Hassan: ಸರ್ಕಾರದ ಖಜಾನೆಯಿಂದ ದೇಗುಲಕ್ಕೆ ಬೇಲೂರು ಚನ್ನಕೇಶವ ಸ್ವಾಮಿ ಆಭರಣ

*  ವಿಶ್ವವಿಖ್ಯಾತ ಬೇಲೂರು ಚನ್ನಕೇಶವ ಸ್ವಾಮಿ ಜಾತ್ರೆ 
*  ಹಿಂದಿನ ಸಂಪ್ರದಾಯದಂತೆ ದೇವಾಲಯದ ಉತ್ಸವಗಳ ಆಚರಣೆ
*  18 ದಿನಗಳ ಕಾಲ ನಡೆಯಲಿರುವ ಪೂಜಾ ವಿಧಿವಿಧಾನಗಳು

Jewelry from the Government Treasury to the Belur Chennakeshava Temple in Hassan grg

ವರದಿ- ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್. ಹಾಸನ

ಹಾಸನ(ಏ.02): ವಿಶ್ವವಿಖ್ಯಾತ ಬೇಲೂರು ಚನ್ನಕೇಶವ(Belur Chennakeshava) ಸ್ವಾಮಿ ಜಾತ್ರೆ ಮತ್ತು ರಥೋತ್ಸವಕಕ್ಕೆ(Fair) ದಿನ ಗಣನೆ ಆರಂಭವಾಗಿದೆ. ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ ಹಾಗೂ ವಿಶೇಷ ಪೂಜಾ ವಿಧಿ ವಿಧಾನಗಳು ಪ್ರಾರಂಭವಾಗುವ ಹಿನ್ನಲೆಯಲ್ಲಿ ಶ್ರೀ ಚನ್ನಕೇಶವ, ಸೌಮ್ಯನಾಯಕಿ, ರಂಗನಾಯಕಿ ಅಮ್ಮನವರಿಗೆ ಧರಿಸುವ ಒಡವೆಗಳನ್ನು ತಹಶಿಲ್ದಾರ್ ಕಚೇರಿಯ ಖಜಾನೆಯಿಂದ ವಿಶೇಷ ಪೂಜೆಯೊಂದಿಗೆ ಪಲ್ಲಕ್ಕಿ ಅಡ್ಡೆಯ ಮೂಲಕ ದೇವಾಲಯಕ್ಕೆ(Temple) ತರಲಾಯಿತು.

Jewelry from the Government Treasury to the Belur Chennakeshava Temple in Hassan grg

ದೇಗುಲದ ಪ್ರಧಾನ ಅರ್ಚಕರಾದ ಕೃಷ್ಣಸ್ವಾಮಿ ಭಟ್ಟರು, ಶ್ರೀನಿವಾಸ ಭಟ್, ಪೂಜೆ ಸಲ್ಲಿಸಿ ಶಾಸಕ ಲಿಂಗೇಶ್ ದೇವಾಲಯದ ಕಾರ್ಯನಿರ್ವಹಣಾ ಅಧಿಕಾರಿ ವಿದ್ಯುಲತಾ ಅವರ ಸಮ್ಮುಖದಲ್ಲಿ ಆಭರಣ(Jewelry) ಪೆಟ್ಟಿಗೆ ತೆರೆಯಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಕೆ‌.ಎಸ್ ಲಿಂಗೇಶ್ ಅವರು, ಯುಗಾದಿ ಹಬ್ಬದಿಂದ 15 ದಿನಗಳ ಕಾಲ ಚನ್ನಕೇಶವ ಸ್ವಾಮಿ ಜಾತ್ರಾಮಹೋತ್ಸವ ವಿಜ್ರಂಭಣೆಯಿಂದ ಜರುಗುವುದರಿಂದ ಸ್ವರ್ಣಾಲಂಕಾರದೊಂದಿಗೆ ಶ್ರೀ ಚನ್ನಕೇಶವ ಸ್ವಾಮಿ ಹಾಗೂ ಸೌಮ್ಯನಾಯಕಿ ಹಾಗೂ ರಂಗನಾಯಕಿ ಅಮ್ಮನವರಿಗೆ ಬಂಗಾರದೊಡುವೆ ಹಾಕಿ ಪೂಜೆ ಸಲ್ಲಿಸಲಾಗುವುದು.

ಬೇಲೂರು : 1 ತಿಂಗಳು ಚನ್ನಕೇಶವ ದೇಗುಲ ಬಾಗಿಲು ಬಂದ್‌

ಹಿಂದಿನ ಸಂಪ್ರದಾಯದಂತೆ(Tradition) ದೇವಾಲಯದ ಉತ್ಸವಗಳನ್ನು ಆಚರಿಸಲಾಗುವುದು. ಇದರಲ್ಲಿ ಯಾವುದೇ ರೀತಿಯ ಬದಲಾವಣೆಗಳಿರುವುದಿಲ್ಲ. ಅಲ್ಲದೆ ಈ ಬಾರಿ ಹೆಚ್ಚು ಭಕ್ತರು(Devotees) ಆಗಮಿಸುವ ಹಿನ್ನಲೆಯಲ್ಲಿ ಬಂದಂತ ಎಲ್ಲ ಭಕ್ತರಿಗೆ ಪ್ರಸಾದದ ಪಾನಕದ ವ್ಯವಸ್ಥೆಯನ್ನು ಎಲ್ಲಾ ಸಂಘ ಸಂಸ್ಥೆಗಳ ಜೊತೆಗೂಡಿ ಮಾಡಲಿದ್ದು ಇದಕ್ಕೆ ಎಲ್ಲ ಭಕ್ತರ ಹಾಗೂ ದೇವಾಲಯದ ಆಡಳಿತ ಮಂಡಳಿ ಸಹಕಾರ ಮುಖ್ಯ ಎಂದರು. 

ಬೇಲೂರು ಚನ್ನಕೇಶವ ದೇಗುಲದಿಂದ ರಾತ್ರೋರಾತ್ರಿ ಗಂಟು ಮೂಟೆ ಕಟ್ಟಿದ ತೆಲುಗು ಚಿತ್ರತಂಡ

ದೇಗುಲದ ಕಾರ್ಯನಿರ್ವಹಣಾಧಿಕಾರಿ ವಿದ್ಯುಲತಾ ಮಾತನಾಡಿ, 2022 ನೇ ಸಾಲಿನ ಜಾತ್ರೆ ಮತ್ತು  ರಥೋತ್ಸವದ ಅಂಗವಾಗಿ ಖಜಾನೆಯಿಂದ ದೇವರ ಆಭರಣಗಳನ್ನು ತಂದು ಎಲ್ಲಾ ರೀತಿಯ ಪೂಜೆ ವಿಧಾನವನ್ನು ಮಾಡುವ ಮೂಲಕ ನಾಡಗೌಡರ ಹಾಗೂ ಪಟೇಲರ ಅಡ್ಡೆಗಾರರ ಸಮ್ಮುಖದಲ್ಲಿ ಪ್ರಧಾನ ಅರ್ಚಕರಿಗೆ ಒಡವೆಗಳನ್ನು ಹಸ್ತಾಂತರಿಸಿದ್ದು ಇಂದಿನಿಂದ 18 ದಿನಗಳ ಕಾಲ ಪೂಜಾ ವಿಧಿವಿಧಾನಗಳು ನಡೆಯಲಿವೆ ಎಂದರು. ಏಪ್ರಿಲ್ 5 ರಿಂದ 18 ರವರೆಗೆ ವಿಶ್ವವಿಖ್ಯಾತ ಬೇಲೂರು ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವ ಜರುಗಲಿದ್ದು, 13 ಮತ್ತು 14 ರಂದು ರಥೋತ್ಸವ ನಡೆಯಲಿವೆ.

Jewelry from the Government Treasury to the Belur Chennakeshava Temple in Hassan grg

ಬೇಲೂರು ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ!

ಬೇಲೂರಿನ ಚನ್ನಕೇಶವ ಸ್ವಾಮಿ ರಥೋತ್ಸವ ಸಂದರ್ಭದಲ್ಲಿ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡದಂತೆ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಹಿಂದೂ ಸಂಘಟನೆ ಮುಖಂಡ ಸಂತೋಷ್ ಕೆಂಚಾಂಬ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.

ಏ.5ರಿಂದ 18 ರವರೆಗೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ವಹಿವಾಟು ನಡೆಸಲು ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕು. ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ಆದೇಶ ವಿರೋಧಿಸಿ ರಾಜ್ಯದಾದ್ಯಂತ ಮುಸ್ಲಿಮರು ಅಂಗಡಿ ಬಂದ್‌ ಮಾಡಿದ್ದರು. ಆದ್ದರಿಂದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನ, ಜಾತ್ರಾ ಮಹೋತ್ಸವ, ರಥೋತ್ಸವ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರಿಗೆ ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರು ತಿಳಿಸಿದರು.
 

Latest Videos
Follow Us:
Download App:
  • android
  • ios