ನಿಷ್ಪಕ್ಷಪಾತ ಚುನಾವಣೆ ನಡೆಸಲು ಕೈಜೋಡಿಸಿ : ಚುನಾವಣಾಧಿಕಾರಿ
ತಾಲೂಕಿನಲ್ಲಿ ಶಾಂತಿಯುತ ನಿಷ್ಪಕ್ಷಪಾತ ಚುನಾವಣೆ ನಡೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಚುನಾವಣಾ ಅಧಿಕಾರಿ ಕೃಷ್ಣಮೂರ್ತಿ ಹೇಳಿದರು.
ನಂಜನಗೂಡು : ತಾಲೂಕಿನಲ್ಲಿ ಶಾಂತಿಯುತ ನಿಷ್ಪಕ್ಷಪಾತ ಚುನಾವಣೆ ನಡೆಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಚುನಾವಣಾ ಅಧಿಕಾರಿ ಕೃಷ್ಣಮೂರ್ತಿ ಹೇಳಿದರು.
ಪಟ್ಟಣ ತಾಲೂಕು ಕಚೇರಿಯ ಸಭಾಂಗಣದಲ್ಲಿ ಚುನಾವಣಾ ಜಾಗೃತಿ ಮತ್ತು ನೀತಿ ಸಂಹಿತೆ ಜಾಗೃತಿ ಸಭೆ ನಡೆಸಿ ಅವರು ಮಾತನಾಡಿದರು.
ಖಾಸಗಿ ಕಲ್ಯಾಣ ಮಂಟಪದ ಮಾಲೀಕರು ರಾಜಕೀಯ ಪಕ್ಷಗಳ ಸಭೆ ಸಮಾರಂಭ ಕನ್ನಡದಲ್ಲಿ ಮಾಹಿತಿ ನೀಡಬೇಕು ಮತ್ತು ಚುನಾವಣಾ ಆಯೋಗ ಪ್ರತಿಯೊಬ್ಬ ನಾಗರಿಕರ ಬ್ಯಾಂಕ್ ವಹಿವಾಟಿನ ಮೇಲೆ ಹದ್ದಿನ ಕಣ್ಣಿಟ್ಟಿದೆ. ಮತದಾರರಿಗೆ ವಾಟ್ಸಾಪ್, ಫೇಸ್ ಬುಕ್ ಮೂಲಕ ಪ್ರಚಾರ ನಡೆಸುವುದು ಕೂಡ ನೀತಿ ಸಮಿತಿಯ ಉಲ್ಲಂಘನೆಯಾಗುತ್ತದೆ. ಅಲ್ಲದೆ ಫೋನ್ ಪೇ ಗೂಗಲ… ಪೇ ಮೂಲಕ ಹಣ ಕಳುಹಿಸಿದರು ಕೂಡ ಹಣದ ಆಮಿಷ ಒಡ್ಡಿದರು ನೀತಿ ಸಮಿತಿಯ ಉಲ್ಲಂಘನೆಯಾಗುತ್ತದೆ. ಮದ್ಯದ ಆಮಿಷ, ಪೆಟ್ರೋಲ… ಉಚಿತವಾಗಿ ನೀಡುವುದು ಕೂಡ ನೀತಿ ಸಂಹಿತೆ ಉಲ್ಲಂಘನೆ ಕಾರಣ, ಚುನಾವಣಾ ಆಯೋಗವು ಪ್ರತಿ ಬಾರ್‌ಗಳ ದಾಸ್ತಾನು ಪರಿಶೀಲನೆ ನಡೆಸುತ್ತದೆ. ಒಂದು ವೇಳೆ ಚುನಾವಣೆ ವೇಳೆಯಲ್ಲಿ ಅಧಿಕ ಮಾರಾಟ, ಪೆಟ್ರೋಲ… ಬಂಕ್‌ಗಳಲ್ಲಿ ಯಥೇಚ್ಛವಾಗಿ ಮಾರಾಟವಾದಲ್ಲಿ ಅಂತಹ ಬಾರ್ ಮತ್ತು ಪೆಟ್ರೋಲ… ಬಂಕ್‌ಗಳ ಪರವಾನಗಿಯನ್ನು ನಿಷೇಧಿಸಲಾಗುವುದು ಎಂದರು.
ಸಾರ್ವಜನಿಕರು ತಮ್ಮ ಖಾಸಗಿ ಕಾರ್ಯಕ್ರಮವನ್ನು ಕಲ್ಯಾಣ ಮಂಟಪಗಳಲ್ಲಿ ಬಳಸುವುದಕ್ಕೆ ಚುನಾವಣಾ ಆಯೋಗದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು, ಸುವಿಧ ಆಪ್ ಮೂಲಕವೂ ಕೂಡ ಕಾರ್ಯಕ್ರಮಕ್ಕೆ ಅನುಮತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ, ಸಾರ್ವಜನಿಕರು ತಾಲೂಕಿನಲ್ಲಿ ನಿಷ್ಪಕ್ಷಪಾತ ನ್ಯಾಯಯುತ ಶಾಂತಿಯುತ ಚುನಾವಣೆ ನಡೆಸಲು ಕೈಜೋಡಿಸುವ ಮೂಲಕ ಚುನಾವಣಾ ಆಯೋಗದ ಜೊತೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ವರುಣ ಕ್ಷೇತ್ರದ ಚುನಾವಣಾ ಅಧಿಕಾರಿ ಗೌರವ್, ಉಪಚುನಾವಣಾ ಅಧಿಕಾರಿಯು ಆದ ತಹಸೀಲ್ದಾರ್ ಶಿವಕುಮಾರ್, ಉಪತಹಸೀಲ್ದಾರ್ ಭೈರಯ್ಯ, ಕಂದಾಯ ಅಧಿಕಾರಿಗಳಾದ ಪ್ರಕಾಶ್ ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂಡರು ಇದ್ದರು.
ಚುನಾವಣೆ : ಜಿಲ್ಲಾಧಿಕಾರಿ ಎಚ್ಚರಿಕೆ
ಮಂಗಳೂರು (ಮಾ.31): ರಾಜ್ಯ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದು, ಈ ವೇಳೆ ಚುನಾವಣೆ ನೆಪದಲ್ಲಿ ಕೋಮು ದ್ವೇಷ ಹರಡಿಸುವುದು ಹಾಗೂ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಬಳಸಿಕೊಂಡು ಮತೀಯ ಭಾವನೆ ಕೆರಳಿಸಿದರೆ ಪೊಲೀಸ್ ಇಲಾಖೆ ವತಿಯಿಂದ ಅತ್ಯಂತ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ಶಾಂತಿಯುತವಾಗಿ ನಡೆಸಲು ಎಲ್ಲರೂ ಸಹಕಾರ ನೀಡಬೇಕು. ಕೋಮು ದ್ವೇಷ ಕೆರಳಿಸುವ ಘಟನೆಗಳು ನಡೆದರೆ ಸಾರ್ವಜನಿಕರು ಕೂಡ ಕಂಟೋಲ್ ರೂಮ್ ಸಂಖ್ಯೆ 1950ಗೆ ಮಾಹಿತಿ ನೀಡಬಹುದು. ಇದಲ್ಲದೆ, ಜಾಲತಾಣಗಳಲ್ಲೂ ಕೋಮು ಭಾವನೆ ಕೆರಳಿಸುವ ಕಾರ್ಯಗಳ ಮೇಲೆ ಕಣ್ಗಾವಲು ಇರಿಸಲು ತಂಡ ರಚಿಸಲಾಗಿದೆ. ಯಾರಾದರೂ ಇಂಥ ಕೃತ್ಯ ನಡೆಸಿದರೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
17.58 ಲಕ್ಷ ಮತದಾರರು: ದ.ಕ. ಜಿಲ್ಲೆಯಲ್ಲಿ ಮಾ. 29ರವರೆಗೆ ಒಟ್ಟು 17,58,647 ಮಂದಿ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟಹಾಗೂ ವಿಶೇಷ ಚೇತನ ಮತದಾರರು ಒಟ್ಟು 60,934 ಮಂದಿ ಇದ್ದು, 33,577 ಯುವ ಮತದಾರರು ಇದ್ದಾರೆ. ಹೊಸ ಮತದಾರರ ಸೇರ್ಪಡೆಗೆ ಏಪ್ರಿಲ್ 11ರವರೆಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಲ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ: ಜಗದೀಶ್ ಶೆಟ್ಟರ್ ಅಭಿಮತ
ಅಕ್ರಮವೇ? ದೂರು ನೀಡಿ: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಮತದಾರರಿಗೆ ಆಮಿಷ ಒಡ್ಡುವುದು ಇತ್ಯಾದಿಗಳು ನಡೆದರೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು ಟೋಲ್ ಫ್ರೀ ಸಂಖ್ಯೆ 1950 ಸಂಪರ್ಕಿಸಬಹುದು. ಅಲ್ಲದೆ, ಸಿ-ವಿಜಿಲ್ ಮೊಬೈಲ್ ಆ್ಯಪ್ ಮೂಲಕವೂ ಚುನಾವಣಾ ಅಕ್ರಮಗಳ ಬಗ್ಗೆ ಫೋಟೊ, ವೀಡಿಯೋ ಮೂಲಕ ದೂರು ಸಲ್ಲಿಸಬಹುದು. ಪ್ರತಿ ವಿಧಾನಾಸಭಾ ಕ್ಷೇತ್ರವಾರು ಫ್ಲೈಯಿಂಗ್ ಸ್ಕಾ$್ವಡ್ ಟೀಮ್, ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್, ವೀಡಿಯೋ ಸರ್ವೆಲೆನ್ಸ್ ಟೀಮ್ ರಚಿಸಲಾಗಿದ್ದು, ಸ್ಥಳೀಯ ಚುನಾವಣಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಲೂ ಅವಕಾಶವಿದೆ. ದೂರು ನೀಡಿದ ಎರಡು ಗಂಟೆಯೊಳಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗಡಿಯಲ್ಲಿ ಚೆಕ್‌ಪೋಸ್ಟ್: ಚುನಾವಣಾ ಅಕ್ರಮ ತಡೆಗೆ ಜಿಲ್ಲೆಯನ್ನು ಸಂಪರ್ಕಿಸುವ ಒಟ್ಟು 27 ಅಂತಾರಾಜ್ಯ ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ಹಾಕಲಾಗಿದೆ. ಅಲ್ಲಿ ಸಿಸಿಟಿವಿ, ವಿಡಿಯೊಗ್ರಾಫರ್‌ಗಳು, ವಿವಿಧ ಇಲಾಖೆ ಅಧಿಕಾರಿಗಳ ತಂಡ ಕಾರ್ಯ ನಿರ್ವಹಿಸಲಿದೆ. ಅಂತರ್ ಜಿಲ್ಲಾ ಸಂಪರ್ಕದ 8 ಕಡೆಗಳಲ್ಲಿ ಹಾಗೂ ಸ್ಥಳೀಯವಾಗಿ 9 ಕಡೆ ಚೆಕ್‌ಪೋಸ್ಟ್ ಅಳವಡಿಸಲಾಗಿದೆ. ಇದಲ್ಲದೆ, ಈ ಬಾರಿ ವಿಶೇಷವಾಗಿ ಮೊಬೈಲ್ ಚೆಕ್‌ಪೋಸ್ಟ್‌ಗಳು ಕಾರ್ಯ ನಿರ್ವಹಿಸಲಿದ್ದು, ಯಾರಿಗೂ ಗೊತ್ತಾಗದಂತೆ ಅಕ್ರಮ ಚಟುವಟಿಕೆಗಳನ್ನು ತಡೆಯಲು ಇವುಗಳು ಕಾರ್ಯ ನಿರ್ವಹಿಸಲಿವೆ. ಸಮುದ್ರದ ಕಡೆಯಿಂದಲೂ ಹಣ, ಉಡುಗೊರೆ ಸಾಗಾಟ ತಡೆಗೆ ಕೋಸ್ಟಲ್ ಸೆಕ್ಯೂರಿಟಿ ಫೋರ್ಸ್ ಹಾಗೂ ಪೊಲೀಸ್ ತಂಡಗಳು ಕಾರ್ಯ ನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.