ಕರ್ನಾಟಕದ ವಿರುದ್ಧ ತಿರುಗಿ ಬಿದ್ದ ನೆರೆ ರಾಜ್ಯಗಳು: ಠಾಕ್ರೆ ಬಳಿಕ ಗೋವಾ ಸಿಎಂ ಉದ್ಧಟತನದ ಹೇಳಿಕೆ

ಮಹದಾಯಿ ವಿಷಯದಲ್ಲಿ ಪಕ್ಷದ ಮಾತು ಕೇಳೋದಿಲ್ಲ| ಮಹದಾಯಿ ನನಗೆ ತಾಯಿ‌ ಸಮಾನ| ಮಹದಾಯಿ ಗೋವಾದ ಜೀವನದಿ| ಈ ಜೀವನದಿಗಾಗಿ ನಾನು ಪಕ್ಷ ಮತ್ತು ರಾಜಕೀಯ ಬದಿಗಿಡುತ್ತೇನೆ: ಪ್ರಮೋದ್ ಸಾವಂತ್| 

Goa CM Pramod Sawant Talks over Mahadayi Dispute grg

ಬೆಳಗಾವಿ(ಜ.30): ಮಹಾರಾಷ್ಟ್ರ ಗಡಿ ಕ್ಯಾತೆ ಬೆನ್ನಲ್ಲೇ ಗೋವಾ ಸರ್ಕಾರ ಕೂಡ ಮಹದಾಯಿಗಾಗಿ ಕ್ಯಾತೆ ತೆಗೆದಿದೆ. ಈ ಮೂಲಕ ಏಕಕಾಲಕ್ಕೆ ಕರ್ನಾಟಕದ ವಿರುದ್ಧ ನೆರೆ ರಾಜ್ಯಗಳು ತಿರುಗಿ ಬಿದ್ದಿವೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ದಟತನದ ಬೆನ್ನಲ್ಲೇ ಈಗ ಗೋವಾ ಸಿಎಂ ಪ್ರಮೋದ್ ಸಾವಂತ್ ಕೂಡ ಕಿರಿಕ್ ತೆಗೆದಿದ್ದಾರೆ. 

"

ಗೋವಾ ವಿಧಾನಸಭಾ ಅಧಿವೇಶನದಲ್ಲಿ ಮಹದಾಯಿ ವಿಷಯ ಪ್ರಸ್ತಾಪ ಮಾಡಿದ ಸಿಎಂ ಪ್ರಮೋದ್ ಸಾವಂತ್, ಪಕ್ಷವನ್ನೂ ಬದಿಗಿಟ್ಟು ಮಹದಾಯಿ ನೋಡುವೆ ಎಂದು ಹೇಳುವ ಮೂಲಕ ತಮ್ಮದೇ ಪಕ್ಷದ ವಿರುದ್ಧವೂ ಗುಟುರು ಹಾಕಿದ್ದಾರೆ. ಕೇಂದ್ರ, ಕರ್ನಾಟಕ ಹಾಗೂ ಗೋವಾದಲ್ಲಿ ಬಿಜೆಪಿಯದ್ದೇ ಸರ್ಕಾರ ಇದೆ, ಹೀಗಾಗಿ ಮಹದಾಯಿ ವಿವಾದ ಬಗೆಹರಿಯುತ್ತೆ ಎಂದು ಭಾವಿಸಿರುವಾಗಲೇ ಗೋವಾ ಸಿಎಂ ಪ್ರಮೋದ್ ಸಾವಂತ್ ಉಲ್ಟಾ ಹೊಡೆದಿದ್ದಾರೆ. 

ಮಹದಾಯಿ ವಿವಾದ: ಮತ್ತೆ ಗೋವಾ ತಕರಾರು

ಮಹದಾಯಿ ವಿಷಯದಲ್ಲಿ ಪಕ್ಷದ ಮಾತು ಕೇಳೋದಿಲ್ಲ, ಮಹದಾಯಿ ನನಗೆ ತಾಯಿ‌ ಸಮಾನವಾಗಿದೆ. ಮಹದಾಯಿ ಗೋವಾದ ಜೀವನದಿಯಾಗಿದೆ. ಈ ಜೀವನದಿಗಾಗಿ ನಾನು ಪಕ್ಷ ಮತ್ತು ರಾಜಕೀಯ ಬದಿಗಿಡುತ್ತೇನೆ ಎಂದು ಹೇಳಿದ್ದಾರೆ. 
ಕರ್ನಾಟಕದಲ್ಲಿ ನಮ್ಮದೇ ಬಿಜೆಪಿ ಸರ್ಕಾರ ಇದೆ. ಹಾಗಂತ ನಾನು ಪಕ್ಷದ ಮಾತು ಕೇಳಿ ರಾಜಿ ಆಗೋದಿಲ್ಲ. ಮಹದಾಯಿ ವಿಷಯದಲ್ಲಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಪಕ್ಷದಿಂದ ಯಾವ ಒತ್ತಡ ಬಂದರೂ ನಾನು ಒಪ್ಪಲಾರೆ ಎಂದು ಸ್ಪಷ್ಟಪಡಿಸಿದ್ದಾರೆ. 
 

Latest Videos
Follow Us:
Download App:
  • android
  • ios