Asianet Suvarna News Asianet Suvarna News

ಏಳುಬೀಳುಗಳ ಮಧ್ಯೆ ಮಾಧ್ಯಮ ಕ್ಷೇತ್ರ ಮುನ್ನಡೆ: ರವಿ ಹೆಗಡೆ

ಏಳುಬೀಳುಗಳ ಮಧ್ಯೆಯೂ ಮಾಧ್ಯಮ ಕ್ಷೇತ್ರ ತನ್ನ ಮಹತ್ವವನ್ನು ಉಳಿಸಿಕೊಂಡು ಮುನ್ನಡೆಯುತ್ತಿದೆ ಎಂದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದ್ದಾರೆ.

 

journalism going forward in between ups and down says ravi hegde
Author
Bangalore, First Published Jan 12, 2020, 1:54 PM IST

ಮಂಗಳೂರು(ಜ.12): ಈಗಿನ ಯುವಜನತೆ ಬುದ್ಧಿವಂತರಾಗಿದ್ದು, ತಕ್ಷಣಕ್ಕೆ ಎಲ್ಲವನ್ನೂ ತಿಳಿದುಕೊಳ್ಳುವ ಧಾವಂತದಲ್ಲಿ ಇರುತ್ತಾರೆ. ಪ್ರಪಂಚದ ಆಗುಹೋಗುಗಳನ್ನು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳುವ ಹಂಬಲ ಎಲ್ಲರಲ್ಲೂ ಇದೆ. ಇದಕ್ಕೆ ಪೂರಕವಾಗಿ ಮಾಧ್ಯಮ ಕ್ಷೇತ್ರವೂ ಬೆಳೆದಿದೆ. ಏಳುಬೀಳುಗಳ ಮಧ್ಯೆಯೂ ಮಾಧ್ಯಮ ಕ್ಷೇತ್ರ ತನ್ನ ಮಹತ್ವವನ್ನು ಉಳಿಸಿಕೊಂಡು ಮುನ್ನಡೆಯುತ್ತಿದೆ ಎಂದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದ್ದಾರೆ.

ಪುತ್ತೂರಿನ ಆಕಾಂಕ್ಷ ಚಾರಿಟೇಬಲ್‌ ಟ್ರಸ್ಟ್‌ ಮತ್ತು ಇನ್ನರ್‌ವೀಲ್‌ ಕ್ಲಬ್‌ ಮಂಗಳೂರಿನಲ್ಲಿ ಆಯೋಜಿಸಿದ ಎರಡು ದಿನಗಳ ರಾಷ್ಟ್ರೀಯ ಯುವ ಸಮಾವೇಶ-2020ರಲ್ಲಿ ಅವರು ಶನಿವಾರ ‘ಯುವಜನತೆ ಮತ್ತು ಮಾಧ್ಯಮ’ ಕುರಿತು ಮಾತನಾಡಿದ್ದಾರೆ.

ಮಂಗಳೂರು ಗಲಭೆ ಬಗ್ಗೆ ಸಮಗ್ರ ದಾಖಲೆ: ಪೊಲೀಸ್‌ ಕಮಿಷನರ್‌ ಡಾ.ಹರ್ಷ

ಓದು ಮತ್ತು ಬರವಣಿಗೆ ಜೊತೆಯಾಗಿದ್ದರೆ ಅದು ಸುದ್ದಿ. ಸುದ್ದಿ ಕೂಡ ಒಂದು ಸಾಹಿತ್ಯವಾಗಿದ್ದು, ಅದು ನಮ್ಮೊಳಗೆ ಮಾತ್ರವಲ್ಲ ಇತರರಲ್ಲೂ ಹಾಸುಹೊಕ್ಕಾಗಿ ಇರುತ್ತದೆ. ಮೊಬೈಲ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಇನ್‌ಸ್ಟ್ರಾಗ್ರಾಂಗಳ ಈ ಕಾಲದಲ್ಲಿ ಎಲ್ಲ ಕಡೆಗಳಲ್ಲಿ ಸುದ್ದಿಯನ್ನು ಕಾಣಬಹುದು. ಹಾಗಾಗಿ ಪತ್ರಿಕೆಯನ್ನು ಯಾಕಾಗಿ ಓದಬೇಕು ಎಂಬ ಭಾವನೆ ಬಂದರೂ ಅಚ್ಚರಿ ಇಲ್ಲ. ಕೆಲವೇ ಗಂಟೆಗಳ ಕಾಲ ದೃಶ್ಯ ಮಾಧ್ಯಮವನ್ನು ನೋಡಿದರೆ, ಎಲ್ಲ ಸುದ್ದಿಗಳನ್ನೂ ತಿಳಿದುಕೊಳ್ಳಲು ಸಾಧ್ಯವಿದೆ. ಸುದ್ದಿಯಲ್ಲದೆ ಮನೋರಂಜನೆಯನ್ನೂ ಚಾನೆಲ್‌ಗಳು ನೀಡುವುದರಿಂದ ಎಲ್ಲರೂ ಸುದ್ದಿಯನ್ನು ನೋಡುತ್ತಾರೆ ಎಂದು ಹೇಳುವಂತಿಲ್ಲ. ಅವರವರ ಅಭಿರುಚಿಗೆ ತಕ್ಕಂತೆ ಮಾಧ್ಯಮಗಳ ಬಳಕೆ ಮಾಡಿಕೊಳ್ಳುತ್ತಾರೆ. ಕಾಲೇಜುಗಳಲ್ಲಿ ಪಠ್ಯವನ್ನು ಕಲಿತಂತೆ ಜಗತ್ತಿನ ಆಗುಹೋಗುಗಳನ್ನು ತಿಳಿಸುವ ಮಾಧ್ಯಮಗಳು ಕೂಡ ನಿಜವಾದ ಪಠ್ಯ ಪುಸ್ತಕಗಳಾಗಿವೆ ಎಂದರು.

ಓದುಗರ ಸಂಖ್ಯೆ ಇಳಿಮುಖ:

ಮಾಧ್ಯಮಗಳು ಸುದ್ದಿಯ ಸಾಕ್ಷರತೆಯನ್ನು ನೀಡುತ್ತಿರುವುದು ನಿಜವಾದರೂ ಅವುಗಳ ಬಳಕೆಯಲ್ಲೂ ಏರುಪೇರು ಉಂಟಾಗಿದೆ. 2009ರ ನ್ಯಾಷನಲ್‌ ಬುಕ್‌ ಟ್ರಸ್ಟ್‌ ಸರ್ವೆ ಪ್ರಕಾರ, ಯುವಜನತೆ ಶೇ.73ರಷ್ಟುಟಿವಿಯನ್ನು ಅವಲಂಬಿಸಿದ್ದರೆ, ಶೇ.53 ಮಂದಿ ನಿಯತಕಾಲಿಕಕ್ಕೆ ಶರಣಾಗಿದ್ದರು. ಶೇ.23 ಮಂದಿಯಷ್ಟೆಇಂಟರ್‌ನೆಟ್‌ ಅವಲಂಬಿಸುತ್ತಿದ್ದರು. ಈಗ ಬದಲಾದ ಪರಿಸ್ಥಿತಿಯಲ್ಲಿ ಶೇ.73 ಮಂದಿ ಮೊಬೈಲ್‌ನಲ್ಲಿ ಸುದ್ದಿಗೆ ಮೊರೆ ಹೋಗುತ್ತಾರೆ. ಟಿವಿ ನೋಡುವುದು ಶೇ.55 ಮಂದಿಯಾದರೆ, ಶೇ.13ರಷ್ಟುಮಂದಿ ಮಾತ್ರ ಪತ್ರಿಕೆ ಓದುತ್ತಾರೆ.

ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಗ್ಯಾಂಗ್‌ಸ್ಟರ್‌ ಪರಾರಿ: ಮಂಗಳೂರಲ್ಲಿ ಹೈಅಲರ್ಟ್‌

ಜಾಲತಾಣಗಳೂ ಈಗ ಸಂವಹನ ಮಾಧ್ಯಮಗಳಾಗಿ ರೂಪುಗೊಳ್ಳುತ್ತಿವೆ. ಹಿಂದೆ ಮೊಬೈಲ್‌ಗಳು ಎಸ್‌ಎಂಎಸ್‌ ಸಂದೇಶ ಕಳುಹಿಸುತ್ತಿದ್ದರೆ, ಈಗ ಎಸ್‌ಎಂಎಸ್‌ ಒಟಿಪಿಗೆ ಮಾತ್ರ ಸೀಮಿತಗೊಳ್ಳುತ್ತಿದೆ. ಗಂಟೆಗಳ ಲೆಕ್ಕದಲ್ಲಿ ಕರೆನ್ಸಿ ಹಾಕುತ್ತಿದ್ದರೆ, ಪ್ರಸಕ್ತ ಜಿಬಿ ಲೆಕ್ಕದಲ್ಲಿ ರಿಚಾಜ್‌ರ್‍ ಮಾಡುತ್ತಾರೆ. ಹೀಗೆ ಪ್ರತಿಕ್ಷಣವೂ ಮಾಧ್ಯಮ ಕ್ಷೇತ್ರದಲ್ಲಿ ಬದಲಾವಣೆ ನಡೆಯುತ್ತಲೇ ಇದೆ ಎಂದು ರವಿ ಹೆಗಡೆ ವಿಶ್ಲೇಷಿಸಿದರು.

ಈ ಸಮಾವೇಶದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಸುಮಾರು 250ಕ್ಕೂ ಅಧಿಕ ಮಂದಿ ವಿದ್ಯಾರ್ಥಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Follow Us:
Download App:
  • android
  • ios