ಕಲಬುರಗಿ(ಜೂ.12): 8 ತಿಂಗಳಿಂದ ಕಲಬುರಗಿ-ಬೆಂಗಳೂರು ನಡುವೆ ವಿಮಾನ ಸೇವೆ ನೀಡುತ್ತಿರುವ ಸ್ಟಾರ್‌ ಏರ್‌ ಸಂಸ್ಥೆ ಇದೀಗ ಕಲಬುರಗಿ ವಿಮಾನ ನಿಲ್ದಾಣದಿಂದ ಬೆಂಗಳೂರು ಮತ್ತು ಬೆಳಗಾವಿ ಮಾರ್ಗವಾಗಿ ಮುಂಬೈಗೆ ಪ್ರಾಯೋಗಿಕ ವಿಮಾನ ಹಾರಾಟಕ್ಕೆ ಮುಂದಾಗಿದೆ. 

ಶನಿವಾರ ಮಾತ್ರ ಈ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲು ಉದ್ದೇಶಿಸಿದ್ದು, ಜೂ.13ರಂದು ವಿಮಾನಯಾನ ಆರಂಭವಾಗಲಿದೆ. ಕಲಬುರಗಿಯಿಂದ ಬೆಳಗ್ಗೆ 10.20 ಗಂಟೆಗೆ ವಿಮಾನ ಹೊರ​ಡ​ಲಿದೆ. ಹೊರಡಲಿರುವ ವಿಮಾನ 11.25ಕ್ಕೆ ಬೆಂಗಳೂರು ತಲುಪಲಿದ್ದು, ಅಲ್ಲಿಂದ ಹೊರಟು ಮಧ್ಯಾಹ್ನ 1ಕ್ಕೆ ಬೆಳಗಾವಿ ತಲುಪಿಲಿದ್ದು, ಅಲ್ಲಿಂದ ಹೊರಡಲಿರುವ ವಿಮಾನ 2.40ಕ್ಕೆ ಬಾಂಬೆ ತಲುಪಲಿದೆ.

ಬಿಜೆಪಿ ಶಾಸಕರು ಒಂದುಕಡೆ ಕೂಡೋದೇ ತಪ್ಪಾ?: ಸಚಿವ ಈಶ್ವರಪ್ಪ

ಕಲಬುರಗಿ- ಬೆಳಗಾವಿ ರೆಗ್ಯುಲರ್‌ 4,300, ಕಂಫರ್ಟ್‌ 5951, ಫ್ಲೆಕ್ಸಿ .6,152, ಕಲಬುರಗಿ- ಮುಂಬೈ ರೆಗ್ಯುಲರ್‌ 8,149, ಕಂಫರ್ಟ್‌ 10,200, ಫ್ಲೆಕ್ಸಿ 10,501 ನಿಗದಿ ಪಡಿಸಿದೆ.