ಬೇಲೂರು ಚನ್ನಕೇಶವ ದೇಗುಲದಿಂದ ರಾತ್ರೋರಾತ್ರಿ ಗಂಟು ಮೂಟೆ ಕಟ್ಟಿದ ತೆಲುಗು ಚಿತ್ರತಂಡ
ವೈಷ್ಣವ ದೇವಾಲಯವಾಗಿರುವ ಚನ್ನಕೇಶವ ದೇಗುಲದಲ್ಲಿ ಚಿತ್ರತಂಡವು ಶಿವನ ವಿಗ್ರಹವನ್ನು ಪ್ರತಿಷ್ಠಾಪಿಸಿ ಚಿತ್ರೀಕರಣ ನಡೆಸುತ್ತಿತ್ತು.
ಹಾಸನ (ಫೆ.18): ಬೇಲೂರು ಚನ್ನಕೇಶವ ದೇಗುಲದಲ್ಲಿ ನಿಯಮ ಉಲ್ಲಂಘಿಸಿ ಚಿತ್ರೀಕರಣ ನಡೆಸಿದ್ದ ತೆಲುಗು ಚಿತ್ರತಂಡವು ಶೂಟಿಂಗ್ ಸ್ಥಗಿತಗೊಳಿಸಿ ವಾಪಾಸಾಗಿದೆ.
ನಿಯಮಗಳನ್ನು ಉಲ್ಲಂಘಿಸಿ, ಭಕ್ತರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ನಟ ಅಲ್ಲು ಅರ್ಜುನ್ ಅಭಿನಯದ ‘ಡಿಜೆ’ ಚಿತ್ರಕ್ಕೆ ಶೂಟಿಂಗ್ ನಡೆಸಿದ ಬಗ್ಗೆ ನಿನ್ನೆ ಸುವರ್ಣ ನ್ಯೂಸ್ ವರದಿ ಮಾಡಿತ್ತು.
ವೈಷ್ಣವ ದೇವಾಲಯವಾಗಿರುವ ಚನ್ನಕೇಶವ ದೇಗುಲದಲ್ಲಿ ಚಿತ್ರತಂಡವು ಶಿವನ ವಿಗ್ರಹವನ್ನು ಪ್ರತಿಷ್ಠಾಪಿಸಿ ಚಿತ್ರೀಕರಣ ನಡೆಸುತ್ತಿತ್ತು.
ಪುರಾತತ್ವ ಇಲಾಖೆ ಆದೇಶದ ಹಿನ್ನೆಲೆಯಲ್ಲಿ ರಾತ್ರಿಯೇ ಶೂಟಿಂಗ್ ಸ್ಥಗಿತಗೊಳಿಸಿ ತೆಲುಗು ಚಿತ್ರತಂಡ ಹೊರಟು ಹೋಗಿದೆ.
ಚಿತ್ರೀಕರಣ ಸ್ಥಗಿತವಾಗಿದ್ದರಿಂದ ಪ್ರವಾಸಿಗರಿಗೆ ದೇಗುಲ ವೀಕ್ಷಿಸಲು ಮುಕ್ತವಾತಾವರಣ ದೊರಕಿದಂತಾಗಿದೆ.