ಸುಳ್ಯ[ಡಿ.05] ಸುಳ್ಯ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 9, ಭಾನುವಾರ  ನಡೆಯಲಿದೆ. ಹೊಸ ತಲೆಮಾರಿನ ಸಾಹಿತ್ಯ ವಿಮರ್ಶಕ ಹರೀಶ್ ಕೇರ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಮಲ್ಲಿಕಾರ್ಜುನ ದೇವಾಲಯ ತೊಡಿಕಾನ, ಸುಳ್ಯ ತಾಲೂಕು 23ನೇ  ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿ-2018 ರ ಆಶ್ರಯದಲ್ಲಿ ಸಮ್ಮೇಳನ ನಡೆಯಲಿದೆ.

ಶ್ರೀ ಮಲ್ಲಿಕಾರ್ಜುನ ದೇವಾಲಯ ತೊಡಿಕಾನ ಆವರಣದ ಉಳುವಾರು ಪಠೇಲ್ ಮ್ಯಾಲಪ್ಪ ಗೌಡ ಸಭಾಂಗಣದ ಡಾ.ಕೀಲಾರು ಗೋಪಾಲಕೃಷ್ಣ ವೇದಿಕೆಯಲ್ಲಿ ಸಮ್ಮೇಳನ ನಡೆಯಲಿದೆ.

ಕನ್ನಡ ಲೋಕಕ್ಕೆ 3 ಪುಸ್ತಕ, ಬಿಡುಗಡೆ ಮಾಡಿದ್ದು ರಾಕಿಂಗ್ ಸ್ಟಾರ್

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್‌.ಪ್ರದೀಪ್ ಕುಮಾರ್ ಕಲ್ಕೂರ, ಗೌರವಾಧ್ಯಕ್ಷ ಶಾಸಕ ಎಸ್‌.ಅಂಗಾರ, ಪೋಷಕಾಧ್ಯಕ್ಷ ಡಾ.ಕೆ.ವಿ.ಚಿದಾನಂದ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ್, ಕಾರ್ಯಾಧ್ಯಕ್ಷ ಹರೀಶ್ ಕಂಜಿಪಿಲಿ, ಪಿ.ಬಿ.ದಿವಾಕರ ರೈ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಕೋಶಾಧಿಕಾರಿ ಆನಂದ ಕಲ್ಲಗದ್ದೆ ಸಮ್ಮೇಳನಕ್ಕೆ ಸಹಕಾರ ನೀಡಲಿದೆ.

ಮಧ್ಯಾಹ್ನ 12 ಗಂಟೆಯಿಂದ ನಡೆಯಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹೊಸ ತಲೆಮಾರಿನ ವಿಮರ್ಶಕ, ಪತ್ರಕರ್ತ ಹರೀಶ್ ಕೇರ ವಹಿಸಿಕೊಳ್ಳಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಸೊಗಡಿನಲ್ಲಿ ಕನ್ನಡದ ಸಾಹಿತ್ಯದ ಕಂಪು ಮೊಳಗಲಿದೆ.