Asianet Suvarna News Asianet Suvarna News

ಕುರಿ ಹೊಲಸು ತಿನ್ನಲ್ಲ ಕುರುಬ ತಪ್ಪು ಮಾಡಲ್ಲ: ಸಿಎಂ ಬೆನ್ನಿಗೆ ನಿಂತ ಸ್ವಾಮೀಜಿ!

ಸಿದ್ದರಾಮಯ್ಯ ಪರ ಕುರುಬ ಸ್ವಾಮೀಜಿ ನಿಂತಿದ್ದು, ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿ , ಕುರಿ ಹೊಲಸು ತಿನ್ನಲ್ಲ ಕುರುಬ ತಪ್ಪು ಮಾಡಲ್ಲ ಎಂದಿದ್ದಾರೆ.

Kaginele Kanaka Guru Peetha Eshwaranandapuri  Swamiji about prosecution against CM Siddaramaiah gow
Author
First Published Aug 17, 2024, 4:34 PM IST | Last Updated Aug 17, 2024, 4:34 PM IST

ಹಾವೇರಿ (ಆ.17): ಕುರುಬ ಸಮುದಾಯದ ಹಿರಿಯ ನಾಯಕ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿಗಳ ಪರವಾಗಿ ರಾಜ್ಯಪಾಲರ ಮತ್ತು ವಿಪಕ್ಷಗಳ ವಿರುದ್ಧವಾಗಿ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಯುತ್ತಿದೆ. ಸರ್ಕಾರದ ಸಚಿವರು ಕೂಡ ಇದು ರಾಜಕೀಯ ಷಡ್ಯಂತ್ರ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಬೀದಿಗಿಳಿದು ಪ್ರತಿಭಟಿಸುವಂತೆ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಕರೆ ಕೊಟ್ಟಿದೆ.

ಸಿದ್ದರಾಮಯ್ಯ ಕಾನೂನು ಕುಣಿಕೆಯಿಂದ ಪಾರು ಮಾಡಲು ದೆಹಲಿಯಿಂದ ವಕೀಲರ ಆಗಮನ!

ಇದೆಲ್ಲದರ ನಡುವೆ ಹೊಸದುರ್ಗ ಕಾಗಿನೆಲೆ ಕನಕಗುರುಪೀಠ  ಈಶ್ವರಾನಂದಪುರಿ ಸ್ವಾಮೀಜಿ  ಅವರು ಸಿದ್ದರಾಮಯ್ಯ ಪರ ನಿಂತಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕುರಿ ಹೊಲಸು ತಿನ್ನಲ್ಲ ಕುರುಬ ತಪ್ಪು ಮಾಡಲ್ಲ ಎಂದಿದ್ದಾರೆ.

ರಾಜ್ಯಪಾಲರ ವಿರುದ್ಧ ಕುರುಬ ಸಮುದಾಯ ಆಕ್ರೋಶ, ಮೈಸೂರಿನಲ್ಲಿ ಮಾನವ ಸರಪಳಿ ಪ್ರತಿಭಟನೆ

ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ದುರುದ್ದೇಶದಿಂದ ಕೇಂದ್ರ ಸರ್ಕಾರದ ಕೈ ಗೊಂಬೆಯಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಖಂಡನೀಯ. ಒಂದು ಚುನಾಯಿತ ಸರ್ಕಾರವನ್ನು ಅಭದ್ರಗೊಳಿಸುವ ಹುನ್ನಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಗೌರವ. ಅಷ್ಟಕ್ಕೂ ಅಧಿಕಾರದಲ್ಲಿರುವುದು ಹಿಂದುಳಿದ ವರ್ಗದ ಪ್ರಬಲ ಜನನಾಯಕ. ಅವರು ದೀನ ದುರ್ಬಲರ, ಮಹಿಳೆಯರ, ಶೋಷಿತರ, ಪರವಾಗಿ ಕೆಲಸ ಮಾಡುತ್ತಿರುವ ನಾಯಕನ ವರ್ಚಸ್ಸು ಮತ್ತು ಜನಪ್ರಿಯತೆಯನ್ನು ಸಹಿಸಲಾಗದ ಪಟ್ಟಬದ್ರ ಹಿತಾಸಕ್ತಿಗಳು ಮಾಡುತ್ತಿರುವ ಕುತಂತ್ರ. ಇದನ್ನ ರಾಜ್ಯದ ಶೋಷಿತ ಸಮುದಾಯ ಸಹಿಸುವುಲ್ಲ ಯಾವ ಅಕ್ರಮವನ್ನೂ ಮಾಡದ ಸಿದ್ದರಾಮಯ್ಯ ಅವರ  ಪರವಾಗಿ ನಾವೆಲ್ಲರೂ ಇರುತ್ತೇವೆ. ಮತ್ತು ಬೃಹತ್ ಜನಾಂದೋಲನ  ಮಾಡುವುದಾಗಿಯೂ ಎಚ್ಚರಿಕೆ ನೀಡಲು ಬಯಸುತ್ತೇವೆ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios