ಮಂಡ್ಯ(ಮಾ.08): ಜಿಲ್ಲಾ ಆಸ್ಪತ್ರೆಯಲ್ಲಿ ಸ್ಟ್ರೆಚ್ಚರ್‌ ಎಳೆಯಲು ಸಿಬ್ಬಂದಿಗಳೇ ಇಲ್ಲ. ಹೀಗಾಗಿ ಪತ್ರಕರ್ತರೇ ಎಳೆದು ಗಾಯಗೊಂಡವರನ್ನು ದಾಖಲು ಮಾಡಿದ ಪ್ರಸಂಗ ಶನಿವಾರ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

ಖಾಸಗಿ ವಾಹಿನಿ ಪತ್ರಕರ್ತನೊಬ್ಬ ಅಪಘಾತದಲ್ಲಿ ಗಾಯಗೊಂಡು ಮಿಮ್ಸ್‌ಗೆ ದಾಖಲು ಮಾಡಲು ಕರೆದುಕೊಂಡು ಹೋಗಲಾಗಿತ್ತು. ಆ ವೇಳೆಗೆ ಆಸ್ಪತ್ರೆಯಲ್ಲಿ ಗಾಯಾಳುವನ್ನು ಸ್ಟ್ರೆಚ್ಚರ್‌ನಲ್ಲಿ ಕರೆದುಕೊಂಡು ಹೋಗಲು ಸಿಬ್ಬಂದಿ ಇರಲಿಲ್ಲ. ಕೊನೆಗೆ ಪತ್ರಕರ್ತರೇ ಎಳೆಯಬೇಕಾಯಿತು.

ಕೊರೋನಾ ಭೀತಿ: ಮಾಸ್ಕ್‌ ಧರಿಸಿ ಶಾಲೆಗೆ ಬಂದ ಮಕ್ಕಳು

ಸುದ್ದಿ ಸಂಗ್ರಹಕ್ಕೆ ತೆರಳುತ್ತಿದ್ದ ವೇಳೆ ವರದಿಗಾರರ ರಾಘವೇಂದ್ರ ಹಾಗೂ ಛಾಯಾಗ್ರಾಹಕ ಮಧುಸೂದನ್ ಅಪಘಾತದಿಂದ ಗಾಯಗೊಂಡಿದ್ದರು. ಗಾಯಾಳುಗಳಿಗೆ ಚಿಕಿತ್ಸೆಗಾಗಿ ಮೆಡಿಕಲ್ ಕಾಲೇಜ್‌ಗೆ ದಾಖಲು ಮಾಡಲಾಗಿತ್ತು. ವೈದ್ಯರು ಸಿಟಿ ಸ್ಕ್ಯಾ‌ನ್‌ಗೆ ಶಿಫಾರಸ್ಸು ಮಾಡಿದ ಹಿನ್ನಲೆ ಸ್ಕ್ಯಾ‌ನ್ ಸೆಂಟರ್‌ಗೆ ವರದಿಗಾರರನನ್ನು ಕರೆದುಕೊಂಡು ಹೋಗಲು ಸಿಬ್ಬಂದಿ ಇರಲಿಲ್ಲ. ಪತ್ರಕರ್ತರೇ ಸ್ಟ್ರೆಚ್ಚರ್‌ನಲ್ಲಿ ಎಳೆದುಕೊಂಡು ಹೋಗಬೇಕಾಯಿತು.

ಸದ್ಯ ರಾಘವೇಂದ್ರಗೆ ಎಡಗಾಲು ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ದಾಖಲಾತಿ ವೇಳೆ ವೈದ್ಯರ ಕೊರತೆಯೂ ಕಂಡು ಬಂದಿತು. ದಾಖಲಾದ 10 ನಿಮಿಷದ ನಂತರ ವೈದ್ಯರು ಚಿಕಿತ್ಸೆ ನೀಡಲು ಮುಂದಾದರು. ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.