ಕೆ.ಆರ್‌. ಕ್ಷೇತ್ರದಲ್ಲಿ ಹಲವರು ಕಾಂಗ್ರೆಸ್‌ ಸೇರ್ಪಡೆ

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಾರ್ಡ್‌ ನಂಬರ್‌ 65ರ ಶ್ರೀರಾಂಪುರದಲ್ಲಿ ಬಿಜೆಪಿ ಮುಖಂಡ ಚಿನ್ನಸ್ವಾಮಿ ಅವರ ನೇತೃತ್ವದಲ್ಲಿ ಹಲವರು ಬಿಜೆಪಿ, ಜೆಡಿಎಸ್‌ ಪಕ್ಷವನ್ನು ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

K.R. Many have joined the Congress in the constituency snr

  ಮೈಸೂರು :  ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಾರ್ಡ್‌ ನಂಬರ್‌ 65ರ ಶ್ರೀರಾಂಪುರದಲ್ಲಿ ಬಿಜೆಪಿ ಮುಖಂಡ ಚಿನ್ನಸ್ವಾಮಿ ಅವರ ನೇತೃತ್ವದಲ್ಲಿ ಹಲವರು ಬಿಜೆಪಿ, ಜೆಡಿಎಸ್‌ ಪಕ್ಷವನ್ನು ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಮುಖಂಡರಾದ ಬಾಬು ಪ್ರಸಾದ್‌, ಈಶ್ವರ್‌ ಪ್ರಸಾದ್‌, ಮಹೇಶ್‌ ಕುಮಾರ್‌, ಮಹದೇವಸ್ವಾಮಿ, ಬಿ.ಆರ್‌. ಮಂಜುನಾಥ್‌, ಸುಧೀಂದ್ರ, ರುದ್ರೇಶ್‌, ಗುರುರಾಜು, ಶರತ್‌ ಮೊದಲಾದವರನ್ನು ಕೆ.ಆರ್‌. ಕ್ಷೇತ್ರದ ಅಭ್ಯರ್ಥಿ ಎಂ.ಕೆ. ಸೋಮಶೇಖರ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಬರ ಮಾಡಿಕೊಂಡರು.

ಕಾಂಗ್ರೆಸ್‌ ಮುಖಂಡರಾದ ರೇವಣ್ಣ, ಪ್ರಕಾಶ್‌, ಶ್ರೀಕಂಠಮೂರ್ತಿ, ಶಿವಯ್ಯ, ಬಾಲು, ರೂಪೇಶ್‌, ಬಸವರಾಜು, ಗುರುಮೂರ್ತಿ, ಮಹದೇವು, ಚೆನ್ನಮ್ಮ, ಶರತ್‌, ತೇಜುಗೌಡ ಮೊದಲಾದವರು ಇದ್ದರು.

ಹಿರಿಯ ಮುಖಂಡ ಬಿಜೆಪಿ ತೊರೆದು ಕೈ ಪಾಳಯಕ್ಕೆ

 ಕೊರಟಗೆರೆ :  ತಾಲೂಕಿನಲ್ಲಿ ಕಳೆದ 38 ವರ್ಷಗಳಿಂದ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಪಕ್ಷದಲ್ಲಿದ್ದು ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಮಾಡಿದ್ದ ತುಂಬಾಡಿ ತಿಮ್ಮಜ್ಜ ಬಿಜೆಪಿ ಪಕ್ಷದಲ್ಲಿನ ವಿದ್ಯಮಾನಗಳಿಗೆ ಬೇಸತ್ತು ಇದೀಗ ಡಾ.ಜಿ.ಪರಮೇಶ್ವರ್‌ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತುಂಬಾಡಿ ತಿಮ್ಮಜ್ಜ ಸೇರಿದಂತೆ ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್‌, ತಾಲೂಕು ಮಂಡಲ ಉಪಾಧ್ಯಕ್ಷ ರವಿಕುಮಾರ್‌, ಓಬಿಸಿ ಮೋರ್ಚಾ ಅಧ್ಯಕ್ಷ ಬಾಲಣ್ಣ ಅವರೊಂದಿಗೆ ಅವರ ಬೆಂಬಲಿಗರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಮಾತನಾಡಿ, ಕಾಂಗ್ರೆಸ್‌ ತತ್ವ, ಸಿದ್ಧಾಂತಗಳನ್ನು ಮೆಚ್ಚಿ ಬಂದಿರುವ ನೀವು ಪಕ್ಷದಲ್ಲಿ ಯಾವುದೇ ಮುಜುಗರ ಪಟ್ಟುಕೊಳ್ಳುವ ಅಗತ್ಯತೆ ಇಲ್ಲ. ಪಕ್ಷದಲ್ಲಿನ ಕಾರ್ಯಕರ್ತರು ನಿಮ್ಮನ್ನು ಆತ್ಮೀಯತೆಯಿಂದ ಸಹಕರಿಸುತ್ತಾರೆ. ನೀವು ಪಕ್ಷದ ಸಿದ್ಧಾಂತದಡಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಚ್‌.ಮಹದೇವ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರಗೌಡ, ಕೆಪಿಸಿಸಿ ಸದಸ್ಯ ಎ.ಡಿ.ಬಲರಾಮಯ್ಯ, ಆಟೋಕುಮಾರ್‌, ರಾಯಸಂದ್ರ ರವಿ ಕುಮಾರ್‌, ವಡ್ಡಗೆರೆ ಗ್ರಾ.ಪಂ.ಅಧ್ಯಕ್ಷ ವಸಂತಕುಮಾರ್‌ ಸೇರಿದಂತೆ ಇನ್ನಿತರರ ಮುಖಂಡರು ಹಾಜರಿದ್ದರು.

ಕುರುಬ ಮುಖಂಡರು ಬಿಜೆಪಿಗೆ

  ತುಮಕೂರು :  ಬಿಜೆಪಿಯ ತತ್ವ, ಸಿದ್ಧಾಂತವನ್ನು ಒಪ್ಪಿ ಜೆಡಿಎಸ್‌ ಮುಖಂಡರಾದ 2ನೇ ವಾರ್ಡಿನ ಕುರುಬ ಸಮುದಾಯದ ಮುಖಂಡ ಇಂದ್ರಕುಮಾರ್‌ ಹಾಗೂ ಅವರ ಅನುಯಾಯಿಗಳು ಬಿಜೆಪಿ ಸೇರ್ಪಡೆಯಾದರು.

ನಗರದ ಬಿಜೆಪಿ ಪ್ರಚಾರ ಕಾರ್ಯಾಲಯದಲ್ಲಿ ಇಂದ್ರಕುಮಾರ್‌, ನರಸಿಂಹಮೂರ್ತಿ, ಭಾಸ್ಕರ್‌, ಚಿಕ್ಕಣ ಸೇರಿದಂತೆ ಹತ್ತಕ್ಜು ಬೆಂಬಲಿಗರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್‌ ಹೆಬ್ಬಾಕ, ಶಾಸಕ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್‌, ಟೂಡಾ ಮಾಜಿ ಅಧ್ಯಕ್ಷ ಬಿ.ಎಸ್‌.ನಾಗೇಶ್‌ ಅವರ ಸಮ್ಮುಖದಲ್ಲಿ ಬಿಜೆಪಿ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಚುನಾವಣೆ ಘೋಷÜಣೆಯಾದ ದಿನದಂದಲೂ ವಿವಿಧ ಪಕ್ಷಗಳ ಮುಖಂಡರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಅದು ಇಂದು ಸಹ ಮುಂದುವರೆದಿದೆ. 2ನೇ ವಾರ್ಡಿನ ಜೆಡಿಎಸ್‌ ಮುಖಂಡರು ತಮ್ಮ ಅಪಾರ ಬೆಂಬಲಿಗರೊಂದಿಗೆ ಪಕ್ಷಕ್ಕೆ ಸೇರ್ಪಡೆಯಾದರು. ಅವರೆಲ್ಲರೂ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದಾರೆ. ಇದರಿಂದ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಬಿ.ಬಿ.ಜ್ಯೋತಿಗಣೇಶ್‌ ನಿಚ್ಚಳವಾಗಿ ಗೆಲುವು ಸಾಧಿಸಲಿದ್ದಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios