Asianet Suvarna News Asianet Suvarna News

ನೆರೆ ಪೀಡಿತ ಪ್ರದೇಶಕ್ಕೆ ಕಾಗೋಡು ತಿಮ್ಮಪ್ಪ ಭೇಟಿ

ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಶಿವಮೊಗ್ಗದಲ್ಲಿ ನೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆನಂದಪುರ ಸುತ್ತಮುತ್ತ ಸುರಿದ ಮಳೆಯಿಂದ ಗೀಳಾಲಗುಂಡಿ, ತಂಗಳವಾಡಿ, ಹೊಸಕೊಪ್ಪ, ಕಣ್ಣೂರು, ಹೀರೆಹರಕ, ಗೌತಮಪುರ, ಭೈರಾಪುರ ಹಾಗೂ ಇತರೆ ಸ್ಥಳಗಳಿಗೆ ಭೇಟಿ ನೀಡಿ ತಕ್ಷಣವೇ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Kagodu Thimmappa Visits Flooded areas in Shivamogga
Author
Bangalore, First Published Aug 10, 2019, 1:02 PM IST

ಶಿವಮೊಗ್ಗ(ಆ.10): ಕಳೆದ 4-5 ದಿನಗಳಿಂದ ಸುರಿದ ಭಾರಿ ಮಳೆಯಿಂದ ಈ ಭಾಗದ ರೈತಾಪಿವರ್ಗದವರಿಗೆ ತುಂಬಾ ನಷ್ಠವಾಗಿದೆ. ಇದಕ್ಕೆ ತಕ್ಷಣವೇ ಪರಿಹಾರ ನೀಡುವಂತೆ ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಆನಂದಪುರ ಸುತ್ತಮುತ್ತ ಸುರಿದ ಮಳೆಯಿಂದ ಗೀಳಾಲಗುಂಡಿ, ತಂಗಳವಾಡಿ, ಹೊಸಕೊಪ್ಪ, ಕಣ್ಣೂರು, ಹೀರೆಹರಕ, ಗೌತಮಪುರ, ಭೈರಾಪುರ ಹಾಗೂ ಇತರೆ ಸ್ಥಳಗಳಿಗೆ ಭೇಟಿ ನೀಡಿ ಮಾತನಾಡಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರೈತರು ಈ ವರ್ಷ ಪ್ರಾರಂಭದಲ್ಲಿ ಮಳೆ ಪರದಾಡಿದ್ದ ರೈತರು ನಂತರ ಬಂದ ಸಣ್ಣ ಪ್ರಮಾಣ ಮಳೆಯಿಂದ ಭತ್ತದ ನಾಟಿ ಮಾಡಿದ್ದು, ಹಾಗೂ ಶುಂಠಿ, ಜೋಳ ಬೆಳೆಗಳು ನಾಲ್ಕೂದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಂಪೂರ್ಣ ನಾಶವಾಗಿದೆ. ಇದಕ್ಕೆ ಜಿಲ್ಲಾ ಆಡಳಿತ ತಕ್ಷಣವೇ ಕಾರ್ಯಪ್ರವೃತರಾಗಬೇಕು. ಹಾಗೂ ಕೃಷಿಯಲ್ಲಿ ಅಪಾರ ನಷ್ಟವನ್ನು ಅನುಭವಿಸಿದ ರೈತರಿಗೆ ಸಹಕಾರಿಯಾಗಬೇಕು. ಹಾನಿಯಾದ ವರದಿಯನ್ನು ಜಿಲ್ಲಾಧಿಕಾರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ನಿಡುವುದಾಗಿ ತಿಳಿಸಿದರು.

ಈ ವೇಳೆ ಎಪಿಎಂಸಿ ಸದಸ್ಯರಾದ ಭರ್ಮಪ್ಪ, ಮಾಜಿ ಜಿಪಂ ಸದಸ್ಯರಾದ ರತ್ನಾಕರ್‌ ಹೊನಗೋಡು, ಪ್ರೇಮಸಾಗರ್‌, ಗೌತಮಪುರ ಗ್ರಾಪಂ ಉಪಾಧ್ಯಕ್ಷ ಮುಕುಂದ, ಸದಸ್ಯರಾದ ಭೀಮಪ್ಪ, ಷಣ್ಮುಖಪ್ಪ, ಹಾಗೂ ಇತರರು ಹಾಜರಿದ್ದರು.

ಧಾರಕಾರ ಮಳೆ: ಶಿಕಾರಿಪುರ​-ಆನಂದಪುರ ರಸ್ತೆ ಬಂದ್‌

Follow Us:
Download App:
  • android
  • ios