ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ವಿಶ್ವವಿಖ್ಯಾತ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲೇ ಟೆಂಡರ್‌ ಕರೆಯಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಶಿವಮೊಗ್ಗ(ಆ.27): ವಿಶ್ವ ವಿಖ್ಯಾತ ಜೋಗವನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲೇ ಟೆಂಡರ್‌ ಕರೆಯಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಬುಧ​ವಾ​ರ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದ​ರು. ಪ್ರವಾಸೋದ್ಯಮ ನೀಲನಕ್ಷೆಯಲ್ಲಿ ಜಿಲ್ಲೆಯ ಪ್ರಮುಖ ತಾಣ ಜೋಗವನ್ನು ಎಲ್ಲ ಆಯಾಮಗಳಲ್ಲೂ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. 

ಸುಮಾರು 150 ಕೋಟಿ ರು. ವೆಚ್ಚದಲ್ಲಿ ಜೋಗದ ಅಭಿವೃದ್ಧಿ ಜೊತೆಗೆ ಜಿಲ್ಲೆಯ ಪ್ರವಾಸಿ ತಾಣಗಳ ಸಕ್ರ್ಯೂಟ್‌ ರಚಿಸಲಾಗುವುದು ಎಂದರು. ಜೋಗದಲ್ಲಿ 22 ಎಕರೆಯಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ. ಮಳೆಗಾಲದ ಹೊರತಾಗಿ ವರ್ಷವಿಡೀ ಶನಿವಾರ ಮತ್ತು ಭಾನುವಾರ ಜಲಪಾತಕ್ಕೆ ಲಿಂಗನಮಕ್ಕಿ ಡ್ಯಾಂನಿಂದ ನೀರು ಬಿಟ್ಟು ಪ್ರವಾಸಿಗರನ್ನು ಆಕರ್ಷಿಸಲಾಗುತ್ತದೆ. ಶರಾವತಿ ಹಿನ್ನೀರಿನಲ್ಲಿ ಸಾಹಸ ಕ್ರೀಡಾ ಚಟುವಟಿಕೆ ಆರಂಭಿ​ಸ​ಲಾಗುತ್ತದೆ ಎಂದರು.

ಜೋಗ ಫಾಲ್ಸ್‌​ನಲ್ಲಿ ಟೆಕಿ ಆತ್ಮಹತ್ಯೆ ಹೈ ಡ್ರಾಮಾ...

 ದೂರ​ದ​ಲಿಲ ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆ ಮಾಡಿ ಅಲ್ಲಿಂದ ಪ್ರವಾಸಿಗರನ್ನು ಬಸ್ಸಿನಲ್ಲಿ ಕರೆ ತರಲಾಗುವುದು. ಜೋಗ ವೀಕ್ಷಣಾ ಸ್ಥಳವನ್ನು ಇನ್ನಷ್ಟುಅಭಿವೃದ್ಧಿಪಡಿಸಿ 3 ಹಂತಗಳಲ್ಲಿ ಏಕಕಾಲಕ್ಕೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು. ಜಲಪಾತದಲ್ಲಿ ರೋಪ್‌ವೇ ಅಳವಡಿಸುವ ಯೋಜನೆಯಿದೆ. 

ಮಳೆಗಾಲ ಮುಗಿಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ..!...

ವೀಕ್ಷಣಾ ಗೋಪುರ, ಉದ್ಯಾನವನ, ಮಕ್ಕಳ ಕ್ರೀಡೆಯ ವ್ಯವಸ್ಥೆ, ಶರಾವತಿ ಹಿನ್ನೀರಿನಲ್ಲಿ ಸಾಹಸ ಕ್ರೀಡಾ ಚಟುವಟಿಕೆ, ಮುಖ್ಯದ್ವಾರದ ಅಭಿವೃದ್ದಿ, ಆಂಪಿಥಿಯೇಟರ್‌ ಮತ್ತು ಕಾರಂಜಿ, ಮುಖ್ಯರಸ್ತೆ ಮತ್ತುಒಳರಸ್ತೆಗಳ ಅಭಿವೃದ್ಧಿ, ಕೆಫೆಟೇರಿಯ, ಲ್ಯಾಂಡ್‌ ಸ್ಕೇಪಿಂಗ್‌, ಮೋನೋ ರೈಲು ಮತ್ತು ನಿಲ್ದಾಣ ಸೇರಿ ಹಲವು ಅಭಿವೃದ್ಧಿ ಕಾರ್ಯ ಗುರುತಿಸಲಾಗಿದೆ ಎಂದರು.