ಕಲಬುರಗಿ[ಜೂ.27]: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪೋಟೊ ಜೊತೆ ತನ್ನ ಫೊಟೊ ಎಡಿಟ್ ಮಾಡಿ, ಪಾಕಿಸ್ತಾನ್ ಜಿಂದಾಬಾದ್ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದ ಕೈ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. 

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ರಾವುರ್ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಖಾಸಿಮ್ ಸಾಬ್ ಮೂರೂವರೆ ನಿಮಿಷದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದ. ಇದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಸಾಂಗ್ ಹಾಕಿ, ತನ್ನ ಹಾಗೂ ದಾವೂದ್ ಇಬ್ರಾಹಿಂ ಪೋಟೋ ಕೂಡಾ ಹಾಕಿಕೊಂಡಿದ್ದ. 

ಈ ವಿಡಿಯೋ ಶೇರ್ ಮಾಡಿಕೊಂಡಿರುವ ಬೆನ್ನಲ್ಲೇ ಬುಧವಾರ ತಡರಾತ್ರಿ ವಾಡಿ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತ ಖಾಸಿಮ್ ಸಾಬ್ ನನ್ನು ಬಂಧಿಸಿದ್ದಾರೆ.