ಚಿಕ್ಕಮಗಳೂರು: ಹೆಬ್ಬಾಳೆ ಸೇತುವೆ ಮೇಲೆ ಜೀಪ್ ಗ್ರೇಟ್ ಎಸ್ಕೇಪ್, ಮೊಬೈಲ್‌ನಲ್ಲಿ ದೃಶ್ಯ ಸೆರೆ..!
ಪಶ್ವಿಮ ಘಟ್ಟಗಳ ಸಾಲಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭದ್ರಾ ನೀರು ಹೆಬ್ಬಾಳ ಸೇತುವೆ ಮೇಲೆ ಎರಡು ಅಡಿ ಹರಿಯುತ್ತಿದೆ. ಹೀಗಾಗಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಅದ್ರೆ, ಜೀಪ್ ಚಾಲಕ ಬ್ಯಾರಿಕೇಡ್‌ಗೂ ಡೋಂಟ್ ಕೇರ್ ಎಂದು ಸೇತುವೆ ಮೇಲೆ ಜೀಪ್ ಓಡಿಸಿದ್ದಾನೆ.
ಚಿಕ್ಕಮಗಳೂರು(ಜು.25): ಹೆಬ್ಬಾಳೆ ಸೇತುವೆ ಮೇಲೆ ಜೀಪ್ ಗ್ರೇಟ್ ಎಸ್ಕೇಪ್ ಆದ ಘಟನೆ ಜಿಲ್ಲೆಯ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮೇಲೆ ನಡೆದಿದೆ. ಜಸ್ಟ್ ಮಿಸ್ ಆಗಿದ್ರು ಜೀಪ್ ಭದ್ರಾ ನದಿಯಲ್ಲಿ ತೇಲಿ ಹೋಗ್ತಿತ್ತು. ಗ್ರೇಟ್ ಎಸ್ಕೇಪ್ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಪಶ್ವಿಮ ಘಟ್ಟಗಳ ಸಾಲಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭದ್ರಾ ನೀರು ಹೆಬ್ಬಾಳ ಸೇತುವೆ ಮೇಲೆ ಎರಡು ಅಡಿ ಹರಿಯುತ್ತಿದೆ. ಹೀಗಾಗಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಅದ್ರೆ, ಜೀಪ್ ಚಾಲಕ ಬ್ಯಾರಿಕೇಡ್‌ಗೂ ಡೋಂಟ್ ಕೇರ್ ಎಂದು ಸೇತುವೆ ಮೇಲೆ ಜೀಪ್ ಓಡಿಸಿದ್ದಾನೆ.
ಉತ್ತರಕನ್ನಡ: ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆ
ಅಪಾಯವಿದ್ದರೂ ಸೇತುವೆ ಮೇಲೆ ಜೀಪ್ ಓಡಿಸಿದ್ದಾನೆ. ಹೆಬ್ಬಾಳೆ ಸೇತುವೆ ಮೇಲೆ ಸಂಚಾರ ಬಂದ್ ಮಾಡಿದ್ರು ಜೀಪ್ ಚಾಲಕ ಕ್ಯಾರೇ ಎಂದಿಲ್ಲ. ಬ್ಯಾರಿಕೇಡ್ ಹಾಕಿದ್ರು ಅದರ ಪಕ್ಕದಲ್ಲೇ ಸೇತುವೆ ಮೇಲೆ ತೆರಳಿದ್ದಾನೆ.