ಬೆಂಗಳೂರು (ಡಿ.09):  ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ತರಲು ಸರ್ಕಾರದಿಂದ ಕಸರತ್ತು ನಡೆದಿದೆ.  ಬಿಬಿಎಂಪಿ ವಿಧೇಯಕ ಕುರಿತ ಜಂಟಿ ಪರಿಶೀಲನಾ ಸಮಿತಿಯಿಂದ ವಿಧಾನಸಭೆಯಲ್ಲಿ ವರದಿ‌ ಮಂಡನೆ ಮಾಡಲಾಗಿದೆ.

ಶಾಸಕ ಎಸ್ ರಘು ನೇತೃತ್ವದ ಜಂಟಿ ಪರಿಶೀಲನಾ ಸಮಿತಿಯು ವರದಿ ಮಂಡನೆ ಮಾಡಲಾಗಿದೆ. 

ಶಾಸಕ ರಘು ನೇತೃತ್ವದ ಜಂಟಿ ಸಮಿತಿಯ ವರದಿಯಲ್ಲಿರುವ ಶಿಫಾರಸುಗಳು ಇಂತಿವೆ. 

- ಬಿಬಿಎಂಪಿ ವಾರ್ಡ್ ಗಳ ಸಂಖ್ಯೆ 198 ರಿಂದ 243ಕ್ಕೆ ಏರಿಕೆ

- ಮೇಯರ್ ಅವಧಿಯನ್ನು 12 ತಿಂಗಳಿಂದ 30 ತಿಂಗಳಿಗೆ ಏರಿಕೆ

- ಸ್ಥಾಯಿ ಸಮಿತಿಗಳ ಸಂಖ್ಯೆ 12 ರಿಂದ 15 ಕ್ಕೆ ಏರಿಕೆ

ಬಿಬಿಎಂಪಿ ಮೇಯರ್‌ ಅಧಿಕಾರ ಅವಧಿ 2.5 ವರ್ಷಕ್ಕೆ ಹೆಚ್ಚಿಸಲು ಶಿಫಾರಸು ...

- ಪ್ರತೀ ವಲಯಗಳಿಗೆ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಸಮಿತಿಗಳ ರಚನೆ

- ಬಿಬಿಎಂಪಿಗೆ ಸರ್ಕಾರದ ಕಾರ್ಯದರ್ಶಿ ದರ್ಜೆಯ ಅಧಿಕಾರಿಯನ್ನು ಆಯುಕ್ತರಾಗಿ ನೇಮಿಸುವುದು

- ಪ್ರತೀ ವಲಯಕ್ಕೂ ವಿಶೇಷ ಆಯುಕ್ತರ ನೇಮಕ ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಲಾಗಿದೆ.