ಹಾಸನ(ಜು.24): ಜು. 26ರಂದು ಬೆಳಗ್ಗೆ 10ರಿಂದ ನಗರದ ಸರ್ಕಾರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ನಡೆಯಲಿದೆ. ಬೆಂಗಳೂರು, ಮೈಸೂರು ಮತ್ತು ಹಾಸನದ ಹೆಸರಾಂತ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ನಾನಾ ಹುದ್ದೆಗಳ ನೇಮಕಾತಿಗಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ.

8ನೇ ತರಗತಿ, ಎಸ್‌ಎಸ್‌ಎಲ್‌ಸಿ ಪಾಸ್‌, ಫೇಲು, ಪಿಯುಸಿ, ಪದವಿ, ಐಟಿಐ, ಡಿಪ್ಲೊಮೊ, ಸ್ನಾತಕೋತ್ತರ ಪದವಿ ಮತ್ತು ಎಂಬಿಎನಲ್ಲಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷ ವಯೋಮಿತಿಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಆಸಕ್ತ ನಿರುದ್ಯೋಗಿ ಯುವಕ-ಯುುವತಿಯರು ತಮ್ಮ ದಾಖಲಾತಿಯನ್ನು ಕಚೇರಿಗೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ದೂ: 08172-268374ಗೆ ಸಂಪರ್ಕಿಸಬಹುದು.

ಜಿಲ್ಲಾ ಪ್ರಾದೇಶಿಕ ಕೇಂದ್ರ:

ಕರ್ನಾಟಕ ರಾಜ್ಯ ಮುಕ್ತ ವಿವಿಯ, ಮುಕ್ತ ಗಂಗೋತ್ರಿ, ಮೈಸೂರು-06 ರ ಹಾಸನ ಪ್ರಾದೇಶಿಕ ಕೇಂದ್ರದಲ್ಲಿ ಜು.26ರಂದು ಬೆಳಗ್ಗೆ 11ಕ್ಕೆ ಪ್ರಾದೇಶಿಕ ಕೇಂದ್ರ, ಕರ್ನಾಟಕ ರಾಜ್ಯ ಮುಕ್ತ ವಿವಿಯ, ಎಸ್‌.ಎಂ. ಕೃಷ್ಣಾನಗರ, ಅರಸೀಕೆರೆ ರಸ್ತೆ, ಬಿ.ಟಿ. ಕೊಪ್ಪಲು, ಹಾಸನ ಇಲ್ಲಿ ಪದವಿ ಹೊಂದಿದವರಿಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಅಭ್ಯರ್ಥಿಗಳು ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ ಕಡ್ಡಾಯವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಈ ದೂ: 9482603060, 7760546404, 9844242644ಗೆ ಸಂಪರ್ಕಿಸಬಹುದು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ