BJP ಸೇರ್ತಾರಾ ಸಿದ್ದರಾಮಯ್ಯ..? ಸುಧಾಕರ್ ಕೊಟ್ರು ಸ್ಪಷ್ಟನೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಬರಲು ನನ್ನ ಜೊತೆ ಚರ್ಚೆ ಮಾಡಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಚಾಮರಾಜನಗರ(ಮಾ.09): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಬರಲು ನನ್ನ ಜೊತೆ ಚರ್ಚೆ ಮಾಡಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.
ನಗರದ ಸಮೀಪದ ಯಡಪುರ ಗ್ರಾಮದಲ್ಲಿರುವ ಚಾಮರಾಜನಗರ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣರಾದ ಕೆಲವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಶ್ವಾಸನೆ ನೀಡಿದ್ದರು. ಅದು ಮುಖ್ಯಮಂತ್ರಿಗಳ ಗಮನದಲ್ಲಿದೆ. ಅವರಿಗೆ ಅನ್ಯಾಯವಾಗಿದೆ. ಸೂಕ್ತ ಸಂದರ್ಭದಲ್ಲಿ ನ್ಯಾಯ ಕೊಡುವ ಕೆಲಸ ಮಾಡುತ್ತಾರೆ ಎಂಬ ಆಶಾಭಾವನೆ ಇದೆ ಎಂದ ಸುಧಾಕರ್, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ರಾಜಕಾರಣದಲ್ಲಿ ಯಾರು ಯಾವಾಗ ಏನುಬೇಕಾದರೂ ಆಗಬಹುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಬರಲು ನನ್ನ ಜೊತೆ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾರ್ಚ್ 9 ರಿಂದ ಬೆಂಗಳೂರಿನ ಪ್ರಿ -ಸ್ಕೂಲ್‌ಗಳಿಗೆ ರಜೆ
ರಾಜಕಾರಣ ನಾನು ಬಿಟ್ಟಿದ್ದೇನೆ. ಈಗ ನನಗೆ ವೈದ್ಯಕೀಯ ಶಿಕ್ಷಣ ಇಲಾಖೆ ಜವಾಬ್ದಾರಿ ಇದೆ. ಜನರಿಗೆ ಒಳ್ಳೇಯ ಆರೋಗ್ಯ ಸೇವೆಯನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜನರ ಆರೋಗ್ಯ ಅಭಿವೃದ್ಧಿಗೆ ಓತ್ತು ಕೊಡುತ್ತಿದ್ದೇನೆ. ಪ್ರತಿನಿತ್ಯ ರಾಜಕಾರಣ ಮಾಡುವವರು ರಾಜಕೀಯ ಪ್ರತಿನಿಧಿಯಾಗಲು ಲಾಯಕ್ಕಿಲ್ಲ ಎಂಬುದು ನನ್ನ ಮನೋಭೂಮಿಕೆ ಎಂದು ಪ್ರತಿಪಾದಿಸಿದರು.
ಇಂದು ಜಾತಿಗೆ ಯಾಕೆ ಶಾದಿ ಭಾಗ್ಯ?:
ಶಾದಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದ ಮೇಲೆ 1000 ಮಂದಿ ಅರ್ಜಿ ಸಲ್ಲಿಸಿದರೆ 5-6 ಮಂದಿಗೆ ಮಾತ್ರ ಸಿಕ್ಕಿದೆ. ಶಾದಿ ಭಾಗ್ಯಯೋಜನೆ ಒಂದು ಧರ್ಮದವರಿಗೆ ತಂದಿದ್ದಾರೆ. ಬೇರೆ ಧರ್ಮದವರು ಜಾತಿಯವರಿಗೆ ಯಾಕೆ ಇಲ್ಲ. ಕಾಂಗ್ರೆಸ್ ಪಕ್ಷ ಡಿಸ್‌ಕ್ರಿಮಿನೇಷನ್ ಮಾಡಿರುವುದು. ಭಾರತೀಯ ಜನತಾ ಪಾರ್ಟಿ ಯಾವುದೇ ಜಾತಿ, ಧರ್ಮಕ್ಕೆ ಪ್ರತೇಕವಾಗಿ ಯೋಜನೆ ಮಾಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮೇಲೆ ಹರಿಹಾಯ್ದರು.
ಕರ್ನಾಟಕದ ಮೇಲೆ ಮೋದಿಗೆ ವಿಶೇಷ ಕಾಳಜಿ:
ಆರ್ಥಿಕ ಹಿಂಜರಿತ ಇಡೀ ವಿಶ್ವದಲ್ಲೇ ಇದೆ. ಭಾರತದಲ್ಲಷ್ಟೇ ಅಲ್ಲ. ಕೇಂದ್ರದಲ್ಲಿ ಆರ್ಥಿಕ ಕೊರತೆ ಇರುವುದರಿಂದ ಹಾಗೂ ರಾಜ್ಯಕ್ಕೆ ಕೇಂದ್ರದಿಂದ ಅನುದಾನ ಹೆಚ್ಚು ನೀಡಿಲ್ಲ. ನರೇಂದ್ರ ಮೋದಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿದ್ರೆ ಸಂತ್ರಸ್ತರಿಗೆ 2 ದಿನಕ್ಕೆ ನೋಟಿಪಿಕೇಷನ್ ಮಾಡುತ್ತಿರಲಿಲ್ಲ. ಹಿಂದೆ ಯುಪಿಎ ಸರ್ಕಾರ ಇದ್ದಾಗ ಕಾಂಗ್ರೆಸ್ ಸರ್ಕಾರ ಎಷ್ಟುಹಣ ತಂದಿದೆ ಎಂದು ಪ್ರಶ್ನಿಸಿದ ಅವರು, ನರೇಂದ್ರ ಮೋದಿಗೆ ಕರ್ನಾಟಕದ ಮೇಲೆ ವಿಶೇಷ ಕಾಳಜಿ ಇದೆ ಮುಂದಿನ ದಿನಗಳಲ್ಲಿ ಸೂಕ್ತ ಸಮಯದಲ್ಲಿ ನೆರವಾಗುತ್ತಾರೆ ಎಂದು ಆಶಾಭಾವನೆ ತೋರಿದರು.
ಚಿಕ್ಕಬಳ್ಳಾಪುರ ಒಕ್ಕೂಟ ಪ್ರತ್ಯೇಕವಾಗುತ್ತೆ:
ಚಿಕ್ಕಬಳ್ಳಾಪುರದಲ್ಲಿ ಹಾಲು ಒಕ್ಕೂಟ ಪ್ರತೇಕವಾಗುತ್ತದೆ. ಪ್ರತೇಕವಾಗಿ ಮಾಡಬೇಕು ಎಂಬ ಬೇಡಿಕೆ ಬಂದಿದ್ದು, ಪ್ರತೇಕವಾಗಿ ಮಾಡಲು ಪ್ರಯತ್ನ ಮಾಡುತ್ತವೆ. ಕೋಲಾರ ಜಿಲ್ಲೆಯಲ್ಲಿಯೂ ಹಾಲು ಒಕ್ಕೂಟ ಪ್ರತೇಕ ಮಾಡಬೇಕು ಎಂದು ಬೇಡಿಕೆ ಬಂದಿದೆ. ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ಬಾರಿ ಬಜೆಟ್‌ನಲ್ಲಿ 5 ಜಿಲ್ಲೆಗಳಿಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದೆ ಎಂದರು.
ದುಬೈನಿಂದ ಆಗಮಿಸಿದ ಪ್ರಯಾಣಿಕನಲ್ಲಿ ಕೊರೋನ ಲಕ್ಷಣ
ರಾಜ್ಯದಲ್ಲಿರುವ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೂ ಭೇಟಿ ನೀಡುತ್ತೇನೆ. ಮೊದಲ ಭೇಟಿ ಚಾಮರಾಜನಗರ ಜಿಲ್ಲೆಯ ವೈದ್ಯಕೀಯ ಕಾಲೇಜು ಆಗಿದೆ. ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಅರ್ಥಮಾಡಿಕೊಂಡು ಸೋಮಾರಿತನ ಮತ್ತು ಅಲಕ್ಷ್ಯದಿಂದ ಕೆಲಸ ಮಾಡುವವರ ಮೇಲೆ ಕಠಿಣ ಕ್ರಮಕೈಗೊಳ್ಳುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.