಸ್ ದಾಖಲೆಗೆ ಯತ್ನ:
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರವಿವಾರ ಬೆಳಿಗ್ಗೆ 6 ರಿಂದ 8.30 ಗಂಟೆ ವರೆಗೆ ಏಕಕಾಲದಲ್ಲಿ 10 ಸಾವಿರ ಬೋಧಕರು ಮತ್ತು 10 ಲಕ್ಷ ಜನರಿಂದ ಯೋಗಾಭ್ಯಾಸ ನಡೆಯಲಿದ್ದು, ಇದರಲ್ಲಿ ಕಲಬುರಗಿ ಜಿಲ್ಲೆಯಿಂದ 20 ಸಾವಿರ ಜನ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ವಿಶ್ವದಾಖಲೆಯನ್ನಾಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರವು ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮ ದಾಖಲೀಕರಣಕ್ಕೆ ಈಗಾಗಲೇ ಗಿನ್ನೀಸ್ ತಂಡ ಕಲಬುರಗಿಗೆ ಆಗಮಿಸಿದೆ.