Asianet Suvarna News Asianet Suvarna News

ಮೈಸೂರಲ್ಲಿ ಅನ್ನದಾತರ ಮಕ್ಕಳಿಗಾಗಿ ಉದ್ಯೋಗಮೇಳ : ಯಾವಾಗ..?

ಒಕ್ಕಲಿಗ ಯುವ ಬ್ರಿಗೇಡ್ ಹಾಗೂ ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ ವತಿಯಿಂದ ನ.19ರಂದು ಮೈಸೂರಿನ ಹೆಬ್ಬಾಳ ಇಂಡಸ್ಟ್ರಿಯಲ್‌ ಎಸ್ಟೇಟ್‌ನ ಇನ್ಫೋಸಿಸ್‌ ಬಳಿಯ ಲಕ್ಷ್ಮೀಕಾಂತ ದೇವಸ್ಥಾನ ಆವರಣದಲ್ಲಿ ‘ಅನ್ನದಾತರ ಮಕ್ಕಳಿಗಾಗಿ ಉದ್ಯೋಗ ಮೇಳ’ ಆಯೋಜಿಸಲಾಗಿದೆ.

Job fair for children of breadwinners in Mysore: When snr
Author
First Published Nov 3, 2023, 8:58 AM IST

 ಬೆಂಗಳೂರು :  ಒಕ್ಕಲಿಗ ಯುವ ಬ್ರಿಗೇಡ್ ಹಾಗೂ ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ ವತಿಯಿಂದ ನ.19ರಂದು ಮೈಸೂರಿನ ಹೆಬ್ಬಾಳ ಇಂಡಸ್ಟ್ರಿಯಲ್‌ ಎಸ್ಟೇಟ್‌ನ ಇನ್ಫೋಸಿಸ್‌ ಬಳಿಯ ಲಕ್ಷ್ಮೀಕಾಂತ ದೇವಸ್ಥಾನ ಆವರಣದಲ್ಲಿ ‘ಅನ್ನದಾತರ ಮಕ್ಕಳಿಗಾಗಿ ಉದ್ಯೋಗ ಮೇಳ’ ಆಯೋಜಿಸಲಾಗಿದೆ.

ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮೇಳ ನಡೆಯಲಿದೆ. ಆದಿಚುಂಚನಗಿರಿಯ ಡಾ। ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಮುಕ್ತಿದಾನಂದಜೀ ಮಹಾರಾಜ್‌ ಸಮ್ಮುಖದಲ್ಲಿ ಬೆಳಗ್ಗೆ 10ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಎಚ್‌.ಸಿ.ಕಿಶೋರ್‌ ಚಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದು, ಕಿದ್ವಾಯಿ ಮೆಮೋರಿಯಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಂಕೋಲಜಿ ಮಾಜಿ ನಿರ್ದೇಶಕ ಡಾ। ಸಿ.ರಾಮಚಂದ್ರ ಉದ್ಘಾಟನೆ ನೆರವೇರಿಸುವರು. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮುಖ್ಯ ಸಲಹೆಗಾರ ಅಭಿಚಿತ್‌ ಹಾಗೂ ಹಿರಿಯ ಪತ್ರಕರ್ತ ಚನ್ನೇಗೌಡ ಅವರು ಅತಿಥಿಯಾಗಿ ಆಗಮಿಸುವರು.

ಉದ್ಯೋಗ ಮೇಳ

ಉದ್ಯೋಗ ಮೇಳ ಸಂಪೂರ್ಣ ಉಚಿತವಾಗಿದ್ದು, ಪ್ರತಿ ಅಭ್ಯರ್ಥಿ ಐದು ಸಂಸ್ಥೆಗಳ ಸಂದರ್ಶನ ಎದುರಿಸಬಹುದು. ಎಸ್ಸೆಸ್ಸೆಲ್ಸಿ ಪಿಯುಸಿ ಸೇರಿ ಯಾವುದೇ ಪದವಿ, ಐಟಿಐ, ಡಿಪ್ಲೋಮಾ, ಎಂಜಿನಿಯರಿಂಗ್‌, ಎನ್‌ಟಿಟಿ, ಬಿಇಡಿ, ಎಂಇಡಿ ವಿದ್ಯಾರ್ಹತೆ ಪಡೆದಿರುವವರು ಪಾಲ್ಗೊಳ್ಳಬಹುದು. ಅಭ್ಯರ್ಥಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದ್ದು, ಹೆಚ್ಚಿನ ಮಾಹಿತಿಗೆ ಮೋಹನ್‌ 96865 64192, ರವಿಚಂದ್ರ 98869 43810, ಕಿರಣಕುಮಾರ್‌ 86605 69173 ಸಂಪರ್ಕಿಸಬಹುದು.

Follow Us:
Download App:
  • android
  • ios