ಕೊರೋನಾ ಆತಂಕದ ಮಧ್ಯೆ ಕಡೂರಲ್ಲಿ ಮುಂಬೈ ಮಹಿಳೆ ಪ್ರತ್ಯಕ್ಷ: ಆತಂಕದಲ್ಲಿ ಜನತೆ
ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದಲ್ಲಿ ಮುಂಬೈ ಮೂಲಕ ಮಹಿಳೆ ಪ್ರತ್ಯಕ್ಷ| ಜನರಲ್ಲಿ ಆತಂಕ ಸೃಷ್ಟಿ| ಹೊರಗಿನಿಂದ ಮಹಿಳೆ ಬಂದ ಹಿನ್ನೆಲೆಯಲ್ಲಿ ಜೈನ್ ಟೆಂಪಲ್ ರಸ್ತೆ ನಿಷೇಧ| ಮಹಿಳೆಯ ಗಂಟಲ ದ್ರವ ಮತ್ತು ರಕ್ತವನ್ನು ಹಾಸನಕ್ಕೆ ಪರೀಕ್ಷೆಗೆ ರವಾನೆ|
ಕಡೂರು(ಮೇ.01): ಮಾರಕ ಕೊರೋನಾ ಆತಂಕದ ನಡುವೆಯೇ ಪಟ್ಟಣದಲ್ಲಿ ಮುಂಬೈ ಮೂಲದ ಮಹಿಳೆಯೊಬ್ಬಳು ಕಾಣಿಸಿಕೊಂಡಿದ್ದಾರೆ. ಇದರಿಂದ ಪಟ್ಟಣದ ಜನರು ಆತಂಕದಲ್ಲಿದ್ದಾರೆ. ಈ ಮಹಿಳೆ ಮುಂಬೈನಿಂದ ಇಲ್ಲಿಗೆ ಹೇಗೆ ಮತ್ತು ಏಕೆ ಬಂದಿದ್ದಾಳೆ ಎಂಬ ಚರ್ಚೆಗಳೂ ಕೂಡ ಆರಂಭವಾಗಿದೆ.
ಪಟ್ಟಣದ ಜೈನಮಂದಿರದ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಮಹಿಳೆಯೊಬ್ಬಳು ಕಂಡು ಬಂದಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಆಕೆ ಮುಂಬೈನಿಂದ ಬಂದಿದ್ದಾಗಿ ತಿಳಿಸಿದ್ದಾಳೆ. ಹೊರಗಿನಿಂದ ಮಹಿಳೆ ಬಂದ ಹಿನ್ನೆಲೆ ಇಲ್ಲಿನ ಜೈನ್ ಟೆಂಪಲ್ ರಸ್ತೆ ನಿಷೇಧಿಸಲಾಗಿತ್ತು.
ಕೊರೋನಾ ಸೋಂಕಿತ ಪತ್ರಕರ್ತನಿಗೆ ಸಂದರ್ಶನ: ಕಾಸರಗೋಡು DC ಸೇಫ್
ಪಿಎಸ್‌ಐ ವಿಶ್ವನಾಥ್ ಮಹಿಳೆಯನ್ನು ವಿಚಾರಿಸಿದಾಗ ಉರ್ದು ಭಾಷೆಯಲ್ಲಿ ಮಾತನಾಡಿದ್ದು, ಮುಂಬೈನಿಂದ ಬಂದಿರುವುದಾಗಿ ತಿಳಿಸಿದ್ದಾರೆ. ಪೊಲೀಸರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆಯ ಪರೀಕ್ಷೆ ನಡೆಸಿ ನಂತರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಹಿಳೆಯ ಗಂಟಲ ದ್ರವ ಮತ್ತು ರಕ್ತವನ್ನು ಹಾಸನಕ್ಕೆ ಪರೀಕ್ಷೆಗೆ ಕಳುಹಿಸಿದ್ದು ಶುಕ್ರವಾರ ಸಂಜೆ ವರದಿ ಬರಲಿದೆ ಎಂದು ವೈದ್ಯಾಧಿಕಾರಿ ಡಾ. ರವಿಕುಮಾರ್ ಹೇಳಿದ್ದಾರೆ.