Asianet Suvarna News Asianet Suvarna News

ಕಲಬುರಗಿ ವಿಮಾನ ನಿಲ್ದಾಣ ಶೀಘ್ರ ಮೇಲ್ದರ್ಜೆಗೆ: ಸಂಸದ ಉಮೇಶ ಜಾಧವ್

ದೆಹಲಿಯಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಕಲಬುರಗಿ ಸಂಸದ ಡಾ. ಉಮೇಶ ಜಾಧವ್

Kalaburagi Airport to be Upgraded Soon Says MP Umesh Jadhav grg
Author
First Published Dec 3, 2022, 7:00 AM IST

ಕಲಬುರಗಿ(ಡಿ.03): ಕಲಬುರಗಿ ವಿಮಾನ ನಿಲ್ದಾಣ ಶೀಘ್ರದಲ್ಲಿಯೇ ಮೇಲ್ದರ್ಜೆಗೇರಲಿದೆ. ಹೌದು, ಈ ಸಂಬಂಧ ಕಲಬುರಗಿ ಸಂಸದ ಡಾ. ಉಮೇಶ ಜಾಧವ್ ಅವರು ದೆಹಲಿಯಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.  ಕಲಬುರಗಿಯಿಂದ ಮುಂಬೈ, ಮಂಗಳೂರು, ಪುಣೆ, ಅಹಮದಾಬಾದ್‌ ಹಾಗೂ ವಾರಣಾಸಿ ನಗರಗಳಿಗೆ ನೂತನ ವಿಮಾನಯಾನ ಸೇವೆ ಪ್ರಾರಂಭಿಸುವುದು. ನೈಟ್ ಲ್ಯಾಂಡಿಂಗ್ ಕಾರ್ಯ ಶೀಘ್ರ ಮುಕ್ತಾಯಗೊಳಿಸಬೇಕು ಎಂದು ಸಂಸದ ಉಮೇಶ ಜಾಧವ್‌ ಮನವಿ ಮಾಡಿಕೊಂಡಿದ್ದಾರೆ.

ಕಲಬುರಗಿ - ದೆಹಲಿ ವಿಮಾನದ ಪ್ರಯಾಣವನ್ನು ವಾರಕ್ಕೆ 4 ದಿನ ಹೆಚಿಸುವುದು ಹಾಗೆಯೇ ಈಗಿರುವ ಟರ್ಮಿನಲ್ 100 ಪ್ರಯಾಣಿಕರ ಸಾಮರ್ಥ್ಯ ಹೊಂದಿದ್ದು ಇದನ್ನು 500 ಪ್ರಯಾಣಿಕರ ಸಾಮರ್ಥ್ಯಕ್ಕೆ ಮೇಲ್ದರ್ಜೆಗೆ ಪರಿವರ್ತಿಸಲು ವಿನಂತಿಸಲಾಯಿತು.

ಜೆಡಿಎಸ್‌ ಹಣದಿಂದ ರಾಜಕೀಯ ಮಾಡ್ತಿಲ್ಲ: ಎಚ್‌.ಡಿ.ದೇವೇಗೌಡ

ಇದಕ್ಕೆ ಸ್ಪಂದಿಸಿದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಲಬುರಗಿ ವಿಮಾನ ನಿಲ್ದಾಣದ ಸಂಪೂರ್ಣ ವಿವರ ಪರಿಶೀಲಿಸಿದ್ದೇನೆ. ಈ ವಿಮಾನ ನಿಲ್ದಾಣವು ಪ್ರಾರಂಭವಾಗಿದ್ದ ದಿನದಿಂದ ಪ್ರಯಾಣಿಕರ ನಿರ್ವಹಣೆ ದೃಷ್ಟಿಯಿಂದ ತುಂಬಾ ಪ್ರಗತಿಯಲ್ಲಿದೆ. UDAN-Regional Connectivity Scheme ಪ್ರಾದೇಶಿಕ ಸಂಪರ್ಕ ಯೋಜನೆಯಲ್ಲಿ ಆರಂಭವಾದ ನಿಲ್ದಾಣಗಳಲ್ಲಿ ಕಲಬುರಗಿ ಮುಂಚೂಣಿಯಲ್ಲಿದೆ ಎಂದರು. ತಾಂತ್ರಿಕ ಕಾರಣಗಳಿಂದ ನೈಟ್ ಲ್ಯಾಂಡಿಂಗ್ ಸೇವೆ ವಿಳಂಬವಾಗಿದ್ದು ಅತಿ ಶೀಘ್ರದಲ್ಲಿ ಇದನ್ನು ಮುಕ್ತಾಯಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗೆಯೇ ಕಲಬುರಗಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಕೂಡ ಕೇಂದ್ರ ವಿಮಾನಯಾನ ಸಚಿವರು ಭರವಸೆ ನೀಡಿದ್ದಾರೆ ಎಂದು ಸಂಸದ ಉಮೇಶ ಜಾಧವ್ ತಿಳಿಸಿದ್ದಾರೆ.
 

Follow Us:
Download App:
  • android
  • ios