Asianet Suvarna News Asianet Suvarna News

ಜೆಡಿಎಸ್‌ಗೆ ದ್ರೋಹ ಆರೋಪ : ಶಾಸಕರೋರ್ವರ ರಾಜೀನಾಮೆಗೆ ಒತ್ತಡ

  • ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಕೆ.ಆರ್‌ ರಮೇಶ್ ಕುಮಾರ್‌ ಪರ ಹೇಳಿಕೆ 
  • ಶಾಸಕ ಕೆ. ಶ್ರೀನಿವಾಸ ಗೌಡ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪ
  • ಶಾಸಕ ಸ್ಥಾನಕ್ಕೆ ಶ್ರೀನಿವಾಸ ಗೌಡ ರಾಜೀನಾಮೆ ನೀಡಲು ಆಗ್ರಹ
JDS Workers Slams kolar MLA Shrinivas Gowda snr
Author
Bengaluru, First Published Aug 6, 2021, 3:52 PM IST
  • Facebook
  • Twitter
  • Whatsapp

 ಕೋಲಾರ (ಆ.06): ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಕೆ.ಆರ್‌ ರಮೇಶ್ ಕುಮಾರ್‌ ಪರ ಹೇಳಿಕೆ ನೀಡುವ ಮೂಲ ಶಾಸಕ ಕೆ. ಶ್ರೀನಿವಾಸ ಗೌಡ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ವಿ ಶಿವಾರೆಡ್ಡಿ ಆರೋಪಿಸಿದರು. 

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಶ್ರೀನಿವಾಸ ಗೌಡ  ಅವರನ್ನು ಕೋಲಾರ ಕ್ಷೇತ್ರದ ಮತದಾರರು 40 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರನ್ನು ಗೆಲ್ಲಿಸಿ ಎಂದು ಕರೆ ನೀಡುವ ಮೂಲಕ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ ಎಂದು ಆಪಾದಿಸಿದರು. 

ನನ್ನ ಗೆಲ್ಲಿಸಿದ್ದೆ ಅವರು :ರಮೇಶ್ ಕುಮಾರ್ ಹಾಡಿ ಹೊಗಳಿದ ಜೆಡಿಎಸ್ ಶಾಸಕ

ಶ್ರೀನಿವಾಸ ಗೌಡರು ತಮ್ಮ ಗೆಲುವಿಗೆ ರಮೇಶ್ ಕುಮಾರ್ ಕಾರಣ ಎನ್ನುತ್ತಾ ಜೆಡಿಎಸ್ ಕಾರ್ಯಕರ್ತರ ಶ್ರಮವನ್ನು ಪಾತಾಳಕ್ಕೆ ತುಳಿದಿದ್ದಾರೆ. 
ಅವರ ನಡೆಯ ಬಗ್ಗೆ ಪಕ್ಷದ ವರಿಷ್ಠದ ಮಟ್ಟದಲ್ಲಿ ಚರ್ಚೆ ಆಗಿದೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ದೆಹಲಿಯಲ್ಲಿದ್ದಾರೆ. ವಾಪಸ್ ಆದ ನಂತರ ಚರ್ಚೆ ಮಾಡಿ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ ಎಂದರು. 

ಇದೇ ವೇಳೆ ಶಾಸಕ ಶ್ರೀನಿವಾಸ ಗೌಡ ರಾಜೀನಾಮೆ ನೀಡಬೇಕು ಎಂದು ಜಿಲ್ಲೆಯ ಹಲವು ಜೆಡಿಎಸ್ ಮುಖಂಡರು ಆಗ್ರಹಿಸಿದರು. 

Follow Us:
Download App:
  • android
  • ios