ಇದೆಂಥಾ ಶಿಕ್ಷಣ: ಕ್ಷೇತ್ರ ಶಿಕ್ಷಣಾಧಿಕಾರಿಯೇ ಲೋಕಾ ಬಲೆಗೆ

ಇತ್ತೀಚೆಗೆ ಶಿಕ್ಷಣ ಕ್ಷೇತ್ರದಲ್ಲೂ ಭ್ರಷ್ಟಾಚಾರ ಮೊಳಕೆಯೊಡೆದಿದೆ. ಶಾಲೆಯೊಂದಕ್ಕೆ ನಿಯೋಜನೆ ಮಾಡಲು ಶಿಕ್ಷಕರೊಬ್ಬರಿಂದ ಲಂಚ ಪಡೆಯುವಾಗ ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್. ಜಯಣ್ಣ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

Kadur field education officer caught red handedly while taking bribe akb

ಚಿಕ್ಕಮಗಳೂರು : ಇತ್ತೀಚೆಗೆ ಶಿಕ್ಷಣ ಕ್ಷೇತ್ರದಲ್ಲೂ ಭ್ರಷ್ಟಾಚಾರ ಮೊಳಕೆಯೊಡೆದಿದೆ. ಶಾಲೆಯೊಂದಕ್ಕೆ ನಿಯೋಜನೆ ಮಾಡಲು ಶಿಕ್ಷಕರೊಬ್ಬರಿಂದ ಲಂಚ ಪಡೆಯುವಾಗ ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್. ಜಯಣ್ಣ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಸಹ ಶಿಕ್ಷಕ ಎನ್.ಎಸ್. ರಾಜಪ್ಪ ಅವರಿಂದ 15 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕ್ಷೇತ್ರ ಶಿಕ್ಷಣಾಕಾರಿ ಕೆ.ಎನ್. ಜಯಣ್ಣ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಡಿವೈಎಸ್‌ಪಿ(Lokayukta DYSP)  ತಿರುಮಲೇಶ್ (Tirumalesh) ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರುಗಳಾದ ಸಚಿನ್ (Sachin) ಮತ್ತು ಬಿ.ಮಲ್ಲಿಕಾರ್ಜುನ್ (Mallikarjun) ಹಾಗೂ ಸಿಬ್ಬಂದಿ ದಾಳಿ ನಡೆಸಿ  ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಜಿ.ತಿಮ್ಮಾಪುರ (Timmapura) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯದಲ್ಲಿದ್ದ ರಾಜಪ್ಪ ಅವರನ್ನು ಗರ್ಜೆ ಗ್ರಾಮದ ಸರಕಾರಿ  ಹಿರಿಯ ಪ್ರಾಥಮಿಕ ಶಾಲೆಗೆ ನಿಯೋಜನೆ ಮಾಡಲು ಕ್ಷೇತ್ರ ಶಿಕ್ಷಣಾಕಾರಿಗಳು ಹಣದ ಬೇಡಿಕೆ ಇಟ್ಟಿದ್ದು, ಇಂದು ಈ ಸಂಬಂಧ ಶಿಕ್ಷಕ ರಾಜಪ್ಪ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಿ. ತಿಮ್ಮಾಪುರ ಗೇಟ್‌ನಲ್ಲಿ 15 ಸಾವಿರ ಲಂಚ ನೀಡುವಾಗ ಸಿಕ್ಕಿ ಬಿದ್ದಿದ್ದಾರೆ.  

 Hassan; ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ರಕ್ತ ಬರುವಂತೆ ಹೊಡೆದಾಡಿಕೊಂಡ ಅಧಿಕಾರಿಗಳು!

ಘಟನೆ ವಿವರ : 

ಕಡೂರು (Kadur) ತಾಲೂಕಿನ ಹುಲೇಗೊಂದಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ (Govt Primary School)ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ರಾಜಪ್ಪ ಇವರನ್ನು ಜಿ.ತಿಮ್ಮಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಯೋಜನೆ ಮಾಡಲಾಗಿತ್ತು. 6 ತಿಂಗಳು ಅಲ್ಲಿ ಕೆಲಸ ಮಾಡಿದ ರಾಜಪ್ಪ (Rajappa) ಅವರು ಸಿಂಗಟಗೆರೆ ಶಾಲೆಗೆ ಪುನಃ ನಿಯೋಜನೆ ಮಾಡಿದ್ದು, ಅವರು ಅಲ್ಲಿಗೆ ತೆರಳದೆ ಗೈರು ಹಾಜರಾಗಿದ್ದರು. ಪುನಃ ಲಿಂಗ್ಲಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಿಯೋಜನೆ ಮಾಡಿದ್ದು ಶಾಲೆಯಿಂದ ಶಾಲೆಗೆ ಬದಲಾವಣೆ ಆಗುತ್ತಿದ್ದ ಹಿನ್ನಲೆಯಲ್ಲಿ ಅವರು ಬೇಸತ್ತಿದ್ದರು ಎಂದು ಹೇಳಲಾಗಿದೆ.

ದಿಢೀರ್ ಘಟನೆಯಿಂದ ಶಿಕ್ಷಕವರ್ಗದಲ್ಲಿ ಈ ವಿಚಾರ ಕಾಡ್ಗಿಚ್ಚಿನಂತೆ ಹರಡಿದ್ದು, ಗಣಪತಿ ಪೆಂಡಾಲ್ ಆವರಣದಲ್ಲಿರುವ ಬಿಇಒ ಕಚೇರಿಯ ಬಳಿ ಶಿಕ್ಷಕರ ಗುಂಪು ಸೇರಿದ್ದರು. ಗುಂಪು ಗುಂಪಾಗಿ ಗುಸು-ಗುಸು ಮಾತನಾಡಿಕೊಳ್ಳುತ್ತಿದ್ದ ದೃಶ್ಯವು ಕಂಡುಬಂದಿತು. ದಾಳಿಯಲ್ಲಿ ಲೋಕಾಯುಕ್ತ ಸಿಬ್ಬಂದಿಯಾದ ಚೇತನ್, ಸಲೀಂ, ಲೋಕೇಶ್, ವಿಜಯಭಾಸ್ಕರ್, ಸವಿನಯ, ರವಿಚಂದ್ರ ಇದ್ದರು. 

Chikkamagaluru: ದಂಡ ಹಾಕಿದ್ದಕ್ಕೆ ಜಡ್ಜ್ ಮೇಲೆ ಚಪ್ಪಲಿ ತೂರಿದ ಆರೋಪಿಯ ಬಂಧನ

ಶಿಕ್ಷಣ ಕ್ಷೇತ್ರ ದೇಶದ ಮುಂದಿನ ಪ್ರಜೆಗಳನ್ನು ರೂಪುಗೊಳಿಸುವ ಕಳಂಕರಹಿತ ವಿವಾದದಿಂದ ದೂರ ಇರಬೇಕಾದ ಕ್ಷೇತ್ರ. ಇನ್ನು ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳು ಮಕ್ಕಳ ಮುಂದೆ ಮಾದರಿಯಾಗಿರಬೇಕಾದಂತವರು. ಏಕೆಂದರೆ ಮಕ್ಕಳು ತಪ್ಪು ಸರಿಗಳನ್ನು ತಿದ್ದಿ ತೀಡಿ ಬುದ್ದಿ ಹೇಳಬೇಕಾದವರು ಶಿಕ್ಷಕರು. ಇಂತಹ ಶಿಕ್ಷಣ ಕ್ಷೇತ್ರದಲ್ಲೇ ಶಿಕ್ಷಣಾಧಿಕಾರಿಯೊಬ್ಬರು ಲಂಚ ಸ್ವೀಕರಿಸಿ ಸಿಕ್ಕಿ ಬಿದ್ದಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ.

Latest Videos
Follow Us:
Download App:
  • android
  • ios